ಮ.ಪ್ರದೇಶ BJPಯಲ್ಲಿ ಸಿಂಧಿಯಾ ಬೆಂಬಲಿಗರ ಬಂಡಾಯ?; ಬಿಜೆಪಿ ಉಸ್ತುವಾರಿ ಹೇಳಿದ್ದೇನು?

ಮಧ್ಯಪ್ರದೇಶದ ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ರಚನೆಯಾದ ಕಾರ್ಯಕಾರಿ ಸಮಿತಿಯಲ್ಲಿ ಕಾಂಗ್ರೆಸ್‌ ತೊರೆದು ಕೇಸರಿ ಪಡೆ ಸೇರಿದ ಜ್ಯೋತಿರಾಧಿತ್ಯಾ ಸಿಂಧಿಯಾ ಅವರ ಬೆಂಬಲಿಗರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಲಾಗಿಲ್ಲ. ಹೀಗಾಗಿ ಅವರೆಲ್ಲೂ ಪಕ್ಷದ ಮೇಲೆ ಬೇಸರಗೊಂಡಿದ್ದಾರೆ. ಅವರೆಲ್ಲರೂ ಪಕ್ಷದಲ್ಲಿ ಅಭದ್ರತೆಯ ಭಾವನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರಳಿಧರ್ ರಾವ್ ತೆರೆ ಎಳೆದಿದ್ದಾರೆ.

ಬಿಜೆಪಿಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕೇವಲ ಅವರೊಂದಿಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದವರಿಗೆ ಮಾತ್ರ ನಾಯಕರಲ್ಲ, ಅವರು ಇಡೀ ಬಿಜೆಪಿಗೆ ನಾಯಕರು. ಸಿಂಧಿಯಾ ಮತ್ತು ಅವರ ಬೆಂಬಲಿಗರಿಗೆ ಬಿಜೆಪಿಯಲ್ಲಿ ಯಾವುದೇ ರೀತಿಯ ಅಭದ್ರತೆಯ ಭಾವನೆ ಇಲ್ಲ ಎಂದು ಮುರಳಿಧರ್‌ ರಾವ್‌ ತಿಳಿಸಿದ್ದಾರೆ.

ಈ ಎಲ್ಲಾ ನಾಯಕರು ಎಲ್ಲಿಂದ ಬಂದರು ಎಂಬುದು ಮುಖ್ಯವಲ್ಲ, ಅವರೆಲ್ಲರೂ ಈಗ ಬಿಜೆಪಿ ಬಿಜೆಪಿಯಲ್ಲಿ ಬೆರೆತಿದ್ದಾರೆ. ಅವರೆಲ್ಲರೂ ಬಿಜೆಪಿಗರು ರಂದು ರಾವ್ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ಗೆ ಭಾರೀ ಪೈಪೋಟಿ ಕೊಟ್ಟ BJP; ಗೆದ್ದು ಬೀಗಿದ ಕಾಂಗ್ರೆಸ್‌!

ಕಾರ್ಯಕಾರಿ ಸಮಿತಿಯಲ್ಲಿ ಸಿಂಧಿಯಾ ಬೆಂಬಲಿಗರನ್ನು ಕಡೆಗಣಿಸಲಾಗಿದ್ದು, ಅವರು ಆಕ್ರೋಶಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು, ಎಲ್ಲರಿಗೂ, ಎಲ್ಲೆಡೆ ಅವಕಾಶ ಸಾಧ್ಯವಿಲ್ಲ. ರಾಜ್ಯ ಬಿಜೆಪಿಯಲ್ಲಿ ಒಂದು ಕೋಟಿ ಸದಸ್ಯರನ್ನು ಪಕ್ಷಕ್ಕೆ ಕರೆತಂದ, ಅದಕ್ಕಾಗಿ ದಣಿವರಿಯದೆ ದುಡಿದ ನಮ್ಮ ಎಲ್ಲಾ ಕಾರ್ಯಕರ್ತರಿಗೂ ಹೊಸದಾಗಿ ಸ್ಥಾಪಿಸಲಾದ ಕಾರ್ಯಕಾರಿ ಸಮಿತಿಯಲ್ಲಿ ಅವಕಾಶ ಸಿಕ್ಕಿದೆಯೇ? ಎಂದು ಪ್ರಶ್ನಿಸಿದ್ದಾರೆ.

“ಬಿಜೆಪಿಯಲ್ಲಿ ಯಾವುದೇ ನಾಯಕನಿಗೂ ಹೆಚ್ಚು ಅಥವಾ ಕಡಿಮೆ ಆಧ್ಯತೆಯನ್ನು ನೀಡುವುದಿಲ್ಲ. ಜ್ಯೋತಿರಾಡಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿಗೆ ಬಂದವರಿಗೆ ಮಂತ್ರಿ ಸ್ಥಾನಗಳನ್ನು ನೀಡಲು ನಾವು ನಮ್ಮ ಹಿರಿಯ ನಾಯಕರನ್ನು ಕೈಬಿಟ್ಟಿದ್ದೇವೆ (ಹಿಂದೆ ತಳ್ಳಿದ್ದೇವೆ) ಎಂಬುದನ್ನು ದಯವಿಟ್ಟು ನೆನಪಿಡಿ” ಎಂದು ರಾವ್ ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ, ಸಿಂಧಿಯಾ ಸೇರಿದಂತೆ ಅವರನ್ನು ಬೆಂಬಲಿಸುವ 22 ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ತೊರೆದು ತಮ್ಮ ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇದರಿಂದಾಗಿ, ರಾಜ್ಯದಲ್ಲಿ ಕಮಲ್ ನಾಥ್ ಸರ್ಕಾರದ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ವರದಿ ಮಾಡಿದ ಪತ್ರಕರ್ತೆಗೆ ABVP ಕಾರ್ಯಕರ್ತನಿಂದ ಅತ್ಯಾಚಾರ-ಕೊಲೆ ಬೆದರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights