ಈರುಳ್ಳಿ ರಫ್ತು ನಿಷೇಧ: ಬಂದರಿನಲ್ಲೇ ಬಂದ್‌ ಆದ ಈರುಳ್ಳಿ: ರಫ್ತುದಾರರಿಗೆ ಬಿಕ್ಕಟ್ಟು!

ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದೆ. ದಿನೇ ದಿನೇ ಏರಿಕೆ ಕಾರಣುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈರುಳ್ಳಿಯನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

ಕಳೆದ ಕೆಲವು ದಿನಗಳಿಂದ ಈರುಳ್ಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಈರುಳ್ಳಿಗೆ ಬೇಡಿಕೆ ಇರುವುದರಿಂದ ಮಾರುಕಟ್ಟೆಯ ದಾಸ್ತಾನುಗಳಲ್ಲೂ ಈರುಳ್ಳಿ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ದೇಶೀಯ ಬಳಕೆಗೆ 15 ದಶಲಕ್ಷ ಟನ್ ಈರುಳ್ಳಿಯ ಬೇಡಿಕೆ ಇದೆ. ಆದರೆ, 17 ದಶಲಕ್ಷ ಟನ್ ಉತ್ಪಾದನೆಯಾಗಿದೆ ಎಂದು ಆ ಕಾರಣದಿಂದಾಗಿ ವಿದೇಶಗಳಿಗೆ ಮಾಡಲಾಗುತ್ತಿದ್ದ ಈರುಳ್ಳಿ ರಫ್ತಿಗೆ ನಿಷೇಧ ಹೇರಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆ.ಜಿಗೆ 40 ರೂಪಾಯಿ ಇದ್ದರೆ ಇತರೆ ರಾಜ್ಯದಲ್ಲಿ ಕೆಜಿ 50 ರೂ.ಗೆ ಈರುಳ್ಳಿಯನ್ನ ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಕೃಷ್ಣಾಪುರದ ಈರುಳ್ಳಿ, ಬೆಂಗಳೂರು ಗುಲಾಬಿ ಈರುಳ್ಳಿ ಎಲ್ಲ ರೀತಿಯ ಈರುಳ್ಳಿಗಳ ರಫ್ತನ್ನ ನಿಷೇಧಿಸಲಾಗಿದೆ.

ಇದರಿಂದಾಗಿ, ಕೊಲಂಬೊ ಮತ್ತು ಮಲೇಷ್ಯಾಗೆ ರಫ್ತಾಗಲು ಸಾಗಿಸಿದ್ದ ಬೆಂಗಳೂರು ರೋಸ್‌ ಈರುಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದ ಸಹಸ್ರಾರು ಟನ್‌ ಈರುಳ್ಳಿ ಇದೀಗ ಬಂದರುಗಳಲ್ಲಿ ಸಿಲುಕಿದೆ. ಅಷ್ಟೇ ಅಲ್ಲ, ತೋಟಗಳಲ್ಲಿರುವ ಈರುಳ್ಳಿ ಬೆಳೆ ಖರೀದಿಸುವವರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಲ್ಲದೆ, ಈರುಳ್ಳಿ ರಫ್ತಾಗದೆ ನಂತರ ಸಮೀಪದ ಮಾರುಕಟ್ಟೆಗೆ ವಾಪಸ್‌ ಕಳುಹಿಸಿದರೆ ಅದರಲ್ಲಿಅರ್ಧ ಭಾಗ ಕೊಳೆತು ಕಡಿಮೆ ಬೆಲೆಗೆ ಮಾರಾಟವಾಗಿ ಕೋಟ್ಯಂತರ ರೂಪಾಯಿ ರಫ್ತುದಾರರಿಗೂ ನಷ್ಟವಾಗತೊಡಗಿದೆ ಎಂದು ರಫ್ತುದಾರರು ಹೇಳಿದ್ದಾರೆ.

ಈ ರೀತಿಯಲ್ಲಿ ದಿಢೀರ್‌ ನಿಷೇಧ ಹೇರುವುದು ಒಳ್ಳೆಯದಲ್ಲ. ಇದು, ನಮ್ಮ ಪ್ರತಿಸ್ಪರ್ಧಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆನಂದ್ ಶರ್ಮಾ ತಿಳಿಸಿದ್ದಾರೆ.

ಭಾರತವು ನೆರೆಯ ರಾಷ್ಟ್ರ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಯುಎಇ ಮತ್ತು ಮಲೇಷಿಯಾ ರಾಷ್ಟ್ರಗಳಿಗೆ ಈರುಳ್ಳಿಯನ್ನು ರಫ್ತು ಮಾಡುತ್ತದೆ.


ಇದನ್ನೂ ಓದಿ: ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಭಗವಂತ ಕರುಣಿಸಲಿ: ಮೋದಿಗೆ ಹೆಚ್‌ಡಿಕೆ, ಸಿದ್ದು ವಿಭಿನ್ನ ಶುಭಾಷಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights