ಡಾ.ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೂ ಕೊರೊನಾ ಎಫೆಕ್ಟ್ : ಅಭಿಮಾನಿಗಳಿಗೆ ಶಿವಣ್ಣ ಟ್ವೀಟ್

ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ ಜನ ಮನೆಬಿಟ್ಟು ಹೊರಗಡೆ ಬಾರದ ಸ್ಥಿತಿ ಇದೆ. ಇದರಿಂದಾಗಿ ಧಾರ್ಮಿಕ ಆಚರಣೆಗಳಲ್ಲಿ ಮುಂದಿದ್ದ ನಮ್ಮ ರಾಜ್ಯ ಯಾವುದೇ ಆಚರಣೆಗಳನ್ನ ಮಾಡುವುದಿರಲಿ ದೇವಸ್ಥಾನಗಳಿಗೂ ಹೋಗದ ಪರಿಸ್ಥಿತಿ ಇದೆ. ಹೀಗಾಗಿ ಕನ್ನಡದ ಧ್ವನಿ ಡಾ. ರಾಜಕುಮಾರ ಅವರ ಹುಟ್ಟುಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ.

ಕಸ್ತೂರಿ ನಿವಾಸ, ಸತ್ಯಹರಿಶ್ಚಂದ್ರ, ಬೇಡರ ಕಣ್ಣಪ್ಪ, ಬಂಗಾರದ ಮನುಷ್ಯ, ಭಕ್ತಕುಂಬಾರ ದಂತಹ ಎಂದೂ ಮರೆಯದ ಸಿನಿಮಾಗಳನ್ನು ಪರಿಚಯಿಸಿದ ನಟಸಾರ್ವಭೌಮ ಡಾ.ರಾಜಕುಮಾರ್ ಅವರಿಗೆ ಇಂದು 91ನೇ ಹುಟ್ಟುಹಬ್ಬ. ಪ್ರತೀ ಭಾರೀ ಅನ್ಣವ್ರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಲಾಕ್ ಡೌನ್ ನಿಂದಾಗಿ ಅದ್ಧೂರಿ ಆಚರಣೆಗೆ ಬ್ರೇಕ್ ಬಿದ್ದಂತಾಗಿದೆ. ಹೀಗಾಗಿ ಮನೆ ಜನ ಮಾತ್ರ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಈ ವೇಳೆ  ಪೂಜಾ ಕಾರ್ಯಗಳಿಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಹುಟ್ಟುಹಬ್ಬ ಆಚರಿಸಿ ಅಣ್ಣವ್ರ ಸ್ಮರಿಸ್ತಾಯಿದ್ರು, ಆದರೆ ಇದೇ ಮೊದಲ ಬಾರಿಗೆ ಅಭಿಮಾನಿಗಳಿಲ್ಲದೇ ಆಚರಿಸಲಾಗುತ್ತಿದೆ. ಈ ಕುರಿತು ದೊಡ್ಮನೆ ಮಗ ಶಿವರಾಜಕುಮಾರ್ ಅವರು ಟ್ವೀಟ್ ಮಾಡಿದ್ದು ಮನೆಯಲ್ಲಿ ಇರಿ ಮನೆಯಲ್ಲೇ ಆಚರಣೆ ಮಾಡಿ ಅನ್ನೋ ಸಂದೇಶ ಕೊಟ್ಟಿದ್ದಾರೆ. “ಪ್ರೀತಿಯ ಅಪ್ಪಾಜಿಯ ಹುಟ್ಟುಹಬ್ಬಕ್ಕೆ ನಮ್ಮ ಅಭಿಮಾನಿಗಳಿಂದ ವಿಶೇಷ ಕಾಮನ್ ಡಿಪಿ. ಅಪ್ಪಾಜಿಯ ಹುಟ್ಟುಹಬ್ಬವನ್ನು ಈ ಬಾರಿ ನಿಮ್ಮ ನಿಮ್ಮ ಮನೆಯಲ್ಲೆ ಆಚರಿಸಿ ಮನೆಯವರ ಜೊತೆಯಲ್ಲೆ ಆಚರಿಸಿ” ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸೇರಿದಂತೆ ಹಲವೆಡೆ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದರು. ಅಲ್ಲದೇ ಏಪ್ರಿಲ್ 24ರ ದಿನ ಪ್ರತೀ ವರ್ಷ ಅಭಿಮಾನಿಗಳು ತುಂಬಿ ತುಳುಕುತ್ತಿದ್ದರು. ಆದರೆ ಇದಕ್ಕೆಲ್ಲಾ ಕೊರೊನಾ ವೈರಸ್ ಅಡ್ಡಿ ಮಾಡಿದೆ.

ಇದೇ ದಿನ ದೊಡ್ಮನೆ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡಲಿದೆ. ರಾಘವೇಂದ್ರ ರಾಜ್‍ಕುಮಾರ್ ಪುತ್ರ ಯುವರಾಜ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಹುಟ್ಟುಹಬ್ಬದ ದಿನ ಫೇಸ್‍ಬುಕ್ ಲೈವ್ ಬಂದು ರಾಜ್‍ಕುಮಾರ್ ಅವರ ಬಗ್ಗೆ ರವಿಶಂಕರ್ ಗುರೂಜಿ ಜೊತೆ ಮಾತನಾಡಲಿದ್ದಾರೆ. ಕೇವಲ ಕುಟುಂಬದವರು ಮತ್ತು ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

https://twitter.com/NimmaShivanna/status/1253292856598343682

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights