ಬೆಂಗಳೂರಿಗೆ ಎಂಟ್ರಿ ಕೊಟ್ಟ ರೂಪಾಂತರಿ ಕೊರೊನಾ : ಮೂವರಲ್ಲಿ ಸೋಂಕು ಪತ್ತೆ!

ಬ್ರಿಟನ್ ಭೂತ ರೂಪಾಂತರಿ ಕೊರೊನಾ ವೈರಸ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತಕ್ಕೆ ಬ್ರಿಟನ್ ನಿಂದ ಬಂದವರ 33000 ಜನರ ಪೈಕಿ ಆರು ಜನರಲ್ಲಿ ಈ ರೂಪಾಂತರಿ ಕೊರೊನಾ ಪತ್ತೆಯಾಗಿದೆ. ಇದರಲ್ಲಿ ಮೂವರು ಸೋಂಕಿತರು ಬೆಂಗಳೂರಿಗರಾಗಿದ್ದಾರೆ.

ಹೌದು… ಕೊನೆಗೂ ಬ್ರಿಟನ್ ಹೊಸ ಪ್ರಬೇಧದ ಕೊರೊನಾ ಕಾಲಿಟ್ಟಿದ್ದು ಜನರಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 3ರಿಗೆ ಹೈದರಾಬಾದ್ ನಲ್ಲಿ ಇಬ್ಬರಿಗೆ, ಪುಣೆಯಲ್ಲಿ ಒಬ್ಬರಿಗೆ ಹೊಸ ಪ್ರಬೇಧದ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಮೂರು ಜನ ಸೋಂಕಿತರು ಯಾರು? ಎಲ್ಲಿಯವರು? ಎಲ್ಲಿ ಓಡಾಡಿದ್ರು? ಎನ್ನುವ ಆತಂಕ ಎದುರಾಗಿದೆ.

ದೇಶದಿಂದ ಪ್ರಯಾಣ ಮಾಡುವಂತವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಕೊಳ್ಳಬೇಕು. ಆದರೆ ಇವರು ಟೆಸ್ಟ್ ಮಾಡಿಕೊಂಡಿರಲಿಲ್ಲ ಎನ್ನಲಾಗುತ್ತಿದೆ. 19ನೇ ತಾರೀಕು ಬೆಂಗಳೂರಿಗೆ ಈ ಮೂರು ಜನ ಬಂದಿದ್ದಾರೆ. ಮೂರು ದಿನ ಇವರು ಮನೆಯಲ್ಲಿದ್ದರು. ಡಿ.22 ಕ್ಕೆ ಬಿಬಿಎಂಪಿ ಅಧಿಕಾರಿಗಳು ಇವರಿಗೆ ಟೆಸ್ಟ್ ಮಾಡಿದ್ದಾರೆ. ಬಳಿಕ ಕೊರೊನಾ ಸೊಂಕು ಇವರಲ್ಲಿರುವುದು ಕಂಡು ಬಂದಿದೆ. ಸೋಂಕು ಕಂಡು ಬಂದ ಬಳಿಕವೂ ಬಿಬಿಎಂಪಿ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಟ್ರೇಜ್ ಮಾಡಿಲ್ಲ. ಇಂತಹ ಬೇಜವಬ್ದಾರಿತನದಿಂದಲೇ ಕೊರೊನಾ ಹೆಚ್ಚೆಚ್ಚು ಹರಡಲು ಸಾಧ್ಯವಾಗಿದೆ. ಈಗಲೂ ಇಂಥಹ ತಪ್ಪುಗಳು ಮರುಕಳಿಸುತ್ತಿವೆ.

ಇನ್ನೂ ಬ್ರಿಟನ್ ನಿಂದ ಬಂದಿದ್ದ ಮಗಳಿಂದ ತಾಯಿಗೆ ಕೊರೊನಾ ಸೋಂಕು ಬಂದಿದೆ. ಆದ್ರೆ ಮಹಿಳೆಗೆ ತಗುಲಿದ್ದು ಯಾವ ಕೊರೊನಾ ಅನ್ನೋದು ಮಾತ್ರ ಪತ್ತೆಯಾಗಿಲ್ಲ. ಬೆಂಗಳೂರಿನಲ್ಲಿ ಹೊಸ ಪ್ರಬೇಧ ಹರಡಲು ಆಂರಭವಾಗಿದೆ ಎನ್ನೋ ಆತಂಕ ಶುರುವಾಗಿದೆ.ಹೈದರಾಬಾದ್ ನಲ್ಲಿ 2 ಪುಣೆಯಲ್ಲಿ ಒಬ್ಬರಿಗೆ ಆರೋಗ್ಯ ಇಲಾಖೆಯಿಂದ ಸೋಂಕಿನ ಬಗ್ಗೆ ಮಾಹಿತಿ ನೀಡಿದೆ.

ಸಂಜೆ ಅಧಿಕೃತವಾಗಿ ಘೋಷಸುವ ಸಾಧ್ಯತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights