ಕೇಂದ್ರದಲ್ಲಿ BJP ಮತ್ತೆ ಅಧಿಕಾರಕ್ಕೆ ಬಂದರೆ 3,500 ಮಸೀದಿಗಳು ನೆಲಸಮ: ಅಸ್ಸಾಂ ಸಂಸದ

ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿರುವ 3,500 ಮಸೀದಿಗಳನ್ನು ನೆಲಸಮ ಮಾಡುತ್ತದೆ ಎಂದು ಅಸ್ಸಾಂ ಸಂಸದ, ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಮುಖಂಡ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.

“ನಿಮ್ಮ ಪ್ರದೇಶದ ವಿವಿಧ ಮಸೀದಿಗಳು ಅವರ (ಬಿಜೆಪಿಯ) ರೇಡಾರ್‌ನಲ್ಲಿವೆ. ಭಾರತದಲ್ಲಿರುವ ಮಸೀದಿಗಳ ಪೈಕಿ ಒಟ್ಟು 3,500 ಮಸೀದಿಗಳು ಅವರ ಪಟ್ಟಿಯಲ್ಲಿವೆ. ಕೇಂದ್ರದಲ್ಲಿ ಮತ್ತೆ (2024) ಬಿಜೆಪಿ ಸರ್ಕಾರವನ್ನು ರಚಿಸಿದರೆ ಅವುಗಳು ನೆಲಸಮವಾಗುತ್ತವೆ” ಎಂದು ಧುಬ್ರಿ ಕ್ಷೇತ್ರದ ಗೌರಿಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಜ್ಮಲ್ ಹೇಳಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

‘ಕುರಾನ್‌ನಲ್ಲಿ ತ್ರಿವಳಿ ತಲಾಖ್ ಗೆ ಅವಕಾಶ ನೀಡಲಾಗಿದೆ, ಇದು ಅಲ್ಲಾಹನ ಮಾತು. ಆದರೆ ನರೇಂದ್ರ ಮೋದಿ ಸರ್ಕಾರ ಅದನ್ನು ನಾಶಪಡಿಸಿತು. ಬಾಬರಿ ಮಸೀದಿಯನ್ನು ಬಿಜೆಪಿ ನೆಲಸಮ ಮಾಡಿತು’ ಎಂದು ಅವರು ಆರೋಪಿಸಿದರು.

ಅಸ್ಸಾಂನಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ಮಹಿಳೆಯರಿಗೆ ಬುರ್ಖಾ ಧರಿಸಲು ಸಾಧ್ಯವಾಗುವುದಿಲ್ಲ, ಗಡ್ಡ ಬಿಟ್ಟು, ಟೋಪಿ ಧರಿಸಿದವರು ತಮ್ಮ ಮನೆಗಳಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ ಮತ್ತು ನೀವೆಲ್ಲರೂ ಮಸೀದಿಗಳಲ್ಲಿ ಅಜಾನ್ ನೀಡಲು ಸಹ ಅವಕಾಶ ಇರುವುದಿಲ್ಲ” ಅಜ್ಮಲ್ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಸ್ಸಾಂ ಚುನಾವಣೆ: ಕಾಂಗ್ರೆಸ್‌ನಿಂದ ಗೆದ್ದಿದ್ದ ಏಕೈಕ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ!

“ನಿಮ್ಮ ಮನೆಯಲ್ಲಿ ನೀವು ಯಾವ ಮಾಂಸವನ್ನು ತಿನ್ನುತ್ತೀರಿ ಎಂದು ಬಿಜೆಪಿ ನಿರ್ಧರಿಸುತ್ತದೆ? ನೀವು ಅದನ್ನು ಸ್ವೀಕರಿಸುತ್ತೀರಾ? ನಾವು ಬಿಜೆಪಿಯ ಸೇವಕರಾಗಿದ್ದೇವೆಯೇ? ಒಬ್ಬರು ಇಷ್ಟಪಡುತ್ತಾರೋ ಇಲ್ಲವೋ, ನಾವು ಖಂಡಿತವಾಗಿಯೂ ನಮ್ಮ ಧರ್ಮದಿಂದ ಅಂಗೀಕರಿಸಲ್ಪಟ್ಟ ಆ ಪ್ರಾಣಿಗಳ ಮಾಂಸವನ್ನು ತಿನ್ನುತ್ತೇವೆ ”ಎಂದು ಅಜ್ಮಲ್ ಹೇಳಿದರು.

ಅಜ್ಮಲ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಪ್ರಸಂತ ಫುಕಾನ್, “ದೇಶವು 2014 ರಿಂದ ಮೋದಿ ಸರ್ಕಾರದ ಅಧೀನದಲ್ಲಿದೆ. ಎಷ್ಟು ಮಸೀದಿಗಳನ್ನು ನೆಲಸಮ ಮಾಡಲಾಗಿದೆ ಎಂದು ಅಜ್ಮಲ್‌ ಅವರನ್ನು ಕೇಳಲು ಬಯಸುತ್ತೇನೆ. ಅವರು ಪ್ರಚೋದನಕಾರಿ ಹೇಳಿಕೆಯ ಮೂಲಕ ಮುಸ್ಲಿಂ ಮತಗಳನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳಕ್ಕಿಂತ ಅಸ್ಸಾಂ ಗೆಲ್ಲುವುದು ಷಾ-ಮೋದಿಗೆ ಅತ್ಯಂತ ನಿರ್ಣಾಯಕ-ಅತ್ಯಗತ್ಯ! ಏಕೆ ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights