ಕೇರಳ ಚುನಾವಣೆ: ಭರ್ಜರಿ ಗೆಲುವಿನತ್ತ ಎಡರಂಗ; ವಿಧಾನಸಭೆಯಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿ ಬಿಜೆಪಿ
ಕೇರಳದಲ್ಲಿ 945 ಗ್ರಾಮ ಪಂಚಾಯಿತಿಗಳು, 152 ಬ್ಲಾಕ್ ಪಂಚಾಯಿತಿಗಳು, 14 ಜಿಲ್ಲಾ ಪಂಚಾಯಿತಿಗಳು, 86 ಪುರಸಭೆಗಳು ಮತ್ತು ಆರು ನಿಗಮಗಳ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಡಳಿತಾರೂಢ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಒಕ್ಕೂಟವು ಮುನ್ನಡೆ ಸಾಧಿಸಿದೆ.
ಗ್ರಾಮ ಪಂಚಾಯತಿಯ 945 ಸ್ಥಾನಗಳ ಪೈಕಿ 515 ರಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದ್ದು, ಪ್ರತಿಪಕ್ಷ ಸ್ಥಾನದ್ಲಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 371 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಅಲ್ಲದೆ, ಪುರಸಭೆಯ 86 ಸ್ಥಾನಗಳ ಪೈಕಿ ಯುಡಿಎಫ್ 45 ಸ್ಥಾನಗಳಲ್ಲಿ ಹಾಗೂ ಎಲ್ಡಿಎಫ್ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ತಿರುವನಂತಪುರಂ ನಿಗಮದ 100 ವಾರ್ಡ್ಗಳಲ್ಲಿ 53 ಸ್ಥಾನಗಳನ್ನು ಎಲ್ಡಿಎಫ್ ಗೆದಿದ್ದು, ಬಹುಮತ ಹೊಂದಿದೆ; ಬಿಜೆಪಿ ನೇತೃತ್ವದ ಎನ್ಡಿಎ 34 ಸ್ಥಾನಗಳನ್ನು ಗೆದ್ದಿದೆ ಮತ್ತು ಯುಡಿಎಫ್ ಮೂರನೇ ಸ್ಥಾನದಲ್ಲಿದೆ. 2015 ರಲ್ಲಿ ಎಲ್ಡಿಎಫ್ 42 ವಾರ್ಡ್ಗಳನ್ನು ಗೆದ್ದಿದ್ದರೆ, ಬಿಜೆಪಿ ಮೈತ್ರಿಕೂಟವು 34 ವಾರ್ಡ್ಗಳನ್ನು ಗೆದ್ದಿತ್ತು.
ಅಲ್ಲದೆ, ಮೊದಲ ಬಾರಿಗೆ ಕಣ್ಣೂರು ನಿಗಮದಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದೆ.
ಇದನ್ನೂ ಓದಿ: ರೈತ ವಿರೋಧಿ ಶಾಸನಗಳು: ಬಿಜೆಪಿಯ ಹತ್ತು ಸುಳ್ಳುಗಳು!
ಆಡಳಿತಾರೂಢ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ವಿರುದ್ಧ ರಾಜ್ಯದ ಕರೋನವೈರಸ್ ಬಿಕ್ಕಟ್ಟು ಮತ್ತು ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ಯುಡಿಎಫ್ ಮೈತ್ರಿಕೂಟ ಅಸ್ತ್ರವಾಗಿ ಬಳಸಿಕೊಂಡಿತ್ತು. ಇದರ ಸುತ್ತವೇ ಪ್ರಚಾರ ನಡೆಸಿತ್ತು.
2015 ರಲ್ಲಿ, ಎಲ್ಡಿಎಫ್ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿತ್ತು. ಜಿಲ್ಲಾ ಪಂಚಾಯಿತಿಗಳಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ ತಲಾ ಏಳು ಸ್ಥಾನಗಳನ್ನು ಪಡೆದುಕೊಂಡಿದ್ದವು.
ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇದು ಅಡಿಗಲ್ಲಾಗಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.
ಸ್ಥಳೀಯ ಚುನಾವಣೆಗಳಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ, ವಿಧಾನಸಭೆಯfಲಿ ತನ್ನ ಖಾತೆ ತೆರೆಯುತ್ತೇವೆ ಎಂಬ ಹುಮ್ಮಸ್ಸಿನಲ್ಲಿದೆ.
ಇದನ್ನೂ ಓದಿ: ತೆಲಂಗಾಣ ಎಂಎಲ್ಸಿ ಚುನಾವಣೆ: ಮತದಾರರ ವೈಯಕ್ತಿಕ ಡೇಟಾ ಕದ್ದ BJP ಎಂಎಲ್ಸಿ!

