BJPಗೆ ಕೈಕೊಟ್ಟ ಮುಂಬೈ ಉಪಾಧ್ಯಕ್ಷ ಕೃಷ್ಣ ಹೆಗ್ಡೆ; ಶಿವಸೇನಾಗೆ ಸೇರ್ಪಡೆ!

ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ಬಿಜೆಪಿ ಪಕ್ಷದ ಮುಂಬೈ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೃಷ್ಣ ಹೆಗ್ಡೆ ಅವರು ಕೇಸರಿ ಪಕ್ಷವನ್ನಜು ತೊರೆದಿದ್ದು, ಶುಕ್ರವಾರ ಸಂಜೆ ಆಡಳಿತಾರೂಢ ಶಿವಸೇನೆಗೆ ಸೇರಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ತಾವು ಶಿವಸೇನಾ ಸೇರಿರುವುದಾಗಿ ಕೃಷ್ಣ ಹೆಗ್ಡೆ ತಿಳಿಸಿದ್ದಾರೆ.

“ರಾಜ್ಯದಲ್ಲಿ ಶಿವಸೇನಾ ಪಕ್ಷದ ಬೆಳವಣಿಗೆಗೆ, ವಿಶೇಷವಾಗಿ ವಿಲೇ ಪಾರ್ಲೆನಲ್ಲಿ ಸಹಾಯ ಮಾಡಲು ಮತ್ತು ಮುಂಬೈನ ಪ್ರಗತಿಗೆ ಕೆಲಸ ಮಾಡಲು ಸಿಎಂ ನನ್ನನ್ನು ಕೇಳಿಕೊಂಡಿದ್ದಾರೆ. ನಾನು ಶಿವಸೇನೆಗೆ ಸೇರ್ಪಡೆಗೊಂಡಿದ್ದೇನೆ” ಎಂದು ಹೆಗ್ಡೆ ತಿಳಿಸಿದ್ದಾರೆ.

ವಿಲೇ ಪಾರ್ಲೆ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕರಾದ ಹೆಗ್ಡೆ ಅವರು ಬಿಜೆಪಿಗೆ 2017ರಲ್ಲಿ ಬಿಜೆಪಿಗೆ ಸೇರಿದ್ದರು. ನಾಲ್ಕು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಅವರು, ಶುಕ್ರವಾರ ಬಿಜೆಪಿ ತೊರೆದು ಶಿವಸೇನೆಯ ಹಡಗು ಹೇರಿದ್ದಾರೆ.

2009 ರಲ್ಲಿ ವಿಲೇ ಪಾರ್ಲೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಹೆಗ್ಡೆ ಆಯ್ಕೆಯಾಗಿದ್ದರು. ಆದರೆ 2014 ರ ಚುನಾವಣೆಯಲ್ಲಿ ಅವರನ್ನು ಬಿಜೆಪಿಯ ಪರಾಗ್ ಅಲ್ವಾನಿ ಸೋಲಿಸಿದರು.

ಕಳೆದ ತಿಂಗಳು, ಹೆಗ್ಡೆ ಅವರು ಸುಲಿಗೆ ಉದ್ದೇಶಕ್ಕಾಗಿ ತಮ್ಮನ್ನು ಹನಿ-ಟ್ರಾಪ್‌ ಬೀಳಿಸಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆಯೊಬ್ಬರ ವಿರುದ್ಧ ದೂರು ನೀಡಿದ್ದರು. ಆ ನಂತರ ಅವರು ಮುನ್ನೆಲೆಯಲ್ಲಿ ಕಾಣಿಸಿಕೊಂಡಿದ್ದರು.

ಅದೇ ಮಹಿಳೆ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಅವರ ಮೇಲೆ ಹಲವಾರು ವರ್ಷಗಳಿಂದ ಅತ್ಯಾಚಾರದ ಆರೋಪ ಮಾಡಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಮೈತ್ರಿ ಸರ್ಕಾರದ ವಿಧಾನಸಭಾ ಸ್ಪೀಕರ್‌ ರಾಜೀನಾಮೆ: ಕಾರಣವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights