ಯುಪಿ : ಮಹಿಳೆ ಮೇಲೆ ಅತ್ಯಾಚಾರ-ಕೊಲೆ ಆರೋಪಿ ಬಾದಾನ್ ದೇವಾಲಯದ ಅರ್ಚಕ ಅರೆಸ್ಟ್..!

ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ 50 ವರ್ಷದ ಮಹಿಳೆಯ ಮೇಲೆ ನಾಲ್ಕು ದಿನಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸ್ಥಳೀಯ ದೇವಾಲಯದ ಪಾದ್ರಿಯನ್ನು ಗುರುವಾರ ಬಂಧಿಸಲಾಗಿದೆ.

ಅರ್ಚಕನನ್ನು ಸತ್ಯಾನಂದ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಪಾದ್ರಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಮನೆಯ ಹೊರಗೆ ಆಕೆಯನ್ನು ಬೀಸಾಡಿದ್ದನು. ಅಧಿಕ ರಸ್ತಸ್ರಾವದಿಂದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಕೃತ್ಯದ ಬಳಿಕ ಎಸ್ಕೇಪ್ ಆಗಿದ್ದ ಪಾದ್ರಿ ಮತ್ತು ಈತನ ಇಬ್ಬರು ಸಹಚರರು ಅತ್ಯಾಚಾರ ಎಸಗಿದ್ದಾರೆನ್ನುವ ಅನುಮಾನದ ವಾಸನೆ ಪೊಲೀಸರಿಗೆ ಮುಟ್ಟಿತ್ತು. ಇದರ ಬೆನ್ನಲ್ಲೆ ಪಾದ್ರಿ ಪತ್ತೆಗೆ ಮುಂದಾಗಿದ್ದರು. ಬುಧುವಾರ ಪಾದ್ರಿಯ ಸಹಚರರಾದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆದ್ರೆ ಪಾದ್ರಿ ಮಾತ್ರ ಪತ್ತೆಯಾಗಿರಲಿಲ್ಲ. ಹೀಗಾಗಿ ಅತ್ಯಾಚಾರವಾದ ಬಳಿಕ  ದೇವಾಲಯದ ಹೊರಗೆ ಮೂವರು ಯುಪಿ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು.

ಈ ವೇಳೆ ಸ್ಥಳೀಯ ನಿವಾಸಿಯೊಬ್ಬರಿಂದ ಪಾದ್ರಿ ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿದುಬಂದಿದೆ.

ಈ ದೇವಾಲಯ ವಿಸ್ತಾರವಾದ ಫಾರ್ಮ್ ಬಳಿ ಇದೆ. ಪಾದ್ರಿ ದೇವಾಲಯದ ಒಳಗಿನ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು. ಸ್ಥಳೀಯ ನಿವಾಸಿಗಳ ಪ್ರಕಾರ ಸತ್ಯಾನಂದ್  ಐದು ವರ್ಷಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು. ಹೆಚ್ಚಾಗಿ ಒಂಟಿಯಾಗಿ ಇರುತ್ತಿದ್ದರು. ಅತ್ಯಾಚಾರಕ್ಕೆ ಇಬ್ಬರ ಸಹಾಯ ಪಡೆದ ಪಾದ್ರಿ ಮಹಿಳೆ ಮೃತಪಟ್ಟ ಬಳಿಕ ಹಳ್ಳಿಯೊಂದರ ಅನುಯಾಯಿಯೊಬ್ಬರ ಮನೆಯಲ್ಲಿ ಅಡಗಿಕೊಂಡಿದ್ದನು. ಸ್ಥಳೀಯ ನಿವಾಸಿಯೊಬ್ಬರ ಮಾಹಿತಿ ಮೇರೆಗೆ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights