ಬೆಳಗಾವಿ ಪಾಲಿಕೆ ಚುನಾವಣೆ: ಕಾಂಗ್ರೆಸ್‌ ಮುನ್ನಡೆ; ಖಾತೆ ತೆರೆದ ಓವೈಸಿ ಪಕ್ಷ!

ಇಂದು ಕರ್ನಾಟಕದ ಮೂರು ಪಾಲಿಕೆಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕಲಬುರ್ಗಿ, ಬೆಳಗಾವಿ, ಹುಬ್ಬಳಿ-ಧಾರವಾಡ ಅವಳಿ ನಗರಗಳ ಮಹಾನಗರ ಪಾಲಿಕೆಗಳ ಮತ ಎಣಿಕೆ ಇಂದು ನಡೆಯುತ್ತಿದೆ. ಇದರಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಪಾಲಿಕೆಯಲ್ಲಿ ಆರಂಭಿಗೆ ಗೆಲುವಿನೊಂದಿಗೆ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಅಲ್ಲದೆ, ಮೊದಲ ಬಾರಿಗೆ ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ ಪಕ್ಷ ಕೂಡ ಒಂದು ವಾರ್ಡ್‌ನಲ್ಲಿ ಗೆದ್ದಿದ್ದು, ಖಾತೆ ತೆರೆದಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಮತ ಎಣಿಕೆ ತ್ವರಿತಗತಿಯಲ್ಲಿ ನಡಯುತ್ತಿದ್ದು, ಕಾಂಗ್ರೆಸ್‌ ಈಗಾಗಲೇ ಮೂರು ವಾರ್ಡ್‌ಗಳಲ್ಲಿ ಗೆದ್ದಿದೆ. ಬಿಜೆಪಿ ಎರಡು ವಾರ್ಡ್‌ಗಳಲ್ಲಿ ಗೆದ್ದಿದೆ. ಜೆಡಿಎಸ್‌ ಇನ್ನೂ ಖಾತೆ ತೆರೆದಿಲ್ಲ.

ಕಾಂಗ್ರೆಸ್ ಗೆಲುವು – ವಾರ್ಡ್ ನಂಬರ್ 11, ವಾರ್ಡ್ ನಂಬರ್ 3, ವಾರ್ಡ್ ನಂಬರ್ 52 ರಲ್ಲಿ ಗೆದ್ದಿದ್ದು, ಇನ್ನೂ ಹಲವು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿ ಗೆಲುವು – ವಾರ್ಡ್ ನಂಬರ್ 15 ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು, ವಾರ್ಡ್ ನಂಬರ್ 21.

ಎಂಇಎಸ್-ವಾರ್ಡ್ ನಂಬರ್ 14.

ಎಐಎಂಐಎಂ – ವಾರ್ಡ್ ನಂಬರ್ 18.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಜಯ; ಎರಡನೇ ಸ್ಥಾನಕ್ಕೆ ಕುಸಿದ ಬಿಜೆಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights