ಜೋ ಬಿಡೆನ್ ಸರ್ಕಾರಕ್ಕೆ ಯಶಸ್ಸನ್ನು ಬಯಸಿದ ಡೊನಾಲ್ಡ್ ಟ್ರಂಪ್…!

ಯುಎಸ್ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಹೋರಾಟ ಮಾಡಿದ ಡೊನಾಲ್ಡ್ ಟ್ರಂಪ್ ಮಂಗಳವಾರ ಬೀಳ್ಕೊಡುಗೆ ಭಾಷಣದಲ್ಲಿ ಜೋ ಬಿಡೆನ್ ಸರ್ಕಾರಕ್ಕೆ ಯಶಸ್ಸನ್ನು ಬಯಸಿದರು.

ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅವರ ಹೊಸ ಆಡಳಿತಕ್ಕಾಗಿ ಪ್ರಾರ್ಥನೆ ಕೋರಿದ ಟ್ರಂಪ್ “ಈ ವಾರ, ನಾವು ಹೊಸ ಆಡಳಿತವನ್ನು ಉದ್ಘಾಟಿಸುತ್ತೇವೆ ಮತ್ತು ಅಮೆರಿಕವನ್ನು ಸುರಕ್ಷಿತವಾಗಿ ಸಮೃದ್ಧವಾಗಿಡುವಲ್ಲಿ ಪ್ರಾರ್ಥಿಸುತ್ತೇವೆ” ಎಂದಿದ್ದಾರೆ.

ಕಳೆದೊಂದು ವಾರದಿಂದ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸದೆ ಮೌನವಾಗಿ ಉಳಿದಿದ್ದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಬಾರಿಗೆ ನಿನ್ನೆ ವಿದಾಯದ ಮಾತುಗಳನ್ನಾಡಿದ್ದಾರೆ. ಅದನ್ನು ಇಂದು ಶ್ವೇತಭವನ ಪ್ರಸಾರ ಮಾಡಲಿದೆ.

ಕೊರೊನಾ ನಿರ್ಬಂಧದ ನಡುವೆ ಇಂದು ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಪದಗ್ರಹಣ ಸ್ವೀಕಾರ ಸಮಾರಂಭ ನಡೆಯಲಿದೆ. ಕಳೆದ ಜನವರಿ 6ರಂದು ಟ್ರಂಪ್ ಪರ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್ ನಲ್ಲಿ ನಡೆಸಿರುವ ಗಲಭೆಯಿಂದ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದೆ. ಬಲಪಂಥೀಯರು ದಾಳಿ ನಡೆಸುವ ಭೀತಿಯಿಂದ ಸೇನಾಪಡೆಗಳನ್ನು ನಿಯೋಜಿಸಲಾಗಿದ್ದು, ಕಾಂಕ್ರೀಟ್ ತಡೆಗೋಡೆಗಳನ್ನು ರಚಿಸಲಾಗಿದೆ. ಭದ್ರತೆಯ ಪ್ರದೇಶಗಳನ್ನು ಹಸಿರು ಮತ್ತು ಕೆಂಪು ವಲಯಗಳೆಂದು ಗುರುತಿಸಲಾಗಿದೆ.

ಇದರ ಮಧ್ಯೆ, ಸೆನೆಟ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಸದ್ಯದಲ್ಲಿಯೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ರಾಜಧಾನಿಯಲ್ಲಿನ ಗಲಭೆಗೆ ಸಂಬಂಧಿಸಿದಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡನೆ ಬಾರಿ ದೋಷಾರೋಪಣೆ ಸಲ್ಲಿಸಿದ್ದು ಇದಕ್ಕೆ ಕಾರಣವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights