ಗ್ರಾಮ ಪಂ. ಚುನಾವಣೆ; 54,041 ಸ್ಥಾನಗಳ ಫಲಿತಾಂಶ ಪ್ರಕಟ; BJPಗೆ ಮೇಲುಗೈ

ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಗುರುವಾರವೂ ಮುಂದುವರೆದಿದೆ. ರಾಜ್ಯದ ಒಟ್ಟು 91,339 ಸ್ಥಾನಗಳ ಪೈಕಿ 54,041 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಕರ್ನಾಟಕದ 5,728 ಗ್ರಾಮ ಪಂಚಾಯಿತಿಗಳ ಒಟ್ಟು 91,339 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬುಧವಾರ ಬೆಳಗ್ಗೆ ಆರಂಭಗೊಂಡ ಮತ ಎಣಿಕೆ ಪ್ರಕ್ರಿಯೆ ಗುರುವಾರವೂ ಮುಂದುವರೆದಿದೆ.

ಬುಧವಾರ ತಡರಾತ್ರಿಯ ವೇಳೆಗೆ 54,041 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಬಾಕಿ ಉಳಿದ 36,781 ಸ್ಥಾನಗಳ ಫಲಿತಾಂಶ ಗುರುವಾರ (ಇಂದು) ಘೋಷಣೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆರಂಭಿಕ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು ಶೇಕಡಾ 48ರಷ್ಟು ವೋಟಿಂಗ್ ಬಂದಿದೆ ಎಂದು ಹೇಳಲಾಗುತ್ತಿದ್ದು, ಇಂದು ಸಂಪೂರ್ಣ ಫಲಿತಾಂಶ ಬರುವ ಹೊತ್ತಿಗೆ ಶೇಕಡಾ 52ರಷ್ಟು ಫಲಿತಾಂಶ ಬಿಜೆಪಿ ಪರ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಪ್ರತಿ ಸುತ್ತಿಗೆ ಸುಮಾರು 2 ಗಂಟೆ ಮತ ಎಣಿಕೆಗೆ ಸಮಯ ಹಿಡಿಯುವುದರಿಂದ ಬ್ಯಾಲಟ್ ಗಳ ಎಣಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪ್ರತಿ ಸುತ್ತಿನ ನಂತರ ಮತ ಎಣಿಕೆ ಮಾಡುವ ಏಜೆಂಟ್ ಗಳು ಬದಲಾಗುತ್ತಿದ್ದು, ಅಲ್ಲಿ ಏನಾದರೂ ಆಕ್ಷೇಪ ವ್ಯಕ್ತವಾದರೆ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಧರ್ಮೇಗೌಡರನ್ನು ಕೊಂದವರು ಯಾರು? ಆತ್ಮಹತ್ಯೆಗೆ ಕಾರಣಗಳೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights