ಐದು ತಿಂಗಳ ನಂತರ ಪ್ರವಾಸಿಗರಿಗೆ ತೆರೆಯಲಿದೆ ನಂದಿ ಬೆಟ್ಟ!

ವಿಶ್ವವಿಖ್ಯಾತ ನಂದಿಗಿರಿಧಾಮ, ಪ್ರವಾಸಿಗರ ನೆಚ್ಚಿನ ತಾಣ ಎಂದೇ ಖ್ಯಾತಿ ಪಡೆದಿರುವ ನಂದಿ ಬೆಟ್ಟ ಇದೇ 7ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಕೊರೊನಾ ಕಾರಣದಿಂದಾಗಿ ಮಾರ್ಚ್‌ ತಿಂಗಳ ಅಂತ್ಯದಲ್ಲಿ ದೇಶದ್ಯಂತ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರವಾಸಿಗರಿಗೆ ನಿರ್ಭಂದಿಸಲ್ಪಟ್ಟಿದ್ದ ನಂದಿ ಬೆಟ್ಟ, ಈಗ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ.

ಅತೀ ಹೆಚ್ಚು ಪ್ರೇಮಿಗಳ ಭೇಟಿ ಕೊಡುವ ನಂದಿಬೆಟ್ಟ, ಸೆ . 7ರಿಂದ ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ತೆರೆಯಲಿದೆ.

Cable cars can do wonders for Nandi Hills' | Deccan Herald

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿಬೆಟ್ಟ, ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 45 ಕಿ.ಮೀ ದೂರದಲ್ಲಿದೆ. ಅಲ್ಲದೆ, ಟಿಪ್ಪು ಸುಲ್ತಾನ್‌ ಕಾಲದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುತ್ತಿದ್ದ, ಟಿಪ್ಪು ಡ್ರಾಪ್‌ ಎಂದೇ ಕರೆಲ್ಪಡುವ ಸ್ಥಳವೂ ನಂದಿ ಬೆಟ್ಟದಲ್ಲಿದೆ.

ನಂದಿ ಬೆಟ್ಟದ ಹೆಸರಿನ ಮೂಲದ ಬಗ್ಗೆ ಹಲವಾರು ಕಥೆಗಳಿವೆ. ಚೋಳರ ಕಾಲದಲ್ಲಿ, ನಂದಿ ಬೆಟ್ಟವನ್ನು ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು, ಅದರ ಅರ್ಥ ಸಂತೋಷದಿಂದ ಕೂಡಿದ ಬೆಟ್ಟ ಎಂದಾಗಿತ್ತು. ಮತ್ತೊಂದು ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು 1000 ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ ಮಾಡಿದ ನಂತರ ನಂದಿಬೆಟ್ಟಕ್ಕೆ ಹೇರಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ.


ಇದನ್ನೂ ಓದಿ: ಒಂದೇ ದಿನಕ್ಕೆ ಭಾರತದಲ್ಲಿ 83,500 ಕ್ಕೂ ಹೆಚ್ಚು ಕೊರೊನಾ ಕೇಸ್ : 1,000 ಕ್ಕೂ ಹೆಚ್ಚು ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights