ಅಮೆರಿಕಾ ಪೊಲೀಸ್ ಇಲಾಖೆಯ ಹಂಗಾಮಿ ಅಧ್ಯಕ್ಷರಾಗಿ ಕಪ್ಪು ವರ್ಣೀಯ ಮಹಿಳೆ ನೇಮಕ
ಅಮೆರಿಕಾದ ಕೆಂಟಕಿಯ ಲೂಯಿಸ್‌ವಿಲ್ ಮೆಟ್ರೊ ಪೊಲೀಸ್ ಇಲಾಖೆಯ ಹಂಗಾಮಿ ಅಧ್ಯಕ್ಷೆಯಾಗಿ ಕಪ್ಪು ವರ್ಣೀಯ ಮಹಿಳೆ ಯೆವೆಟ್ ಜೆಂಟ್ರಿ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಲೂಯಿಸ್‌ವಿಲ್ ಮೆಟ್ರೊ ಪೊಲೀಸ್ ಇಲಾಖೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ರಾಬರ್ಟ್ ಶ್ರೋಡರ್ ಅವರ ಅಧಿಕಾರಾವಧಿ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಯೆವೆಟ್ ಜೆಂಟ್ರಿ ನೇಮಕಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕಪ್ಪು ವರ್ಣೀಯ ಮಹಿಳೆಯೊಬ್ಬರು ಅಮೆರಿಕನ್ ಪೊಲೀಸ್ ಇಲಾಖೆಯಲ್ಲಿ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.
2014ರಲ್ಲಿ ಯೆವೆಟ್ ಅವರು ಲೂಯಿಸ್‌ವಿಲ್ ಮೆಟ್ರೊ ಪೊಲೀಸ್ ಇಲಾಖೆಯ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಅವರನ್ನು ಇಲಾಖೆಯ ಹಂಗಾಮಿ ಅಧ್ಯಕ್ಷರನ್ನಾಗಿ ಮೇಯರ್ ಗ್ರೆಗ್ ಫಿಷರ್ ಅವರು ಸೋಮವಾರ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ: Fact Check: ಭಾರತೀಯ ಮಾಧ್ಯಮಗಳು ಮೋದಿಯವರ ಚೇಲಾಗಳೆಂದು ಅಮೆರಿಕಾ ವ್ಯಂಗ್ಯಚಿತ್ರಕಾರ ಚಿತ್ರಿಸಿದ್ದರೆ?
ಅಮೆರಿಕಾದಲ್ಲಿ ಕಪ್ಪು ವರ್ಣಿಯ ಜಾರ್ಜ್ ಪ್ಲಾಯ್ಡ್ ಮತ್ತು ತುರ್ತು ವೈದ್ಯಕೀಯ ಸೇವಾ ಸಿಬ್ಬಂದಿ, ಕಪ್ಪು ವರ್ಣೀಯ ಬ್ರೆನ್ನಾ ಟೇಲರ್ ಅವರ ಹತ್ಯೆಯ ಬಳಿಕ ಇಲ್ಲಿನ ಪೊಲೀಸ್ ಇಲಾಖೆಯ ವಿರುದ್ಧ ಅಮೆರಿಕನ್ನರು ಪ್ರತಿಭಟನೆ ನಡೆಸಿದ್ದರು. ಅಮೆರಿಕಾ ಆಡಳಿತದ ವಿರುದ್ಧ ಕಪ್ಪುವರ್ಣೀಯರು ಹಾಗೂ ವರ್ಣಬೇಧದ ವಿರೋಧಿಗಳು ಸಿಟ್ಟಾಗಿದ್ದರು. ಇನ್ನೆರಡು ತಿಂಗಳಲ್ಲಿ ಅಮೆರಿಕಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲೇ ಯೆವೆಟ್ ಜೆಂಟ್ರಿ ಅವರನ್ನು ಹಂಗಾಮಿ ಅಧ್ಯಕ್ಷೆಯಾಗಿ ನೇಮಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಪೊಲೀಸರಿಂದ ಮತ್ತೋರ್ವ ಕಪ್ಪುವರ್ಣೀಯನ ಹತ್ಯೆ!

