ದೆಹಲಿಯ ಕೆಂಪುಕೋಟೆ ತಲುಪಿದ ರೈತರು: ಮೊಳಗುತ್ತಿವೆ ರೈತ ಘೋಷಣೆಗಳು!

ಇಂದು ಗಣರಾಜ್ಯೋತ್ಸವದ ಭಾಗವಾಗಿ ರೈತರು ಜನಗಣರಾಜ್ಯ ಆಚರಣೆ ನಡೆಸುತ್ತಿದ್ದು, ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಬೆಳಗ್ಗೆ ಗಾಝಿಪುರದಿಂದ ಟ್ರ್ಯಾಕ್ಟರ್‌ ಮೂಲಕ ಹೊರಟ ರೈತರು ಯಾವುದೇ ಅಡ್ಡಿಗಳಿಲ್ಲದೆ 12.15ಕ್ಕೆ ಕೆಂಪುಕೋಟೆ ತಲುಪಿದ್ದಾರೆ.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆ ಅತಿ ಮುಖ್ಯ ಕೇಂದ್ರವಾಗಿದ್ದು, ಪ್ರಧಾನಿಗಳ ಗಣತಂತ್ರ ಪರೇಡ್‌ ಹಾಗೂ ದೇಶವನ್ನುದ್ದೇಶಿಸಿ ಇಲ್ಲಿಂದಲೇ ಭಾಷಣ ಮಾಡಿದ್ದಾರೆ.

ಈ ಸ್ಥಳವನ್ನು ರೈತರು 50ಕ್ಕೂ ಹೆಚ್ಚು ಟ್ರಾಕ್ಟರ್‌ಗಳಲ್ಲಿ ತಲುಪಿದ್ದಾರೆ. ಪರೇಡ್‌ತಡೆಯಲು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಕೆಂಪುಕೋಟೆ ಪ್ರದೇಶವನ್ನು ಪ್ರವೇಶಿಸಿದ್ದು, ಪೊಲೀಸರು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವ ಪ್ರಯತ್ನ ಮಾಡಿಲ್ಲ.

ಇನ್ನು ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಈ ಪ್ರದೇಶವನ್ನು ತಲಪುವ ನಿರೀಕ್ಷೆ ಇದೆ.

ಇದನ್ನೂ ಓದಿ: ರೈತರ ಪರೇಡ್‌ಗೆ ಬೆಂಬಲ: ಬೆಂಗಳೂರಿನಲ್ಲಿ 10,000 ಹೋರಾಟಗಾರರಿಗೆ ಊಟ ನೀಡಿದ ಟ್ರಾನ್ಸ್ ಜೆಂಡರ್ ಸಮುದಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights