ಸಚಿವ ಸ್ಥಾನಕ್ಕೆ ಸುವೆಂಡು ರಾಜೀನಾಮೆ; ದೆಹಲಿಗೆ ತೆರಳಿದ TMC ಶಾಸಕ BJP ಸೇರುವ ಸಾಧ್ಯತೆ!

ಮಮತಾ ಬ್ಯಾನರ್ಜಿ ಮತ್ತು ಹೈಕಮಾಂಡ್‌ ಮೇಲೆ ಸಿಟ್ಟಾಗಿರುವ, ಪಕ್ಷದಿಂದ ಹೊರಗುಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಟಿಎಂಸಿ ಶಾಸಕ ಮಿಹಿರ್ ಗೋಸ್ವಾಮಿ, ಬಿಜೆಪಿ ಸಂಸದ ನಿಸಿತ್ ಪ್ರಮಣಿಕ್ ಅವರೊಂದಿಗೆ ಶುಕ್ರವಾರ ನವದೆಹಲಿಗೆ ತೆರಳಿದ್ದಾರೆ. ಇದು ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳಿಗೆ ನಾಂದಿ ಹಾಡಿದ್ದಾರೆ. ರಾಜ್ಯ ಬಿಜೆಪಿ ಮೂಲಗಳ ಪ್ರಕಾರ, ಗೋಸ್ವಾಮಿ ಇಂದು ಸಂಜೆ ಬಿಜೆಪಿ ಸೇರುವ ಸಾಧ್ಯತೆ ಇದೆ.

ವಿವಿಧ ಸಂದರ್ಭಗಳಲ್ಲಿ ಅವರು “ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಪಕ್ಷದಲ್ಲಿ ಮುಂದುವರೆಯುವುದು ಕಷ್ಟಕರವಾಗಿದೆ” ಎಂದು ಈ ಹಿಂದೆ ಹೇಳಿದ್ದರು,

ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿಈ ಬಗ್ಗೆ ಬರೆದುಕೊಂಡಿರುವ ಶಾಸಕ ಗೋಸ್ವಾಮಿ, “ನಾನು 22 ವರ್ಷಗಳಿಂದ ಸಂಬಂಧ ಹೊಂದಿರುವ ತೃಣಮೂಲ ಕಾಂಗ್ರೆಸ್ ಒಳಗೆ ಉಳಿಯುವುದು ಕಠಿಣವೆಂದು ತೋರುತ್ತದೆ” ಎಂದು ಹೇಳಿದ್ದಾರೆ.

ಅಲ್ಲದೆ, ಮಮತಾ ಸಂಪುಟದಲ್ಲಿ ಸಾರಿಗೆ ಮತ್ತು ನೀರಾವರಿ ಸಚಿವರಾಗಿದ್ದ ಸುವೆಂಡು ಅಧಿಕಾರಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲರಿಗೆ ಕಳಿಸಿದ್ದಾರೆ. ಆದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣ ಅವರು ಇನ್ನು ಟಿಎಂಸಿ ಶಾಸಕರಾಗಿಯೇ ಉಳಿದಿದ್ದಾರೆ.

ಬಹುಶಃ ಮುಂದಿನ ದಿನಗಳಲ್ಲಿ ಅವರೂ ಕೂಡ ಪಕ್ಷ ತೊರೆದು, ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ.

ಹಲವು ತಿಂಗಳುಗಳಿಂದ ಮಮತಾ ಬ್ಯಾನರ್ಜಿಯವರ ವಿರುದ್ಧ ಸಿಟ್ಟಾಗಿರುವ ಸಚಿವ ಸುವೆಂಡು ಅಧಿಕಾರಿ ಮತ್ತು ಅವರ ಜೊತೆಗಿರುವ ಕೆಲವು ಶಾಸಕರು ಹೈಕಮಾಂಡ್‌ನಿಂದ ಅಂತಹ ಕಾಯ್ದುಕೊಂಡಿದ್ದರು. ಅವರ ಮನವೊಲಿಸಲು  ಹಲವು ನಾಯಕರು ಅವರೊಂದಿಗೆ ಮಾತುಕತೆ ನಡೆಸಿದ್ದರು.

ಕೆಲವು ತಿಂಗಳುಗಳ ಹಿಂದೆ ಪಕ್ಷದಲ್ಲಿ ತರಲಾದ ಸಾಂಸ್ಥಿಕ ಪುನರ್‌ರಚನೆಯ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ. ಪಕ್ಷದಲ್ಲಿ ಜಿಲ್ಲಾ ಮೇಲ್ವಿಚಾರಕ/ವಿಕ್ಷಕರ ಹುದ್ದೆಯನ್ನು ರದ್ದುಗೊಳಿಸಿರುವುದು ಸರಿಯಲ್ಲ. ಈ ಮೂಲಕ ತನ್ನ ಪ್ರಭಾವವನ್ನು ಕಸಿದುಕೊಳ್ಳಲು ಪಕ್ಷದ ಹೈಕಮಾಂಡ್‌ ಪ್ರಯತ್ನಿಸಿದೆ ಎಂದು ಸುವೆಂಡು ಅಧಿಕಾರಿ ಆರೋಪಿಸಿದ್ದಾರೆ. ಅಲ್ಲದೆ, ಚುನಾವಣಾ ತಂತ್ರಜ್ಞರಾಗಿ ನೇಮಕವಾಗಿರುವ ಪ್ರಶಾಂತ್‌ ಕಿಶೋರ್‌ ಅವರ ಬಗೆಗೆ ಅವರಿಗೆ ಅಸಮಾಧಾನವಿದೆ. ಆ ಕಾರಣಕ್ಕಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.


ಇದನ್ನೂ ಓದಿ: ಪ. ಬಂಗಾಳ ಚುನಾವಣೆ: TMCಯಲ್ಲಿ ಭಿನ್ನಾಭಿಪ್ರಾಯ; BJP ಗೆಲುವಿಗೆ ವರದಾನ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights