FACT CHECK | ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಪೂರ್ವ ನಿಯೋಜಿತ ಎಂದು ಹೇಳಿದ್ರಾ ಭಾರತೀಯ ಸೇನೆ ಅಧಿಕಾರಿ?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಸೇನೆಯ ಅಧಿಕಾರಿಯೊಬ್ಬರು ಕೇಂದ್ರ ಸರ್ಕಾರ ಹಾಗೂ ಭದ್ರತಾ ಸಂಸ್ಥೆಯನ್ನು ಪ್ರಶ್ನೆ ಮಾಡಿ ಬೇಸರ ಹೊರ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಭಾರತೀಯ ಸೇನಾ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಪಹಲ್ಗಾಮ್ನಲ್ಲಿ ನಡೆದ ದಾಳಿ ಭಯೋತ್ಪಾದಕ ದಾಳಿಯಲ್ಲ, ಆದರೆ ಅದು ‘ಪೂರ್ವ ಯೋಜಿತ’ ಎಂದು ಹೇಳುವುದನ್ನು ಕಾಣಬಹುದಾಗಿದೆ. ಈ ಮಾಹಿತಿಯನ್ನು ನೀಡುತ್ತಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಭಾರತೀಯ ಸೇನೆಯ ‘ಸೈನಿಕ’ ಅಶೋಕ್ ಕುಮಾರ್ ಎಂದು ಹಲವರು ಬರೆದುಕೊಂಡಿದ್ದಾರೆ.
पहलगाम पर सेना के अधिकारी ने कह दी बड़ी बात pic.twitter.com/tD7Ayrfms4
— Daily Khabar (@dailykhabar_01) April 25, 2025
ಡೈಲಿ ಖಬರ್ ಎಂಬ ಟ್ವೀಟರ್ (ಎಕ್ಸ್) ಖಾತೆಯೊಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ಪಹಲ್ಗಾಮ್ ದಾಳಿಯ ಬಗ್ಗೆ ಸತ್ಯವನ್ನು ಯೋಧನೊಬ್ಬ ಹೇಳುತ್ತಿದ್ದಾನೆ. ಇದು ಭಯೋತ್ಪಾದಕ ದಾಳಿಯಲ್ಲ, ಬದಲಿಗೆ ಯೋಜಿಸಿ ನಡೆಸಿದ ದಾಳಿ. ಇದು ಭಯೋತ್ಪಾದಕ ದಾಳಿಯಂತೆ ಕಾಣುವಂತೆ ಮಾಡಲಾಗಿದೆ, ಆದರೆ ಇದು ರಾಜಕೀಯ ದಾಳಿ. ಆರ್ಮಿ ಯೋಧನ ಮಾತನ್ನು ಕೇಳಿ” ಎಂದು ಶಮಿ ವೈ ಎಂಬಾತ ಟ್ವೀಟ್ ಮಾಡಿದ್ದಾನೆ. ಇದೇ ರೀತಿಯ ಹೇಳಿಕೆಗಳೊಂದಿಗೆ ಅಂಕಿತ್ ಕುಮಾರ್ ಮತ್ತು ರಾಜಗುರು ಜಿ ಎಂಬುವವರು ಸಹ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದ್ದು , ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಬಳಸಿಕೊಂಡು ವಿಡಿಯೋದಲ್ಲಿರುವ ಅಧಿಕಾರಿಯ ಬಗ್ಗೆ ಸರ್ಚ್ ಮಾಡಿದಾಗ,, ಅನ್ಶುಲ್ ಸಕ್ಸೇನಾ ಎಂಬುವವರ ಟ್ವೀಟ್ ಲಭ್ಯವಾಗಿದೆ. ಅದರಲ್ಲಿ, ತಾನು ಸೇನೆಯ ಅಧಿಕಾರಿಯೆಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ಕರಾಚಿಯಲ್ಲಿ ವಾಸಿಸುವ ಕಾಂಜಿ ಮಲಿಕ್ ಎಂದು ವಿವರವಾಗಿ ತಿಳಿಸಲಾಗಿದೆ. ಈ ವ್ಯಕ್ತಿ ಪಾಕಿಸ್ತಾನಿ ಸೇನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಇದೇ ರೀತಿಯ ಅಪ್ರಚಾರಗಳನ್ನು ಮಾಡುತ್ತಾನೆ ಎಂದು ಹೇಳಲಾಗಿದೆ.

ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ , ” ದಿ ರೆಸಿಸ್ಟೆನ್ಸ್ ಫ್ರಂಟ್ ಜನವರಿ 2023 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು.” ವೈರಲ್ ವೀಡಿಯೊದಲ್ಲಿ ಕಾಣುತ್ತಿರುವ ವ್ಯಕ್ತಿ ಧರಿಸಿರುವ ಸಮವಸ್ತ್ರವು ಹಳೆಯ ಸೇನಾ ಸಮವಸ್ತ್ರವಾಗಿದೆ. 2022 ರ ಸೇನಾ ದಿನದ ಪರೇಡ್ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಭಾರತೀಯ ಸೇನೆಯ ಸಮವಸ್ತ್ರವು ಈಗ ಬದಲಾಗಿದೆ.
The new combat uniform of the Indian Army was unveiled at the ‘Army Day’ parade, today. pic.twitter.com/2d1u8FwV9v
— ANI (@ANI) January 15, 2022
ಇತರ ಹಲವು ಸುದ್ದಿ ವರದಿಗಳು ಭಾರತೀಯ ಸೇನೆಯ ಹೊಸ ಸಮವಸ್ತ್ರದ ಬಗ್ಗೆಯೂ ಉಲ್ಲೇಖಿಸುತ್ತವೆ. ET ವರದಿಯ ಪ್ರಕಾರ , ಸೇನೆಯು ಈ ಹೊಸ ಸಮವಸ್ತ್ರಕ್ಕಾಗಿ ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್ ಮಾರ್ಕ್ಗಳ ನಿಯಂತ್ರಕ ಜನರಲ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದೆ ಮತ್ತು ಶೀಘ್ರದಲ್ಲೇ ಈ ಸಮವಸ್ತ್ರಗಳಿಗೆ IPR ಅಂದರೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆಯುವ ಭರವಸೆ ಇದೆ ಎಂದು ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಸೈನಿಕನೊಬ್ಬ ಭಾರತೀಯ ಸೇನಾ ಸಮಸವಸ್ತ್ರದೊಂದಿಗೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಪೂರ್ವ ನಿಯೋಜಿತ ಎಂದು ಹೇಳಿದ್ದಾನೆ ಎಂಬ ವಿಡಿಯೋ ನಕಲಿ ಎಂಬುದು ಸ್ಪಷ್ಟವಾಗಿದೆ. ವೈರಲ್ ವಿಡಿಯೋ ಎಡಿಟೆಡ್ ಆಗಿದೆ. ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿಗೂ ಭಾರತೀಯ ಸೇನೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಹಲ್ಗಾಮ್ನಲ್ಲಿ ಅಮಾಯಕ ಹಿಂದೂಗಳನ್ನು ಕೊಂದ ಭಯೋತ್ಪಾದಕರ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

