ಭಾರತದ ಕೋವಿಡ್-19 ಲಸಿಕೆಗಾಗಿ 25 ದೇಶಗಳು ಸರದಿಯಲ್ಲಿವೆ: ಸಚಿವ ಜೈಶಂಕರ್

ಭಾರತವು ಈವರೆಗೆ 15 ದೇಶಗಳಿಗೆ COVID- 19 ಲಸಿಕೆ ಪೂರೈಸಿದೆ. ಇನ್ನೂ 25 ರಾಷ್ಟ್ರಗಳು ಲಸಿಕೆಗಾಗಿ ವಿವಿಧ ಹಂತಗಳಲ್ಲಿ ಸರದಿಯಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.

ಭಾರತದಿಂದ ಲಸಿಕೆ ಪಡೆಯಲು ಉತ್ಸುಕರಾಗಿರುವ ಮೂರು ವರ್ಗಗಳ ದೇಶಗಳಿವೆ – ಬಡ ರಾಷ್ಟ್ರಗಳು, ಬೆಲೆ ಸೂಕ್ಷ್ಮ ರಾಷ್ಟ್ರಗಳು ಮತ್ತು ಇತರ ದೇಶಗಳು ಲಸಿಕೆಯನ್ನು ತಯಾರಿಸುವ ಔಷಧೀಯ ಕಂಪನಿಗಳೊಂದಿಗೆ ನೇರವಾಗಿ ವ್ಯವಹರಿಸಲಿವೆ ಎಂದು ಅವರು ಹೇಳಿದ್ದಾರೆ.

“ಇದೀಗ ನಾವು ಈಗಾಗಲೇ ಸುಮಾರು 15 ದೇಶಗಳಿಗೆ ಲಸಿಕೆ ಸರಬರಾಜು ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ (ನನ್ನ ನೆನಪಿನ ಪ್ರಕಾರ). ಅಲ್ಲದೆ, ವಿವಿಧ ಹಂತಗಳಲ್ಲಿರುವ ಸುಮಾರು 25 ದೇಶಗಳು ಸರದಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

ಲಸಿಕೆಯ ತಯಾರಿಕೆ ಮತ್ತು ಸರಬರಾಜು ಮಾಡಿದ್ದು ಇಂದು ಭಾರತವನ್ನು ವಿಶ್ವದ ಭೂಪಟದಲ್ಲಿ ಇರಿಸಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಕೆಲವು ಬಡ ದೇಶಗಳಿಗೆ ಲಸಿಕೆಯನ್ನು ಅನುದಾನದ ಆಧಾರದ ಮೇಲೆ ಸರಬರಾಜು ಮಾಡಲಾಗುತ್ತಿದೆ. ಕೆಲವು ರಾಷ್ಟ್ರಗಳು ಲಸಿಕೆ ತಯಾರಕರಿಗೆ ಭಾರತ ಸರ್ಕಾರ ಪಾವತಿಸುವ ಬೆಲೆಗೆ ಸಮನಾಗಿ ಲಸಿಕೆಯನ್ನು ಪಡೆದುಕೊಳ್ಳಲು ಬಯಸುತ್ತವೆ. ಕೆಲವು ದೇಶಗಳು ಭಾರತೀಯ ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ನೇರ ಒಪ್ಪಂದಗಳನ್ನು ಹೊಂದಿವೆ ಮತ್ತು ವಾಣಿಜ್ಯಿಕವಾಗಿ ಮಾತುಕತೆ ನಡೆಸಿವೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರವು ಈಗಾಗಲೇ ಎರಡು COVID-19 ಲಸಿಕೆಗಳಿಗೆ ಅನುಮತಿ ನೀಡಿದೆ – ಅಮರಾವತಿ ಮೂಲದ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ (ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ). ಈ ಲಸಿಕೆಗಳನ್ನು ಜನವರಿ 16 ರಿಂದ ಕೊರೊನಾ ವಾರಿಯರ್ಸ್‌ಗೆ ನೀಡಲಾಗುತ್ತಿದೆ.

ಇದನ್ನೂ ಓದಿ: ಕೃಷಿ ಕಾನೂನುಗಳನ್ನು ಅಮೆರಿಕಾ ಬೆಂಬಲಿಸಿದೆ ಎಂದು ಭಾರತೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ: ಆದರೆ ಅದು ಸುಳ್ಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights