ಗೋಹತ್ಯೆ ನಿಷೇಧ ಮಸೂದೆ: ವಿಧಾನಸಭೆಯಲ್ಲಿ ಚರ್ಚೆಗೆ ತರದೇ ಅಂಗೀಕರಿಸಿದ ಬಿಜೆಪಿ ಸರ್ಕಾರ!

ಕರ್ನಾಟಕದ ಬಿಜೆಪಿ ಸರ್ಕಾರವು ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಚರ್ಚೆಗೇ ತರದೇ ನೇರವಾಗಿ ಅಂಗೀಕರಿಸಿದೆ.

ಗೋ ಹತ್ಯೆ ವಿಷೇಧ ವಿಧೇಯಕ ಮಂಡನೆಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿ, ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಚರ್ಚೆಯನ್ನು ನಾಳೆ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ, ಮಸೂದೆಯನ್ನು ಚರ್ಚೆಗೆ ಕೊಡದ ಆಡಳಿತ ಪಕ್ಷ ಬಿಜೆಪಿ ಮಸೂದೆಯನ್ನು ವಿಪಕ್ಷಗಳ ವಿರೋಧದ ನಡುವೆಯೂ ಅಂಗೀಕರಿಸಿದೆ.

ನಿನ್ನೆ ನಡೆದ ಸದನದ ಬಿಸಿನೆಸ್ ಅಡ್ವೈಸರಿ ಕಮಿಟಿಯಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ ಮಾಡುವುದಾಗಿ ತಿಳಿಸಿಲ್ಲ. ಅಲ್ಲದೆ, ಮಸೂದೆಯ ಕರಡನ್ನೂ ಸದನದ ಸದಸ್ಯರಿಗೆ, ವಿಶೇಷವಾಗಿ ಪ್ರತಿ ಪಕ್ಷಗಳಿಗೆ ನೀಡಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದು, ಮಸೂದೆಯ ಚರ್ಚೆಯನ್ನು ನಾಳೆಗೆ (ಗುರುವಾರ) ಮುಂದೂಡಬೇಕು ಎಂದು ಒತ್ತಾಯಿಸಿದ್ದರು. ಪ್ರತಿಪಕ್ಷಗಳ ಒತ್ತಾಯಕ್ಕೆ ಕಿವಿಗೊಡದ ಸರ್ಕಾರ ಮತ್ತು ಸಭಾಧ್ಯಕ್ಷರು ಮಸೂದೆಯನ್ನೂ ಅಂಗೀಕರಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

” ನಾವು ನಾಳೆ ಹೊಸ ಬಿಲ್ ಗಳನ್ನು ಪಾಸ್ ಮಾಡಿಕೊಡೋದಿಲ್ಲ ಎಂಬುದಾಗಿ ಹೇಳಿದ್ವಿ. ಹೊಸ ಬಿಲ್ ಗಳನ್ನು ಹೊರತಾಗಿ ಬೇರೆ ಬಿಲ್ ಗಳನ್ನು ತಿದ್ದುಪಡಿ ಮಾಡಿಕೊಡುತ್ತೇವೆ ಎಂಬುದಾಗಿ ತಿಳಿಸಿದ್ವಿ. ನಾನು ಈ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತ ಪಡಿಸಿದ್ದು, ಅಡಳಿತ ಪಕ್ಷ ಮತ್ತು ಸಭಾಧ್ಯಕ್ಷರು ಏಕಪಕ್ಷೀಯವಾಗಿ ಆಧಿವೇಶನವನ್ನು ನಡೆಸುತ್ತಿದ್ದಾರೆ. ನಾಳೆಯಿಂದ ನಾವು ಕಲಾಪಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಈ ಬೆನ್ನಲ್ಲೇ ಜೆಡಿಎಸ್‌ ಸದಸ್ಯರೂ ಕೂಡ ಸಭಾತ್ಯಾಗ ಮಾಡಿ ಹೊರಹೋದರು.


ಇದನ್ನೂ ಓದಿ: ಭೂಸುಧಾರಣಾ ತಿದ್ದುಪಡಿ ಕಾಯ್ದೆಗೆ ಬೆಂಬಲವನ್ನು ಸಮರ್ಥಿಸಿಕೊಂಡ ಹೆಚ್‌ಡಿಕೆ; ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights