ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಕೇಂದ್ರದಲ್ಲಿ 40 ವರ್ಷದ ರೈತ ಆತ್ಮಹತ್ಯೆ..!

ಸುಮಾರು ಒಂದುವರೆ ತಿಂಗಳಿಗಿಂತ ಹೆಚ್ಚು ದಿನಗಳವರೆಗೆ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನೂರಾರು ರೈತರಲ್ಲಿ ಒಬ್ಬರಾದ 40 ವರ್ಷದ ವ್ಯಕ್ತಿ ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಗು ಎಂಬಲ್ಲಿ ಶನಿವಾರ ವಿಷಕಾರಿ ವಸ್ತುವನ್ನು ಸೇವಿಸಿ ಸಾವನ್ನಪ್ಪಿದ್ದಾರೆ.

ಮೃತ ರೈತನನ್ನು ಪಂಜಾಬ್‌ನ ಫತೇಘರ್ ಸಾಹಿಬ್‌ನ ಅಮರಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಮೂರು ಹೊಸ ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ನಿರಾಕರಿಸಿದ್ದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಈ ವೇಳೆ ಅಮರಿಂದರ್ ಸಿಂಗ್ ಅವರನ್ನು  ಸೋನಿಪತ್‌ನ ಫಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಅವರು ನಿಧನರಾಗಿದ್ದಾರೆ. ಅವರ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಅಮರೀಂದರ್ ಸಿಂಗ್ ಅವರ ಕುಟುಂಬವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗದ ಕಾರಣ ಶವವನ್ನು ಪ್ರತಿಭಟನಾ ಸ್ಥಳದಲ್ಲಿ ಇತರ ರೈತರಿಗೆ ಹಸ್ತಾಂತರಿಸಲಾಗಿದೆ. ಈ ತಿಂಗಳು ವರದಿಯಾದ ಎರಡನೇ ರೈತನ ಸಾವು ಇದಾಗಿದ್ದು, ಕಳೆದ ವಾರ ದೆಹಲಿ-ಗಾಜಿಯಾಬಾದ್ ಗಡಿ ಬಳಿ ಪ್ರತಿಭಟನಾ ಸ್ಥಳದಲ್ಲಿ 75 ವರ್ಷದ ರೈತ ಮೃತಪಟ್ಟಿದ್ದರು.ನವೆಂಬರ್‌ನಲ್ಲಿ ಆಂದೋಲನ ಪ್ರಾರಂಭವಾದಾಗಿನಿಂದ ಡಜನ್ಗಟ್ಟಲೆ ಜನರು ಪ್ರತಿಭಟನೆಯಿಂದಾಗಿ ಸಾವನ್ನಪ್ಪಿದ್ದಾರೆ. ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತ ಸಂಘಟನೆಗಳು ಹೇಳಿವೆ.

ಆರಂಭದಲ್ಲಿ ಲಾಠಿ ಚಾರ್ಜ್, ಅಶ್ರುವಾಯುವಿಗೆ ಹೆದರದೆ ದೆಹಲಿ ಚಳಿ ಮಳೆಗೆ ಎದೆಗುಂದದೆ ಪ್ರತಿಭಟನೆ ಮುಂದುವರೆಸಿದ್ದಾರೆ. ಇನ್ನೆಷ್ಟು ರೈತರ ಜೀವ ಕೇಂದ್ರ ಸರ್ಕಾರ ನಿರೀಕ್ಷಿಸುತ್ತಿದೆ ಎಂದು ಘಟನೆಯಿಂದ ಆಕ್ರೋಶಗೊಂಡ ಜನ ಪ್ರಶ್ನಿಸುತ್ತಿದ್ದಾರೆ.

ಜನವರಿ 15 ರಂದು ಒಂಬತ್ತನೇ ಸುತ್ತನ್ನು ಮಾತುಕತೆ ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಜನವರಿ 26ರ ರಂದು ದೆಹಲಿಗೆ ಪ್ರವೇಶಿಸಲು ರೈತರು ಟ್ರಾಕ್ಟರ್ ರ್ಯಾಲಿಯನ್ನು ನಡೆಸಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights