ಕಾರಿನಲ್ಲಿ ಅಫ್ಘಾನ್ ಧ್ವಜ ಪ್ರದರ್ಶಿಸಿದ್ದಕ್ಕಾಗಿ ಗುಂಡು ಹಾರಿಸಿ ಬಂಧಿಸಿದ ತಾಲಿಬಾನಿಗಳು!

ಕಾರಿನಲ್ಲಿ ಅಫ್ಘಾನ್ ಧ್ವಜ ಪ್ರದರ್ಶಿಸಿದ್ದಕ್ಕಾಗಿ ವ್ಯಕ್ತಿಯೋರ್ವನನ್ನು ತಾಲಿಬಾನಿಗಳು ಕೈ ಕಟ್ಟಿ ಬಂಧಿಸಿದ ವೀಡಿಯೋ ವೈರಲ್ ಆಗಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಭಯಾನಕ ವೀಡಿಯೊಗಳು ಹೊರಹೊಮ್ಮಿವೆ. ಇದರಲ್ಲಿ ಇಸ್ಲಾಮಿಕ್ ಉಗ್ರ ಹೋರಾಟಗಾರರು ರಾಷ್ಟ್ರೀಯ ಧ್ವಜವನ್ನು ಹೊತ್ತುಕೊಂಡು ಬಂದ ಜನರ ಮೇಲೆ ಹಲ್ಲೆ ಮಾಡಿ ಗುಂಡು ಹಾರಿಸಿರುವುದನ್ನು ಕಾಣಬಹುದು.

ಕೆಲವು ತಾಲಿಬಾನ್ ದಂಗೆಕೋರರು ತಮ್ಮ ಕಾರಿನ ಗಾಜಿನ ಅಡಿಯಲ್ಲಿ ಅಫ್ಘಾನ್ ರಾಷ್ಟ್ರೀಯ ಧ್ವಜವನ್ನು ಹೊತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸ್ಥಳೀಯ ಮಾಧ್ಯಮಗಳು ಇತ್ತೀಚೆಗೆ ಟ್ವಿಟರ್‌ನಲ್ಲಿ ಹೊಸ ವೀಡಿಯೊವನ್ನು ಹಂಚಿಕೊಂಡಿವೆ..

https://twitter.com/AsvakaNews/status/1428560775170252801?ref_src=twsrc%5Etfw%7Ctwcamp%5Etweetembed%7Ctwterm%5E1428560775170252801%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fmen-carrying-afghan-national-flag-arrested-beaten-taliban-rule-video-1843083-2021-08-20

ವೀಡಿಯೊಗಳಲ್ಲಿ ತಾಲಿಬಾನಿಗಳು ವ್ಯಕ್ತಿಯೋರ್ವನ ಕಾರನ್ನು ಘೇರಾವ್ ಮಾಡುವುದನ್ನು ಮತ್ತು ಅದರ ಗಾಜಿನ ಮೇಲೆ ಇರಿಸಲಾಗಿದ್ದ ಆಫ್ಘನ್ ಧ್ವಜವನ್ನು ಕಿತ್ತುಕೊಳ್ಳುವುದನ್ನು ಕಾಣಬಹುದು. ಬಳಿಕ ತಾಲಿಬಾನಿಗಳು ಆ ವ್ಯಕ್ತಿಯ ಕೈಗಳನ್ನು ಬೆನ್ನ ಹಿಂದೆ ಕಟ್ಟಿ ಬಂಧಿಸಿದರು.

ಅದೇ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡ ಇನ್ನೊಂದು ವಿಡಿಯೋದಲ್ಲಿ ತಾಲಿಬಾನ್ ಹೋರಾಟಗಾರರು ದೇಶದ ರಾಷ್ಟ್ರ ಧ್ವಜವನ್ನು ಹೊತ್ತಿದ್ದ ಅಫ್ಘಾನ್ ವ್ಯಕ್ತಿಯನ್ನು ಥಳಿಸಿದ್ದಾರೆ.

https://twitter.com/AsvakaNews/status/1428545661713092610?ref_src=twsrc%5Etfw%7Ctwcamp%5Etweetembed%7Ctwterm%5E1428545661713092610%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fmen-carrying-afghan-national-flag-arrested-beaten-taliban-rule-video-1843083-2021-08-20

ತಾಲಿಬಾನ್ ನಿಯಮವನ್ನು ಧಿಕ್ಕರಿಸಿ ಗುರುವಾರ ಅಫ್ಘಾನಿಸ್ತಾನದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಆಗಸ್ಟ್ 19 ರಂದು ಅಫ್ಘಾನಿಸ್ತಾನದ 102 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು, ಹಲವಾರು ಪ್ರತಿಭಟನಾಕಾರರು ರಾಷ್ಟ್ರೀಯ ಧ್ವಜದೊಂದಿಗೆ ಮೆರವಣಿಗೆ ನಡೆಸಿದರು.

ಕಾಬೂಲ್ ನಲ್ಲಿ ಕೆಲವು ಸ್ಥಳೀಯರು ತಾಲಿಬಾನ್ ಧ್ವಜವನ್ನು ಪ್ರಸಿದ್ಧ ಅಬ್ದುಲ್ ಹಕ್ ಚೌಕದಲ್ಲಿ ಬದಲಾಯಿಸಿ ಅಫ್ಘಾನ್ ರಾಷ್ಟ್ರೀಯ ಧ್ವಜವನ್ನು ಹಾಕಿ ತಾಲಿಬಾನ್ ವಿರುದ್ಧ ನೂರಾರು ಅಫ್ಘನ್ನರು ಪ್ರತಿಭಟನೆ ನಡೆಸಿದರು.

https://twitter.com/AdityaRajKaul/status/1428304897946968065?ref_src=twsrc%5Etfw%7Ctwcamp%5Etweetembed%7Ctwterm%5E1428304897946968065%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fmen-carrying-afghan-national-flag-arrested-beaten-taliban-rule-video-1843083-2021-08-20

ಜಲಾಲಾಬಾದ್‌ನಲ್ಲಿ ಅಫ್ಘಾನಿಸ್ತಾನ ರಾಷ್ಟ್ರಧ್ವಜದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಂತೆ ಹಿಂಸಾತ್ಮಕ ಗುಂಡಿನ ಸದ್ದು ಕೇಳಿಸಿತು. ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಲಾಲಾಬಾದ್‌ನಲ್ಲಿ ತಾಲಿಬಾನ್ ಧ್ವಜವನ್ನು ಬದಲಿಸಿ ಅಫ್ಘಾನ್ ಧ್ವಜಗಳನ್ನು ಹಾಕಲು ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಂತೆ ಗುಂಡಿನ ಸದ್ದು ಕೇಳಿ ಬಂದಿದೆ.

ತಾಲಿಬಾನ್ ರಾಜಧಾನಿ ಕಾಬೂಲ್ ವಶಪಡಿಸಿಕೊಂಡ ನಂತರ ನೂರಾರು ಜನರು ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದಾರೆ. ಉದ್ರಿಕ್ತ ಆಫ್ಘನ್ನರು ದೇಶವನ್ನು ತೊರೆಯುವ ಮಾರ್ಗವನ್ನು ಹುಡುಕುತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights