ಸಚಿವ ಕೆ ಎಸ್ ಈಶ್ವರಪ್ಪ ಪುತ್ರಿಯ ಕಳ್ಳತನವಾದ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆ…
ಬೆಂಗಳೂರಿನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಪುತ್ರಿಯ ಕಳ್ಳತನವಾದ ಮೋಬೈಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.
ಈಶ್ವರಪ್ಪನವರ ಪುತ್ರಿ ಶಾಂತಾ ಕೆ ಎಂಬುವರಿಗೆ ಸೇರಿದ ಮೊಬೈಲ್ ಕಳ್ಳತನ ಕುರಿತು ಬೆಂಗಳೂರು ನಾಥ೯ ಈಸ್ಟ್ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಸೆ.೧೩ರಂದು ಗಾಂಧಿಭವನದ ಸಚಿವರ ನಿವಾಸ 41ರಿಂದ ಮೊಬೈಲ್ ಕಳುವಾಗಿತ್ತು. ಐಎಮ್ಇಐ ನಂಬರ್ ಮೂಲಕ ಮೊಬೈಲ್ ಪತ್ತೆ ಹಚ್ಚಿದ್ದ ಬೆಂಗಳೂರು ಪೋಲಿಸರಿಗೆ ಮೊಬೈಲ್ ಬಾಗಲಕೋಟೆಯಲ್ಲಿ ಇರುವುದು ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಬಂಟನೂರ ಗ್ರಾಮದ ಲಕ್ಷ್ಮಣ ಬಂಡಿವಡ್ಡರ್ ಎಂಬಾತನ ಬಳಿ ಇದ್ದ ಮೊಬೈಲ್ ಪತ್ತೆಯಾಗಿದೆ. ಲಕ್ಷ್ಮಣ ಬಂಡಿವಡ್ಡರ ಬಿಜೆಪಿ ಕಾರ್ಯಕರ್ತನಾಗಿದ್ದು, ಸಚಿವ ಕೆ ಎಸ್ ಈಶ್ವರಪ್ಪ ಭೇಟಿಗೆ ಹೋದಾಗ ಮೊಬೈಲ್ ಕದ್ದು ತಂದನಾ!? ಎನ್ನುವ ಪ್ರಶ್ನೆ ಸದ್ಯ ಎದುರಾಗಿದೆ.
ಲೋಕಾಪುರ ಪೋಲಿಸರ ಮೂಲಕ ಮೊಬೈಲ್ ಬೆಂಗಳೂರಿಗೆ ತರಿಸಿಕೊಂಡ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.

