BJPಗೆ ಕೌಂಟರ್‌ ಕೊಡಲು 05 ಲಕ್ಷ ಸೋಷಿಯಲ್‌ ಮೀಡಿಯಾ ಕಾರ್ಯಕರ್ತರ ನೇಮಕಕ್ಕೆ ಮುಂದಾದ ಕಾಂಗ್ರೆಸ್‌!

ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಬಿಜೆಪಿಗೆ ಕೌಂಟರ್ ಕೊಡಲು ಕಾಂಗ್ರೆಸ್‌ ಸೋಷಿಯಲ್ ಮೀಡಿಯಾ ಕಾರ್ಯಕರ್ತರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಎರಡೂ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಐಟಿ ಸೆಲ್‌ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ ಬಿಜೆಪಿಯ ಅಜೆಂಡಾಗಳನ್ನು ಬಯಲಿಗೆಳೆಯಲು ಕಾಂಗ್ರೆಸ್‌ ಈಗ ಮುಂದಾಗಿದೆ.

ಕಾಂಗ್ರೆಸ್‌ ಐಟಿ ಸೆಲ್‌ಗೆ 05 ಲಕ್ಷ ಕಾರ್ಯಕರ್ತರನ್ನು ನೇಮಿಸಿಕೊಳ್ಳಲು ಕಾಂಗ್ರೆಸ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್‌ ಅನ್ನು ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ಸೋಲಿನ ನಂತರ, ಕಾಂಗ್ರೆಸ್ ಪಾಠಗಳನ್ನು ಕಲಿತುಕೊಂಡಿದ್ದು, ಪ್ರಸ್ತುತ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾ ವೇದಿಕೆ ಚುನಾವಣೆಗೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅರಿತುಕೊಂಡಿದೆ.

ಪಕ್ಷವು ತನ್ನ ಸಂದೇಶವನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ಯಲು ಶೀಘ್ರದಲ್ಲೇ ಐದು ಲಕ್ಷ ಸೋಷಿಯಲ್ ಮೀಡಿಯಾ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಿದೆ. ಇದರಂತೆ, ಪಕ್ಷವು ದೇಶದ ಪ್ರತಿ ಜಿಲ್ಲೆಯ 50,000 ಕಾರ್ಯಕರ್ತರನ್ನು ನೇಮಕ ಮಾಡುವ ಅಭಿಯಾನವನ್ನು ಪ್ರಾರಂಭಿಸಲಿದ್ದು, ಅವರು 4.5 ಲಕ್ಷ ಕಾಂಗ್ರೆಸ್‌ ಸ್ವಯಂಸೇವಕರ ನೆಟ್‌ವರ್ಕ್ಅನ್ನು ನಿಭಾಯಿಸಲಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ BJP ಯಾತ್ರಾ ರಾಜಕೀಯ: ವಸುಂಧರಾ ರಾಜೇ ಮತ್ತು ಸತೀಶ್ ಪೂನಿಯಾ ನಡುವೆ ನಾಯಕತ್ವ ಸೆಣೆಸಾಟ!

ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ತಂಡಕ್ಕೆ ಸೇರಲು ಆಸಕ್ತಿ ಹೊಂದಿರುವ ಯುವಜನರು ತಮ್ಮ ಡೇಟಾವನ್ನು ಅದಕ್ಕಾಗಿ ತೆರೆಯಲಾಗುವ ವೆಬ್‌ಸೈಟ್‌ಗಳಲ್ಲಿ ಅಪ್‌ಡೇಟ್‌ ಮಾಡಬೇಕು ಎಂದು ತಿಳಿಸಿದೆ.

“ಆಸಕ್ತರನ್ನು ಡೇಟಾವನ್ನು ಪರಿಶೀಲಿಸಿದ ನಂತರ, ನೇಮಕಾತಿಯನ್ನು ಪೂರ್ಣಗೊಳಿಸಲು ಸಂದರ್ಶನಗಳನ್ನು ನಡೆಸಲಾಗುವುದು. ನೇಮಕಗೊಂಡವರಿಗೆ ತರಬೇತಿ ನೀಡಲಾಗುವುದು” ಎಂದು ಕಾಂಗ್ರೆಸ್‌ ಐಟಿ ಸೆಲ್‌ನ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್, ಯೂಟ್ಯೂಬ್ ಮತ್ತು ಟ್ವಿಟರ್ ಇತ್ಯಾದಿಗಳಲ್ಲಿ ಅದ್ಭುತ ಯಶಸ್ಸನ್ನು ಗಳಿಸಿವೆ.

ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ನಡೆಸುತ್ತಿರುವ ಅಪಪ್ರಚಾರವನ್ನು ಕೌಟಂರ್‌ ಮಾಡಲು ಮತ್ತು ಬಿಜೆಪಿ ಸರ್ಕಾರದ ವಿಫಲತೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಕಾಂಗ್ರೆಸ್‌ ಸಜ್ಜಾಗುತ್ತಿದೆ. ಇದಕ್ಕಾಗಿ ಕೌಶಲ್ಯವುಳ್ಳವರಿಗೆ ಉತ್ತಮ ತರಬೇತಿ ನೀಡುವ ಮೂಲಕ ಕಾಂಗ್ರೆಸ್‌ ಐಟಿ ಸೆಲ್‌ಅನ್ನು ಭದ್ರಗೊಳಿಸಲು ಕಾಂಗ್ರೆಸ್‌ ಈಗ ಎಚ್ಚೆತುಕೊಂಡಿದೆ.

ಇದನ್ನೂ ಓದಿ: ಕುವೆಂಪು ಇದ್ದಿದ್ದರೆ ಅವರನ್ನೂ ದೇಶದ್ರೋಹಿ ಎನ್ನುತ್ತಿತ್ತು BJP ಸರ್ಕಾರ: ದಿನೇಶ್‌ ಗುಂಡೂರಾವ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights