ಜೈ ಶ್ರೀರಾಮ್ ಹೇಳಲು ನಿರಾಕರಿಸಿದ ಕ್ಯಾಬ್ ಚಾಲಕನ ಹತ್ಯೆ; ನೋಯ್ಡಾದಲ್ಲಿ ಅಮಾನುಷ ಘಟನೆ
ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ ಕ್ಯಾಬ್ ಚಾಲಕನ್ನು ಪ್ರಯಾಣಿಕರೇ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ನೋಯ್ಡಾದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಕ್ಯಾಬ್ ಬುಕ್ ಮಾಡಿ ಕ್ಯಾಬ್ ಏರಿದ ಪ್ರಯಾಣಿಕರ ದುಷ್ಕರ್ಮಿಗಳು ದಾರಿ ಮಧ್ಯೆ, ಕ್ಯಾಬ್ ಚಾಲಕನಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಘೋಷಣೆ ಕೂಗಲು ನಿರಾಕರಿಸಿದ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಚಾಲಕ ಸಾವನ್ನಪ್ಪದ್ದಾರೆ.
ನೊಯ್ಡಾದ ತ್ರಿಲೋಕಪುರಿ ನಿವಾಸಿ ಅಫ್ತಾಬ್ ಅಲಾಂ ಎಂಬುವವರು ಹತ್ಯೆಗೀಡಾದ ಕ್ಯಾಬ್ ಚಾಲಕರಾಗಿದ್ದು, ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಅವರ ಮಗನಿಗೆ ಫೋನ್ ಕರೆ ಮಾಡಿದ್ದಾರೆ. ಫೋನ್ ರಿಸೀವ್ ಮಾಡಿದಾಗ ದುಷ್ಕರ್ಮಿಗಳು ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸುತ್ತಿದ್ದುದು ಕೇಳಿಸಿತ್ತು. ಅದಾದ ಕೆಲವೇ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಅಫ್ತಾಬ್ನ ಮಗ ಆರೋಪಿಸಿದ್ದಾರೆ.
ಸೋಮವಾರ, ಅಫ್ತಾಬ್ ಅವರ ಕ್ಯಾಬ್ನಲ್ಲೇ ಅವರ ಕೈ-ಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಅಫ್ತಾಬ್ನ ಮೃತದೇಹ ಪತ್ತೆಯಾಗಿದೆ. ಕಂಠಪೂರ್ತಿ ಕುಡಿದಿದ್ದ ಮೂರ್ನಾಲ್ಕು ಜನರು ಅಫ್ತಾಬ್ ಅವರ ಕ್ಯಾಬ್ ಹತ್ತಿ ಗಲಾಟೆ ಮಾಡಿ, ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಬಾದಲ್ಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಫ್ತಾಬ್ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ತಿಳಿದ ಅವರ ಮಗ ಕರೆಯನ್ನು ರೆಕಾರ್ಡ್ ಮಾಡಿದ್ದು, ರೆಕಾರ್ಡ್ ಆಡಿಯೋದಲ್ಲಿ ‘ಜೈ ಶ್ರೀರಾಮ್ ಎಂದು ಹೇಳು’ ಎಂದು ಜೋರಾಗಿ ನಗುತ್ತಾ, ಒತ್ತಾಯಿಸುತ್ತಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ದೇವಸ್ಥಾನದಲ್ಲಿ ಪೂಜೆ ಮಾಡಿದ್ದಕ್ಕೆ ದಲಿತ ಬಾಲಕನನ್ನು ಗುಂಡಿಕ್ಕಿ ಹತ್ಯೆ!
ಬುಲಂದ್ಶಹರ್ನಲ್ಲಿ ಬೇರೊಬ್ಬ ಗ್ರಾಹಕರೊಬ್ಬರನ್ನು ಡ್ರಾಪ್ ಮಾಡಿ ವಾಪಾಸ್ ಬರುವಾಗ ಅಫ್ತಾಬ್ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡುವಂತೆ ಕರೆಮಾಡಿ ಹೇಳಿದರು. ರೀಚಾರ್ಜ್ ಮಾಡಿದ ನಂತರ, ಆ ಬಗ್ಗೆ ತಿಳಿಸಲು ಮತ್ತೆ ಕರೆ ಮಾಡಿದೆ. ಆದರೆ, ಅವರು ಸ್ವೀಕರಿಸಿಲ್ಲ. ಅದಾದ ಸ್ವಲ್ವ ಹೊತ್ತಿಗೆ ಮರಳಿ ಅವರೇ ನನಗೆ ಕರೆ ಮಾಡಿದರು. ಅವರು ಏನನ್ನೂ ಮಾತಾಡಲಿಲ್ಲ. ಆಗ ಯಾರೋ ಜೈ ಶ್ರೀರಾಮ್ ಹೇಳುವಂತೆ ಜೋರಾಗಿ ಕೇಕೆ ಹಾಕುತ್ತಿದ್ದುದು ಕೇಳಿಸಿತು. ಅಪ್ಪ ಯಾವುದೋ ಅಪಾಯದಲ್ಲಿದ್ದಾರೆ ಎನಿಸಿದ ಕೂಡಲೆ ಆ ಕರೆಯನ್ನು ರೆಕಾರ್ಡ್ ಮಾಡಿಕೊಂಡೆ ಎಂದು ಅಫ್ತಾಬ್ ಮಗ ಹೇಳಿದ್ದಾರೆ.
A cab driver's son recorded, what turned out to be the last conversation with his father. Two men could be allegedly heard asking the victim Aftab to chant Jai Shri Ram. Victim was assaulted and he later died in Noida. Police deny communal angle. https://t.co/tABOKqppE9
— Amil Bhatnagar (@AmilwithanL) September 8, 2020
ಇದನ್ನೂ ಓದಿ: ಭಯಾನಕ ಹತ್ಯೆ : ಒಂದೇ ಕುಟುಂಬದ ಮೂರು ಸದಸ್ಯರ ಕೊಲೆ ಬಳಿಕ ಬೆಂಕಿ…

