ಕೋಯಿಕ್ಕೋಡ್ ವಿಮಾನ ದುರಂತ: ಪೈಲಟ್ ನಿರ್ಲಕ್ಷ್ಯವೇ ಕಾರಣ ಎಂದ ಎಎಐಬಿ ವರದಿ!
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಾದ ವಿಮಾನ ಪತನಕ್ಕೆ ಪೈಲಟ್ ನಿರ್ಲಕ್ಷ್ಯವೇ ಕಾರಣ ಎಂದು ಘಟನೆಯ ಕುರಿತು ತನಿಖೆ ನಡೆಸಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ತನಿಖಾ ವರದಿಯಲ್ಲಿ ಹೇಳಿದೆ.
257 ಪುಟಗಳ ವರದಿಯನ್ನು ಬಿಡುಗಡೆ ಮಾಡಿರುವ ಎಎಐಬಿ, ಪೈಲಟ್ ಎಸ್‌ಒಪಿ ನಿಯಮಗಳನ್ನು ಅನುಸರಿಸಿಲ್ಲ. ಹೀಗಾಗಿ ದುರಂತ ಸಂಭವಿಸಿದೆ. ಅಸ್ಥಿರಗೊಳಿಸದ ವಿಧಾನವನ್ನು ಅನುಸರಿಸಿದ ಪೈಲಟ್ ಟಚ್‌ಡೌನ್ ವಲಯವನ್ನು ಮೀರಿ, ರನ್ ವೇ ಕೆಳಗೆ ಅರ್ಧದಾರಿಯಲ್ಲೇ ವಿಮಾನವನ್ನು ಇಳಿಸಿದ್ದಾರೆ. ಪೈಲಟ್ ಮಾನಿಟರಿಂಗ್ ಕರೆ ಮಾಡಿದ ಹೊರತಾಗಿಯೂ, ಮಾನಿಟರಿಂಗ್ ನಿಯಂತ್ರಣವನ್ನು ತೆಗೆದುಕೊಳ್ಳುವಲ್ಲಿ ಪೈಲಟ್ ವಿಫಲರಾದರು ಎಂದು ಹೇಳಿದೆ.
ಲ್ಯಾಂಡಿಂಗ್ ವೇಳೆ ಗಮನಿಸಬೇಕಾದ ಪ್ರಮುಖ ಅಂಶವನ್ನು ಪರಿಗಣಿಸದೆ ಎಸ್‌ಒಪಿ ನಿಯಮಗಳನ್ನು ಉಲ್ಲಂಘಿಸಿ ಲ್ಯಾಂಡಿಂಗ್ ಫ್ಲಾಪ್‌ಗಳು ಮತ್ತು ಸ್ವಯಂ-ಬ್ರೇಕ್ ಆಯ್ಕೆ ಮಾಡಿಕೊಂಡಿದ್ದಾರೆ. ರನ್ವೇ 10ಕ್ಕೆ ಇಳಿಯುವ ಮುನ್ನ ಪಿಐಸಿ ಟೈಲ್‌ವಿಂಡ್‌ಗಳೊಂದಿಗೆ ಇಳಿಯಲು ಸಾಕಷ್ಟು ತಯಾರಿಯನ್ನು ಅವರು ಕೈಗೊಳ್ಳಲಿಲ್ಲ. ಅಲ್ಲದೆ, ಪ್ರತಿಕೂಲಕರ ಹವಾಮಾನವೂ ಅಪಘಾತಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ಸೂಕ್ತ ಸಂಪರ್ಕವೂ ಸಾಧ್ಯವಾಗಲಿಲ್ಲ. ಆದರೂ, ಇಂತಹ ಸಂದರ್ಭದಲ್ಲಿ ಪರ್ಯಾಯ ವಾಯುನೆಲೆಯ ಕಡೆಗೆ ವಿಮಾನವನ್ನು ತಿರುಗಿಸುವ ಅವಕಾಶವಿತ್ತು ಎಂದು ವರಿಯಲ್ಲಿ ಹೇಳಲಾಗಿದೆ.
2020 ಆಗಸ್ಟ್ 7ರಂದು ದುಬೈನಿಂದ ಬಂದ ಏರ್ಇಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ 737 ವಿಮಾನ ಭಾರಿ ಮಳೆಯಿಂದಾಗಿ ರನ್ವೇನಲ್ಲಿ ಜಾರಿ ಸುಮಾರು 35 ಅಡಿ ಆಳದ ತಗ್ಗಿಗೆ ಬಿದ್ದಿತ್ತು. ಬಿದ್ದ ರಭಸಕ್ಕೆ ವಿಮಾನ ಎರಡು ಭಾಗವಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿದಂತೆ 23 ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: Fact Check: ಕೇರಳ ವಿಮಾನಾಘಾತದಲ್ಲಿ ಸಾವಿಗೀಡಾದ ಪೈಲಟ್ ಕಾರ್ಯಕ್ರಮದಲ್ಲಿ ಹಾಡು ಹಾಡಿದ್ದರೇ?

