Fact Check: ಈ ಫೋಟೋ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಾ?

ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ಪ್ರತಿಭಟನಾನಿರತ ಒಂದು ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿದಾಗಿನಿಂದ ರಾಜಧಾನಿಯಾದ್ಯಂತ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕೆಲ ನೆಟ್ಟಿಗರು ನಾಗರಿಕ ಉಡುಪಿನಲ್ಲಿರುವ ಪುರುಷರ ಗುಂಪಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ  ಹೆಲ್ಮೆಟ್ ಮತ್ತು ಇತರ ರಕ್ಷಣಾತ್ಮಕ ಸಾಧನಗಳನ್ನು ಹೊಂದಿದ ಇವರು ಜೀನ್ಸ್ ಮತ್ತು ಸ್ವೆಟ್‌ಶರ್ಟ್‌ಗಳನ್ನು ಧರಿಸಿದ್ದಾರೆ. ರೈತರ ಪ್ರತಿಭಟನೆಗಾಗಿ ದೆಹಲಿ ಪೊಲೀಸರು ತನ್ನ ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ ಎಂದು ಹಲವರು ವ್ಯಂಗ್ಯವಾಗಿ ಹೇಳಿದರೆ ಇನ್ನೂ ಕೆಲವರು ಇವರನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಎಂದು ಹೇಳಿದ್ದಾರೆ.

ಆದರೆ ಈ ಫೋಟೋ ಒಂದು ವರ್ಷಕ್ಕಿಂತ ಹಳೆಯದಾಗಿದೆ. ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ತೆಗೆದ ಫೋಟೋವಿದು. ಪುರುಷರು ಆಂಟಿ-ಆಟೋ ಥೆಫ್ಟ್ ಸ್ಕ್ವಾಡ್ (ಎಎಟಿಎಸ್) ಗೆ ಸೇರಿದವರಾಗಿದ್ದು, ಇವರು ಹೆಚ್ಚಾಗಿ ಅಶಿಸ್ತಿನ ಜನಸಮೂಹವನ್ನು ನಿಯಂತ್ರಿಸುವ ಕಾರ್ಯನಿರ್ವಹಿಸುತ್ತಾರೆ.

ತನಿಖೆಯಿಂದ ಅಸಲಿಯತ್ತು ಪತ್ತೆ-

ಡಿಸೆಂಬರ್ 17, 2019 ರ “ದಿ ಫ್ರೀ ಪ್ರೆಸ್ ಜರ್ನಲ್” ನ ವರದಿಯಲ್ಲಿ ಈ ಬಗ್ಗೆ ಲೇಖನ ನೋಡಬಹುದು. 

ಆದ್ದರಿಂದ, ವೈರಲ್ ಚಿತ್ರ ಒಂದು ವರ್ಷಕ್ಕಿಂತ ಹಳೆಯದಾಗಿದೆ ಮತ್ತು ನಡೆಯುತ್ತಿರುವ ರೈತರ ಆಂದೋಲನಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಚಿತ್ರದಲ್ಲಿರುವ ಪುರುಷರು ಆಂಟಿ-ಆಟೋ ಥೆಫ್ಟ್ ಸ್ಕ್ವಾಡ್‌ನ ಭಾಗವಾಗಿದ್ದು, ಇದರ ಸದಸ್ಯರನ್ನು ಹೆಚ್ಚಾಗಿ ನಾಗರಿಕ ಉಡುಪಿನಲ್ಲಿ ನಿಯೋಜಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights