ಬೆಂಗಳೂರು: ರಸ್ತೆಯಲ್ಲಿ ಭತ್ತ ನಾಟಿ; ರಸ್ತೆಗುಂಡಿಯಲ್ಲಿ 20 ರೂಗೆ ಬೋಟ್‌ ರೈಡ್‌ ಪ್ರತಿಭಟನೆ!

ಉದ್ಯೋಗಕ್ಕಾಗಿ ಜನರನ್ನು ಆಕರ್ಷಿಸುತ್ತಿದ್ದ ರಾಜಧಾನಿ ಬೆಂಗಳೂರು, ಇತ್ತೀಚೆಗೆ ಆಡಳಿತ ವೈಫಲ್ಯಗಳಿಂದ ಸಮಸ್ಯೆಗಳ ಆಗರವಾಗಿ ಮಾರ್ಪಡುತ್ತಿದೆ. ಕಸ, ಕೊಳಚೆ, ಗುಂಡಿಬಿದ್ದ ರಸ್ತೆಗಳು ಎಲ್ಲೆಂದರಲ್ಲಿ ಕಾಣುತ್ತಿವೆ. ಈ ಸಮಸ್ಯೆಗಳಿಂದ ಬೇಸತ್ತಿರುವ ಜನರು ವಿಭಿನ್ನ ರೀತಿಯ ಪ್ರತಿಭಟನೆಗೆ ಇಳಿದಿದ್ದಾರೆ.

ಈಗ ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗುಂಡಿಗಳಿಗೆ ನೀರು ತುಂಬಿ ಕೆರೆಗಳಂತೆ ಕಾಣಿಸುತ್ತಿವೆ. ಇದರಿಂದ ಕಂಗೆಟ್ಟಿರುವ ವಾಹನ ಸವಾರರಂತೂ ಬಿಬಿಎಂಪಿಗೆ ಇಡಿ ಶಾಪ ಹಾಕುತ್ತಲೇ ಇದ್ದಾರೆ. ಈ ನಡುವೆ, ಕೆಲವು ಪ್ರದೇಶಗಳ ನಿವಾಸಿಗರು, ಮಳೆ ಸುರಿದು ಕೊಚ್ಚೆ ನೀರು ತುಂಬಿದ್ದ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ಪ್ರತಿಭಟಿಸಿದ್ದಾರೆ.

ಮಾತ್ರವಲ್ಲದೆ, 20 ರೂ. ಗಳಿಗೆ ಈ ಕೊಚ್ಚೆ ನೀರಿನ ಗುಂಡಿಗಳಲ್ಲಿ ತೆಪ್ಪವನ್ನೂ ಓಡಿಸಿದ್ದಾರೆ.

ಕನಕಪುರ ರಸ್ತೆ ಬಳಿಯ ಅಂಜನಾಪುರದಲ್ಲಿ(ವಾರ್ಡ್ ಸಂಖ್ಯೆ 196) ಈ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿದೆ. ಬಿಬಿಎಂಪಿ ಹಾಗೂ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರ, ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಜನರು, ಇನ್ನಾದರೂ ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Read Also: ಬೆಳಗಾವಿ ಪಾಲಿಕೆ ಚುನಾವಣೆ: ಕಾಂಗ್ರೆಸ್‌ ಮುನ್ನಡೆ; ಖಾತೆ ತೆರೆದ ಓವೈಸಿ ಪಕ್ಷ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights