ಅತ್ಯಾಚಾರ ಅರೋಪ; ಧನಂಜಯ ಮುಂಡೆ ಸಚಿವ ಸ್ಥಾನಕ್ಕೆ ಸಮಸ್ಯೆಯಿಲ್ಲ: ಶರದ್ ಪವಾರ್
ಮಹಾರಾಷ್ಟ್ರದಲ್ಲಿ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಸಚಿವ ಧನಂಜಯ ಮುಂಡೆ ಅವರು ಸಚಿವ ಸಂಪುಟದಲ್ಲಿ ಮುಂದುವರೆಯಲು ಯಾವುದೇ ತೊಡಕಿಲ್ಲ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.
ಗಾಯಕಿ ಮತ್ತು ಆಕೆಯ ಸಹೋದರಿ ಸಚಿವ ಮುಂಡೆ ಅವರನ್ನು ಹಲವು ದಿನಗಳಿಂದ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಅವರು ಇತರ ಪಕ್ಷದ ನಾಯಕರಿಗೂ ಸಹ ಕಿರುಕುಳ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಗಂಭೀರ ಪ್ರಕರಣವಾಗಿದ್ದು, ಅತ್ಯಾಚಾರ ಆರೋಪ ಸಾಬೀತಾಗುವವರೆಗೂ ಮುಂಡೆ ಅವರು ಸಚಿವರಾಗಿ ಮುಂದುವರೆಯುತ್ತಾರೆ ಎಂದು ಅವರು ಹೇಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಸಚಿವ ಮುಂಡೆ ಅವರ ಮೇಲೆ ಮಾಡಿರುವ ಅತ್ಯಾಚಾರ ಆರೋಪ ಪೂರ್ವ ನಿರ್ಧರಿತ ಹಾಗೂ ಯೋಜಿತ ಕ್ರಮವಾಗಿದೆ ಎಂಬುದು ಸ್ಪಷ್ಟ. ಆದ್ದರಿಂದ ಅವರನ್ನು ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಪವಾರ್ ತಿಳಿಸಿದ್ದಾರೆ.
ಶರದ್ ಪವಾರ್ ಸೇರಿದಂತೆ ಮಹಾರಾಷ್ಟ್ರ ಅಘಾಡಿ ಸಂಪುಟದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಹಾಗೂ ಹಿರಿಯ ನಾಯಕ ಪ್ರಫುಲ್ ಪಟೇಲ್ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾಂಗ್ರೆಸ್ ಸಚಿವನ ವಿರುದ್ದ ಅತ್ಯಾಚಾರ ಆರೋಪ; ಪೊಲೀಸರಿಗೆ ದೂರು ನೀಡಿದ ಗಾಯಕಿ!

