ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಹೆಚ್ ವಿಶ್ವನಾಥ್!

ನಿನ್ನೆ ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರು ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್ ಮಧ್ಯಂತರ ಆದೇಶ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ಹೆಚ್ ವಿಶ್ವನಾಥ್ ‘ನಾನು ಸಚಿವಾರುವ ನಿರೀಕ್ಷೆ ಇಟ್ಟುಕೊಂಡು ಪಕ್ಷ ತೊರೆದೆ. ಆದರೆ ಅದಾಗಲಿಲ್ಲ ನನಗೆ ಭಾರಿ ಅಸಮಧಾನವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲು ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಮೈತ್ರಿ ಬೇಡ ಅಂತೇಳಿರಲಿಲ್ಲ. ಒಂದು ಸುಭದ್ರ ಸರ್ಕಾರ ಬರಲಿ ಎನ್ನುವ ಕಾರಣಕ್ಕೆ ನಾನು ಬಿಜೆಪಿ ಸೇರಿದೆ. ಆದರೆ ಪಕ್ಷ ಕಟ್ಟಲು ಜೊತೆಗಿದ್ದವರೇ ಸದ್ಯ ನನ್ನ ಕೈಹಿಡಿದಿಲ್ಲ. ಇದು ನನ್ನ ಅಸಮಧಾನಕ್ಕೆ ಕಾರಣವಾಗಿದೆ.  ಹೈಕಮಾಂಡ್ ಕೂಡ ನನ್ನ ಕೈಬಿಟ್ಟು ಬೇರೆಯವರ ಕೈಹಿಡಿದೆ’ ಎಂದಿದ್ದಾರೆ.

ನಿನ್ನೆ ಹೆಚ್. ವಿಶ್ವನಾಥ್ 2021ರವರೆಗೆ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

ಹೆಚ್ ವಿಶ್ವನಾಥ್, ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತೆ ಹೈಕೋರ್ಟ್ ವಿಭಾಗೀಯ ಪೀಠವು, ಹೆಚ್ ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ. ಅನರ್ಹರಾಗಿ, ಸೋತು ನಾಮ ನಿರ್ದೇಶನಗೊಂಡಿದ್ದಾರೆ. ವಿಶ್ವನಾಥ್ ಅನರ್ಹತೆಯನ್ನು ಸಿಎಂ ಪರಿಗಣಿಸಬೇಕು. ಕಲಂ 164(1ಬಿ),361 ಬಿ ಅಡಿ ನಿಶ್ವನಾಥ್ ಅನರ್ಹರು. ಹೀಗಾಗಿ 2021ರವರೆಗೆ ಸಚಿವರಾಗಲು ಅರ್ಹರಲ್ಲ ಎಂಬುದಾಗಿ ನಿನ್ನೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights