ಒಂದು ಸಿಸಿ ಕ್ಯಾಮರಾ ಬೆಲೆ 8 ಲಕ್ಷ: ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಎಎಪಿ ಪ್ರಶ್ನೆ!
ನಿರ್ಭಯಾ ನಿಧಿ ಕದ್ದ ಕಳ್ಳರು ಅತ್ಯಾಚಾರಿಗಳಿಗೆ ಸಮಾನರು ಬಿಜೆಪಿಯವರು ಸರ್ಕಾರಿ ಕಳ್ಳರು ಇವರನ್ನು ಸಹ ಗಲ್ಲಿಗೇರಿಸಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.
ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ನಿರ್ಭಯಾ ನಿಧಿ “ಸೇಫ್ ಸಿಟಿ” ಹಗರಣದ ನ್ಯಾಯಯುತ ತನಿಖೆಗೆ ಆಗ್ರಹಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಮಹಿಳಾ ಸುರಕ್ಷತೆ ಕ್ರಾಂತಿಯಾಗಬೇಕೆ ಹೊರತು, ಕೊಳ್ಳೆ ಹೊಡೆಯುವ ವಿಷಯವಾಗಬಾರದು, ₹612 ಕೋಟಿ ಮೊತ್ತದ ನಿಧಿಯನ್ನು ಬಳಸಿಕೊಂಡು ಬೆಂಗಳೂರು ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ರೂಪಿಸುವ ಯೋಜನೆಯಲ್ಲು ಎಂಜಲು ಕಾಸು ಕಸಿಯಲು ಹೊರಟ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಡೆಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ದೆಹಲಿಯ ಆಮ್ ಆದ್ಮಿ ಪಕ್ಷ ಮಾಡಿದ ಮೊಟ್ಟ ಪ್ರಮುಖ ಸ್ಥಳಗಳಲ್ಲಿ ಮೊದಲ ಹಂತದಲ್ಲಿ ಸುಮಾರು 1.4 ಲಕ್ಷ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ದೆಹಲಿಯಲ್ಲಿ ಅಳವಡಿಸಿರುವ ಅತ್ಯುತ್ತಮ ಗುಣ ಮಟ್ಟದ ಸಿಸಿ ಟಿವಿ ಕ್ಯಾಮೆರಾ ಬೆಲೆ 40 ಸಾವಿರ, ಆದರೆ ನಮ್ಮಲ್ಲಿ 8 ಲಕ್ಷ! ಏನಿದರ ಮರ್ಮ ಎಂದು ಪ್ರಶ್ನಿಸಿದರು.
ಅತ್ಯುತ್ತಮ ಸರ್ಕಾರಿ ಸಂಸ್ಥೆ ಬಿಇಎಲ್ ದೆಹಲಿಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡಿದ್ದು, 1.4 ಲಕ್ಷ ಕ್ಯಾಮೆರಾಗಳಿಗೆ ಖರ್ಚಾಗಿರುವುದು 572 ಕೋಟಿ, ಬೆಂಗಳೂರಿನಲ್ಲಿ ಅಳವಡಿಸುತ್ತಿರುವ ಕೇವಲ 7500 ಕ್ಯಾಮೆರಾಗಳಿಗೆ ಏಕೆ 619 ಕೋಟಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮನೆ ಮುಂದಿನ ವಾಹನಕ್ಕೂ ಪಾರ್ಕಿಂಗ್ ಶುಲ್ಕ; ಉಸಿರಾಡಲೂ ಶುಲ್ಕ ಕಟ್ಟಬೇಕೆ?: ಎಎಪಿ ವಿರೋಧ
ಹಗರಣದ ವಿರುದ್ದ ಮಾತನಾಡಿದ ಐಪಿಎಸ್ ಅಧಿಕಾರಿ ರೂಪ ಹಾಗೂ ಈ ಅಕ್ರಮದ ಆರೋಪ ಹೊತ್ತಿರುವ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ ಈ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ, ಈ ಕೂಡಲೇ ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಹಗರಣದ ವಿರುದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಾತನಾಡದೆ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ, ಎಲ್ಲರೂ ಸೇರಿ ಹಣ ಹೊಡೆಯುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಬೆಂಗಳೂರು ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್.ವಿ ಸೇರಿದಂತೆ ನೂರಾರು ಕಾರ್ಯಕರ್ತರು ಸೇರಿದ್ದರು.
ಇದನ್ನೂ ಓದಿ: “ಗೊರಕೆ ಸಾಕು ಪೊರಕೆ ಬೇಕು”: BBMP ಚುನಾವಣೆಗೆ ಎಎಪಿ ಅಭಿಯಾನ!

