ಕಾಮನ್ ಸೆನ್ಸ್ ಇಲ್ಲದ, ಸುಳ್ಳುಗಳ ಸರದಾರ ಮೋದಿ: ಬಡಗಲಪುರ ನಾಗೇಂದ್ರ

ಸತತ ಸುಳ್ಳುಗಳಿಂದ ಜನರನ್ನು ಹಾದಿ ತಪ್ಪಿಸುವುದು ಪ್ರಧಾನಿ ಮೋದಿಯವರಿಗೆ ರೂಡಿಯಾಗಿದೆ .ಇವರಿಗೆ ಕನಿಷ್ಟ ಕಾಮನ್ ಸೆನ್ಸ್ ಇಲ್ಲ ಎನ್ನುವುದು ಇವರು ತೆಗೆದುಕೊಳ್ಳುತ್ತಿರುವ ನಿರ್ಧಾರ ಗಳಿಂದ ಸಾಬೀತಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದ್ದಾರೆ.

ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿ ಕರ್ನಾಟಕದ ಹೋರಾಟಗಾರರು ದೆಹಲಿ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ಎಂದು ಮನೆಯಲ್ಲಿ ಕೂಡಿ ಹಾಕಿ ರೈತರ ಕತ್ತು ಹಿಸುಕುವ ಮೂರು ಕಾನೂನನ್ನು ಜಾರಿಗೆ ತಂದು ಪ್ರಜಾಪ್ರಭುತ್ವ ಕ್ಕೆ ಅವಮಾನಿಸಿ ಕೆಲವರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವುದು ನಿಚ್ಚಳವಾಗಿದೆ. ರೈತರ ಹೋರಾಟದ ನೈತಿಕ ಶಕ್ತಿಯನ್ನು ಎದುರಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಾಳಜಿಯಿದ್ದದ್ದೆ ಆದಲ್ಲಿ ರೈತ ಸಂಘದ ಹತ್ತು ಜನ ಸಾಮಾನ್ಯ ಕಾರ್ಯಕರ್ತರನ್ನು ಮಾತುಕತೆಗೆ ಕಳಿಸುತ್ತೇವೆ. ತಾಕತ್ತು ಇದ್ದರೆ ಪ್ರಧಾನಿ ಮುಖಾಮುಖಿ ಆಗಲಿ ಎಂದು ಸವಾಲು ಹಾಕಿದ್ದಾರೆ.

ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ ಹಾಲಿ ಇರುವ ಸರ್ಕಾರ ರೈತ ವಿರೋಧಿಯಲ್ಲ. ರೈತ ದ್ರೋಹಿ ಸರ್ಕಾರ. ಅನ್ನ,ಹಾಲು ಮುಂತಾದವುಗಳನ್ನು ಕೊಟ್ಟು ನಮ್ಮನ್ನು ಸಾಕಿ ಸಲುಹಿದ ರೈತ ಕೇಳದೆ ಇರುವಂತ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ ಎಂದರು. ಈ ಕಾನೂನು ತಿದ್ದುಪಡಿಯಿಂದ ಕೇವಲ ರೈತರಿಗೆ ಅನ್ಯಾಯ ಆಗುವುದಿಲ್ಲ. ದಲಿತ,ಕಾರ್ಮಿಕ ಗ್ರಾಹಕರಿಗೂ ಘೋರ ಅನ್ಯಾಯವಾಗಲಿದೆ ಎಂದರು.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ದಕ್ಷಿಣ ಭಾರತದ ರೈತರಿಗೆ ಈ ಸುಗ್ಹಿಯ ಕಾಲ. ಹೀಗಾಗಿ ಈ ಕಾಯ್ದೆಯ ವಿರುದ್ದದ ಹೋರಾಟ ಬಿರುಸುಗೊಂಡಿಲ್ಲ. ಸುಗ್ಗಿ ಮುಗಿದ ನಂತರ ಮಾಡುವ ಸುಗ್ಗಿ ಹಬ್ಬವನ್ನು ಹೋರಾಟದ ದಿನವನ್ನಾಗಿ ಆಚರಿಸಲಾಗುವುದು ಹಾಗೂ ಜನವರಿ ೨೬ ದೇಶದ ರೈತರು ದಲಿತರು ಕಾರ್ಮಿಕರು ದಿಲ್ಲಿ ಮುತ್ತಿಗೆ ಹಾಕುವ ಸಂದರ್ಭ ಬರವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಸುದ್ದಿ ಗೊಷ್ಟಿಯಲ್ಲಿ ಗುರುಪ್ರಸಾದ್ ಕೆರೆಗೋಡು, ಎಸ್. ಆರ್. ಹಿರೇಮಠ್, ಕಾಳಪ್ಪ, ಜಿ.ಜಿ ಹಳ್ಳಿ ನಾರಾಯಣಸ್ವಾಮಿ, ಬಿ.ಆರ್ ಪಾಟೀಲ್, ಅಪರ್ಣ, ನಾಗಮ್ಮ ಮತ್ತಿತರರು ಹಾಜರಿದ್ದರು.


ಇದನ್ನೂ ಓದಿ: ಭುಗಿಲೆದ್ದ ರೈತರ ಆಕ್ರೋಶ: ಹೆದ್ದಾರಿ ಟೋಲ್‌ ಪ್ಲಾಜಾಗಳನ್ನು ವಶಪಡಿಸಿಕೊಂಡ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights