Fact Check: ದೈತ್ಯ ಕೈ ಆಕಾರದಲ್ಲಿ ಕೆತ್ತಿದ ಈ ಮರದ ಹಿಂದಿನ ಸತ್ಯ..

ಕೈಯ ಆಕಾರದಲ್ಲಿ ಕೆತ್ತಿದ ಮರದ ಅದ್ಭುತ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಮರವು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡೋಗ್ರಿಪೊರಾ ಗ್ರಾಮದಲ್ಲಿದೆ ಎಂದು ಹೇಳಲಾಗುತ್ತಿದೆ.

“ಮರ ಕೆತ್ತನೆ. ಉತ್ತರ ಕಾಶ್ಮೀರ ಡೋಗ್ರಿಪೊರಾ..” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಹೇಳಿಕೆಯನ್ನು ತಪ್ಪು ಎಂದು ಕಂಡುಹಿಡಿದಿದೆ. ವೈರಲ್ ಚಿತ್ರ ಯುನೈಟೆಡ್ ಕಿಂಗ್‌ಡಂನ ವೇಲ್ಸ್‌ನಲ್ಲಿರುವ “ದಿ ಜೈಂಟ್ ಹ್ಯಾಂಡ್ ಆಫ್ ವೈರ್ನ್‌ವಿ” ಯದ್ದಾಗಿದೆ. ಈ ಪೋಸ್ಟ್ನ ಹಲವಾರು ಫೇಸ್‌ಬುಕ್ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಚಿತ್ರವನ್ನು ಹಿಮ್ಮುಖವಾಗಿ ಹುಡುಕಿದಾಗ, ಇದು ಒಂದು ಕಾಲದಲ್ಲಿ ಯುಕೆ ನ ಅತಿ ಎತ್ತರದ ಮರವೆಂದು ಪರಿಗಣಿಸಲ್ಪಟ್ಟಿದೆ. ಸುರಕ್ಷತಾ ಕಾರಣಗಳಿಂದಾಗಿ ಅದನ್ನು ಕತ್ತರಿಸಲಾಗಿದೆ. ವೇಲ್ಸ್‌ನ ಲೇಕ್ ವಿರ್ನ್‌ವಿ ಎಸ್ಟೇಟ್‌ನಲ್ಲಿರುವ ಇದನ್ನು ಕಲಾವಿದ ‘ಸೈಮನ್ ಒ ರೂರ್ಕೆ’ ಕೈ ಆಕಾರದಲ್ಲಿ ಕೆತ್ತಿದ್ದಾರೆ.

ವೈರಲ್‌ ಚಿತ್ರವನ್ನು ವೆಬ್‌ಸೈಟ್‌ನಲ್ಲಿ ಇದು “ದಿ ಜೈಂಟ್‌ ಹ್ಯಾಂಡ್‌ ಆಫ್‌ ವೈರ್ನ್‌ವಿ ಸೈಮನ್‌ ಒ’ರೂರ್ಕ್‌ರಿಂದ ಕೆತ್ತಲಾಗಿದೆ. 50 ಅಡಿ ಎತ್ತರವಿದೆ” ಎಂದು ಹೇಳಲಾಗಿದೆ.

ಕೀವರ್ಡ್ ಹುಡುಕಾಟದ ಸಹಾಯದಿಂದ, ಮರವನ್ನು ಸುಂದರವಾದ ಶಿಲ್ಪವಾಗಿ ಹೇಗೆ ಪರಿವರ್ತಿಸಲಾಗಿದೆ ಎಂಬುದರ ಕುರಿತು ಬಿಬಿಸಿ ನ್ಯೂಸ್ ಬರೆದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಲೇಖನದ ಪ್ರಕಾರ, ಈ ಮರವು ಒಂದು ಕಾಲದಲ್ಲಿ 20 ಅಂತಸ್ತಿನ ಕಟ್ಟಡಕ್ಕಿಂತ ಎತ್ತರವಾಗಿದ್ದು ಸುಮಾರು 209 ಅಡಿ ಎತ್ತರವನ್ನು ಹೊಂದಿತ್ತು.

ಶಿಲ್ಪವನ್ನು ರಚಿಸಿದ ಕಲಾವಿದ ಸೈಮನ್ ಒ’ರೂರ್ಕೆ ತಮ್ಮ ವೆಬ್‌ಸೈಟ್‌ನಲ್ಲೂ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. “ಅಲಾಮಿ” ಸ್ಟಾಕ್ ಫೋಟೋ ವೆಬ್‌ಸೈಟ್‌ನಲ್ಲಿ “ದಿ ಜೈಂಟ್ ಹ್ಯಾಂಡ್ ಆಫ್ ವೈರ್ನ್ವಿ” ಯ ಹಲವಾರು ಚಿತ್ರಗಳಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights