FACT CHECK | ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ ಬಗ್ಗೆ ಪ್ರಶಂಸೆ ಲಭಿಸಿದೆ ಎಂದು ‘ದಿ ಡೈಲಿ ಟೆಲಿಗ್ರಾಫ್‌’ ಪತ್ರಿಕೆ ವರದಿ ಮಾಡಿದೆಯೇ?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿತು. ಪ್ರಸ್ತುತ ಎರಡೂ ದೇಶಗಳಲ್ಲಿ ಕದನ ವಿರಾಮ ಮುಂದುವರೆದಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮಗಳಲ್ಲಿ ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್‌ಎನ್‌ನ ಲೋಗೋ ಹೊಂದಿರುವ ಇನ್ಫೋಗ್ರಾಫಿಕ್  ಬಳಸಿಕೊಂಡು ಪಾಕಿಸ್ತಾನಿ ಸಶಸ್ತ್ರ ಪಡೆಗಳಿಗೆ ಅಂತರರಾಷ್ಟ್ರೀಯ ಪ್ರಶಂಸೆ ಲಭಿಸುತ್ತಿದೆ ಎಂದು ಹೇಳುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

PAK LIES

ಬ್ರಿಟಿಷ್ ಪತ್ರಿಕೆ ದಿ ಡೈಲಿ ಟೆಲಿಗ್ರಾಫ್‌ ಪಾಕಿಸ್ತಾನ ವಾಯುಪಡೆಯನ್ನು “ಆಕಾಶದ ನಿರ್ವಿವಾದ ರಾಜ” ಎಂದು ಕರೆದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

PAK LIES

ಮತ್ತೊಂದು ವೈರಲ್ ಚಿತ್ರವು ಸಿಎನ್‌ಎನ್ ಲೋಗೋವನ್ನು ಒಳಗೊಂಡ ಇನ್ಫೋಗ್ರಾಫಿಕ್ ಆಗಿದ್ದು, ಭಾರತವು ಪಾಕಿಸ್ತಾನಕ್ಕಿಂತ ಗಮನಾರ್ಹವಾಗಿ ಹೆಚ್ಚಿನ ಮಿಲಿಟರಿ ನಷ್ಟವನ್ನು ಅನುಭವಿಸಿದೆ ಎಂದು ಹೇಳಿಕೊಂಡಿದೆ. ಭಾರತ ಆರು ಜೆಟ್‌ಗಳು ಮತ್ತು 553 ಡ್ರೋನ್‌ಗಳನ್ನು ಕಳೆದುಕೊಂಡಿದೆ ಎಂದು ಅದು ಹೇಳಿಕೊಂಡರೆ, ಪಾಕಿಸ್ತಾನವು ಶೂನ್ಯ ಜೆಟ್‌ಗಳು ಮತ್ತು 78 ಡ್ರೋನ್‌ಗಳನ್ನು ಕಳೆದುಕೊಂಡಿದೆ ಎಂದು ಅದು ಹೇಳಿಕೊಂಡಿದೆ. ಅಂತಹ ಎರಡು ಪೋಸ್ಟ್‌ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) ಸತ್ಯ ಪರಿಶೀಲಿಸಿದೆ. ಪಿಐಬಿಯ ಫ್ಯಾಕ್ಟ್ ಚೆಕ್‌ನಲ್ಲಿ, ಈ ಇನ್ಫೋಗ್ರಾಫಿಕ್ ನಕಲಿ ಎಂದು ಖಚಿತವಾಗಿ ಕಂಡುಬಂದಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಸುದ್ದಿಗಳನ್ನು ಹರಡುವುದು ಪ್ರಚಾರ ಮಾಡುವುದರ ಭಾಗವಾಗಿದೆ ಎಂದು ಪಿಐಬಿ ಹೇಳಿದೆ. ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್ಎನ್ ಈ ರೀತಿಯ ಯಾವುದೇ ಸ್ಟೋರಿ ಅಥವಾ ಇನ್ಫೋಗ್ರಾಫಿಕ್ ಅನ್ನು ಎಂದಿಗೂ ಪ್ರಸಾರ ಮಾಡಿಲ್ಲ. ಇದರೊಂದಿಗೆ, ಪಿಐಬಿ ಫ್ಯಾಕ್ಟ್ ಚೆಕ್ ಇಂಡಿಯಾ ಫೈಟ್ಸ್ ಪ್ರೊಪಗಂಡಾ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸಿಎನ್‌ಎನ್ ಅನ್ನು ಉಲ್ಲೇಖಿಸುವ ಇನ್ಫೋಗ್ರಾಫಿಕ್ ಭಾರತ-ಪಾಕಿಸ್ತಾನ ಸಂಘರ್ಷದ ಕೆಲವು ಅಂಕಿಅಂಶಗಳನ್ನು ತೋರಿಸುತ್ತದೆ. ಈ ಅಂಕಿಅಂಶಗಳು ಸಂಪೂರ್ಣವಾಗಿ ನಕಲಿ ಆಗಿದೆ.

  • ಈ ನಕಲಿ ಅಂಕಿಅಂಶಗಳಲ್ಲಿ ಪಾಕಿಸ್ತಾನದ 0 ಜೆಟ್‌ಗಳು ಹಾನಿಗೊಳಗಾಗಿವೆ ಎಂದು ಹೇಳಲಾಗಿತ್ತು. ಭಾರತದ 6 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆಯಂತೆ.
  • ಹಾಗೆಯೆ ಪಾಕಿಸ್ತಾನದ ಮೂರು ವಾಯುನೆಲೆಗಳು ಹಾನಿಗೊಳಗಾಗಿವೆ. ಭಾರತದ 11 ವಾಯುನೆಲೆಗಳು ನೆಲಸಮಗೊಂಡಿವೆ.
  • ಪಾಕಿಸ್ತಾನದ 78 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಭಾರತದ 553 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
  • ಪಾಕಿಸ್ತಾನದ ಒಬ್ಬ ಸೈನಿಕನನ್ನು ಕೊಲ್ಲಲಾಗಿದೆ. ಭಾರತದ 21 ಸೈನಿಕರು ಹುತಾತ್ಮರಾಗಿದ್ದಾರೆ.
  • ಪಾಕಿಸ್ತಾನದ 13 ನಾಗರಿಕರು ಸಾವನ್ನಪ್ಪಿದ್ದಾರೆ. 19 ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ.
  • 0 ಪಾಕಿಸ್ತಾನಿ ಟ್ಯಾಂಕ್‌ಗಳು ಹಾನಿಗೊಳಗಾದವು. ಭಾರತದ 0 ಟ್ಯಾಂಕ್‌ಗಳು ಹಾನಿಗೊಳಗಾಗಿವೆ.
  • ಪಾಕಿಸ್ತಾನದ ಒಂದೇ ಒಂದು ವಾಯು ರಕ್ಷಣಾ ವ್ಯವಸ್ಥೆಗೂ ಹಾನಿಯಾಗಿಲ್ಲ. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದು ಹಾನಿಗೊಳಗಾಗಿದೆ ಎಂದು ವೈರಲ್ ಪೋಸ್ಟ್​ನಲ್ಲಿದೆ.

ಸಿಎನ್‌ಎನ್‌ನ ಏಷ್ಯಾ ಪೆಸಿಫಿಕ್ ಸಾರ್ವಜನಿಕ ಸಂಪರ್ಕ ನಿರ್ದೇಶಕ ಡೆಸ್ಮಂಡ್ ಚುಂಗ್, ಸಿಎನ್‌ಎನ್ ಅಂತಹ ಯಾವುದೇ ಇನ್ಫೋಗ್ರಾಫಿಕ್ ಅನ್ನು ಪ್ರಕಟಿಸಿಲ್ಲ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್‌ಗೆ ಇಮೇಲ್ ಮೂಲಕ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಇನ್ಫೋಗ್ರಾಫಿಕ್ ಸಂಪೂರ್ಣವಾಗಿ ನಕಲಿ. ಇದನ್ನು ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್ಎನ್ ಪ್ರಸಾರ ಮಾಡಿಲ್ಲ. ಇದನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ರಚಿಸಿದ್ದಾರೆ. ಅದರಲ್ಲಿ ಉಲ್ಲೇಖಿಸಲಾದ ಎಲ್ಲಾ ಅಂಕಿಅಂಶಗಳು ಸಂಪೂರ್ಣ ನಕಲಿ ಎಂದು ಖಚಿತವಾಗಿ ಹೇಳಬಹುದು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಮ್ಮ 27 ನೇ ವಯಸ್ಸಿಗೆ ಹುತಾತ್ಮರಾದ ಲೆಫ್ಟಿನೆಂಟ್ ಕಿರಣ್ ಶೇಖಾವತ್! ಕಾರಣ ಏನು ಗೊತ್ತಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights