ಕೇಂದ್ರ ಬಜೆಟ್‌ನಲ್ಲಿ ಮುಖ್ಯವಾಗಿ ಏನಿರಬೇಕು: ರಾಹುಲ್‌ಗಾಂಧಿ ಹೇಳಿದ ಮೂರು ಅಂಶಗಳು!

ಸಂಸತ್‌ನಲ್ಲಿ ಇಂದು 2021-22ನೇ ಆರ್ಥಿಕ ಸಾಲಿನ ಬಜೆಟ್‌ ಮಂಡನೆಯಾಗುತ್ತಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡುತ್ತಿದ್ದು, ಕೊರೊನಾ ನಂತರದಲ್ಲಿ ದೇಶದ ಜನರಿಗೆ ಕೇಂದ್ರದಿಂದ ಭಾರೀ ಕೊಡುಗೆ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈ ನಡುವೆ ಬಜೆಟ್‌ನಲ್ಲಿ ಮುಖ್ಯವಾಗಿ ಏನೇನು ಇರಲೇಬೇಕು ಎಂದು ರಾಹುಲ್‌ಗಾಂಧಿ ಪಟ್ಟಿ ಮಾಡಿದ್ದು, ಟ್ವೀಟ್‌ ಮಾಡಿದ್ದಾರೆ.

ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಟ್ವೀಟ್‌ ಮಾಡಿರುವ ರಾಹುಲ್‌ಗಾಂಧಿ, ಪ್ರಮುಖ ಮೂರು ಅಂಶಗಳು ಬಜೆಟ್‌ನಲ್ಲಿ ಇರಬೇಕು ಎಂದು ಆಗ್ರಹಿಸಿದ್ದಾರೆ. ಮೂರು ಅಂಶಗಳು ಹೀಗಿವೆ:

* ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಿಗೆ (ಎಂಎಸ್‌ಎಂಇ) ಬೆಂಬಲ, ರೈತರು ಮತ್ತು ಕೆಲಸಗಾರರಿಗೆ ಒತ್ತು ಕೊಡುವ ಮೂಲಕ ಉದ್ಯೋಗ ಸೃಷ್ಟಿಸಬೇಕು.
* ಜೀವಗಳ ರಕ್ಷಣೆಗಾಗಿ ಆರೋಗ್ಯ ಸುರಕ್ಷತಾ ವಲಯಕ್ಕಾಗಿ ಅನುದಾನ ಹೆಚ್ಚಿಸುವುದು.
* ದೇಶದ ಗಡಿಗಳ ರಕ್ಷಣೆಗಾಗಿ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತುಕೊಡಬೇಕು ಎಂದು ರಾಹುಲ್‌ಗಾಂಧಿ ಒತ್ತಾಯಿಸಿದ್ದಾರೆ.

ನಿರ್ಮಲಾ ಸೀತಾರಾಮ್‌ ಅವರು ಬಜೆಟ್‌ ಮುದ್ರಣ ಪ್ರತಿಯ ಬದಲು ಟ್ಯಾಬ್‌ ಹಿಡಿದು ಬಜೆಟ್‌ ಮಂಡಿಸುತ್ತಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ಗೆ ಭಾರೀ ಪೈಪೋಟಿ ಕೊಟ್ಟ BJP; ಗೆದ್ದು ಬೀಗಿದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights