SBI ಉದ್ಯೋಗಿ, 19ರ ಯುವತಿಯ ಕತ್ತು ಹಿಸುಕಿ-ಬೆಂಕಿ ಹಚ್ಚಿ ಕೊಲೆ: ಮಾಜಿ ಪ್ರಿಯಕರನ ಬಂಧನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ಮಾಜಿ ಸ್ನೇಹಿತ ಹತ್ಯೆ ಮಾಡಿದ್ದು, ಆಕೆಯ ಶವಕ್ಕೆ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

ಸ್ನೇಹಲತಾ ಎಂಬ ಯುವತಿ  ಗೂಟಿ ರಾಜೇಶ್‌ (ಆರೋಪಿ) ಎಂಬಾತನೊಂದಿಗೆ ಡೇಟಿಂಗ್‌ ಮಾಡುತ್ತಿದ್ದರು. ಆಕೆಗೆ ಬ್ಯಾಂಕ್‌ನಲ್ಲಿ ಗುತ್ತಿಗೆ ಆಧಾರದ ಉದ್ಯೋಗ ದೊರೆತ ನಂತರ ಇಬ್ಬರೂ ದೂರವಾಗಿದ್ದರು. ಈ ವೇಳೆ ಆಕೆ ಕಾಲೇಜ್‌ನಲ್ಲಿ ತನ್ನ ಸಹಪಾಠಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಇದು ರಾಜೇಶ್‌ಗೆ ಕೋಪ ತರಿಸಿತ್ತು. ಹಾಗಾಗಿ ಆತ ಆಕೆಯನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಲತಾರನ್ನು ಮಂಗಳವಾರ ಭೇಟಿ ಮಾಡಲು ಕರೆದ ರಾಜೇಶ್‌, ಆಕೆಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾನೆ. ಮಾರ್ಗಮಧ್ಯದಲ್ಲಿ ಆಕೆ ತನ್ನ ಕ್ಲಾಸ್‌ಮೇಟ್‌ ಜೊತೆಗೆ ಸ್ನೇಹ ಬೆಳಿಸಿರುವ ವಿಚಾರವಾಗಿ ಆರೋಪಿ ಆಕೆಯನ್ನು ಪ್ರಶ್ನಿಸಿದ್ದಾನೆ. ಇಬ್ಬರ ನಡುವೆಯೂ ವಾದಗಳು ನಡೆದಿದ್ದು ರಾಜೇಶ್‌ ಆಕೆಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಆಕೆಯ ಶವಕ್ಕೆ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಆಕೆಯ ದೇಹ ಭಾಗಶಃ ಸುಟ್ಟುಹೋಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಭೂಸರಪು ಸತ್ಯ ಯೇಸು ಬಾಬು ತಿಳಿಸಿದ್ದಾರೆ.

ಆಕೆ ಮನೆಗೆ ಬಾರದ ಕಾರಣ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆಕೆಗಾಗಿ ಶೋಧ ನಡೆಸಿದ್ದಾರೆ.

ಈ ನಡುವೆ ಕೊಲೆಗೀಡಾದ ಯುವತಿಯನ್ನು ರಾಜೇಶ್‌ ಹಿಂಬಾಲಿಸುತ್ತಿದ್ದ ಎಂಬ ಮಾಹಿತಿ ಪಡೆದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಮೇಲೆ ಯಾವುದೇ ರೀತಿಯ ಲೈಂಗಿಯ ದೌರ್ಜನ್ಯ ಅಥವಾ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.


ಇದನ್ನೂ ಓದಿ: ಕೃಷಿ ನೀತಿಗಳ ಪ್ರಚಾರಕ್ಕೆ ರೈತನ ಫೋಟೋ ಬಳಿಸಿದ ಸರ್ಕಾರ; BJPಗೆ ಲೀಗಲ್‌ ನೋಟಿಸ್‌ ನೀಡಿದ ರೈತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights