ವಿದ್ಯಾರ್ಥಿಗಳು ಪರೀಕ್ಷಾ ಚರ್ಚೆ ಬಯಸಿದರೆ, ಮೋದಿ ಆಟಿಕೆ ಬಗ್ಗೆ ಮಾತನಾಡಿದ್ದಾರೆ: ರಾಹುಲ್‌ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಮನ್‌ ಕೀ ಬಾತ್‌ನ 68ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಕರ್ನಾಟಕದ ಚೆನ್ನಪಟ್ಟಣ, ಆಂಧ್ರದ ಕೊಂಡಪಲ್ಲಿ, ತಮಿಳುಣಾಡಿನ ತಂಜಾವೂರು ಆಟಿಕೆ ಸಾಮಾನುಗಳು ಜಗತ್ಪ್ರಸಿದ್ಧವಾಗಿದ್ದು, ಇವುಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದ್ದು, ಅವರ ಮಾತಿಗೆ ಕಾಂಗ್ರೆಸ್‌ ತೀವ್ರ ಟೀಕೆ ವ್ಯಕ್ತಪಡಿಸಿದೆ,

ಕಳೆದ ಒಂದು ತಿಂಗಳಿಂದ ದೇಶದಲ್ಲಿ ಪರೀಕ್ಷೆಗಳ ಬಗೆಗೆ ನಾನಾ ರೀತಿಯ ಚರ್ಚೆಗಳು, ಅಭಿಪ್ರಾಯಗಳು ವ್ಯಕ್ತವಾಗಿದ್ದು, ಪರೀಕ್ಷೆಗಳ ಬಗ್ಗೆ ಪ್ರಧಾನಿ ಮೋದಿ ಒಂದೂ ಮಾತು ಆಡಿಲ್ಲ ಎಂದು ಕಾಂಗ್ರೆಸ್ ಮುಖಂಡರು‌ ಸೇರಿದಂತೆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲ್ಲದೆ, ಟ್ವಿಟ್ಟರ್‌ನಲ್ಲಿ #Mann_Ki_Nahi_Students_Ki_Baat ಎಂಬ ಹ್ಯಾಸ್‌ ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ.

ಮೋದಿಯವರ ಮನ್‌ ಕೀ ಬಾತ್ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ಗಾಂಧಿ, JEE ಹಾಗೂ NEET ವಿದ್ಯಾರ್ಥಿಗಳು ಇಂದಿನ ಮನ್ ಕಿ ಬಾತ್‌ನಲ್ಲಿ ಪರೀಕ್ಷಾ ಪೇ ಚರ್ಚಾ(ಪರೀಕ್ಷೆ ಮೇಲೆ ಚರ್ಚೆ) ಬಯಸಿದರೆ, ಮೋದಿ ಖಿಲೋನೆ ಪೇ ಚರ್ಚಾ(ಆಟಿಕೆ ಮೇಲೆ ಚರ್ಚೆ) ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಫೋಷಕರು ಸೇರಿದಂತೆ ಇಡೀ ದೇಶದ ಜನರು, ಪ್ರಧಾನಿ ಮೋದಿ JEE ಹಾಗೂ NEET ಮೇಲೆ ಚರ್ಚೆ ಮಾಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಮೋದಿಯವರು ಆಟಿಕೆಗಳ ಉತ್ಪಾದನೆ ಕುರಿತು ಮಾತನಾಡಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದರು ಎಂದು ರಾಹುಲ್ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಇಂದಿನ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶೀಯವಾಗಿ ಆಟಿಕೆಗಳ ಉತ್ಪಾದನೆ ಹಾಗೂ ರಫ್ತಿನ ಕುರಿತು ಚರ್ಚೆ ಮಾಡಿದರು. ಜಾಗತಿಕ ಆಟಿಕೆ ವ್ಯಾಪಾರ ಸುಮಾರು 7 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಭಾರತದ ಪಾಲು ಅತ್ಯಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ನಾವು ದೇಶೀಯ ಆಟಿಕೆ ವಸ್ತುಗಳ ಉತ್ಪಾದನೆಯತ್ತ ಗಮನಹರಿಸಬೇಕಿದೆ ಎಂದು ಹೇಳಿದರು.



ಇದನ್ನೂ ಓದಿ: ಕರ್ನಾಟಕದ ಚೆನ್ನಪಟ್ಟಣದ ಆಟಿಕೆಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಬೇಕು: ಮನ್‌ ಕಿ ಬಾತ್‌ನಲ್ಲಿ ಮೋದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights