Covid 19 : ಯುರೋಪಿನ ಸ್ಪೇನ್, ಇಟಲಿಯಲ್ಲಿ ಕೊರೊನಾ ಮರಣ ಮೃದಂಗಕ್ಕೆ ಕಾರಣ ಇಲ್ಲಿವೆ..

ಕೊರೊನಾ ವೈರಸ್ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತದೆ, ಮಹಾಮಾರಿಗೆ ಅಮೆರಿಕಾ ಸೇರಿದಂತೆ ಅನೇಕ ಮುಂದುವರೆದ ದೇಶಗಳು ತತ್ತರಿಸಿಹೋಗಿವೆ.. ಅದರಲ್ಲು ಶೀರ ಪ್ರದೇಶಗಳಾದ ಇಟೆಲಿ ಮತ್ತು ಸ್ಪೇನ್ ದೇಶದಲ್ಲಿ ದಿನದಿಂದ ದಿನಕ್ಕೆ ಪಡೆಯುತ್ತಿರುವ ಆಹುತಿಗೆ ಎರಡೂ ದೇಶಗಳು ಅಕ್ಷರಸಃ ಸೋತು ಮಂಡಿಯೂರಿವೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಇಟೆಲಿಯಲ್ಲಿ 115242 ಸೋಂಕಿತರು ಇರುವುದು ದೃಢಪಟ್ಟಿದ್ದು, ಇದುವರೆಗೆ 13915 ಜನರು ಸಾವನ್ನಪ್ಪಿದ್ದರೆ, ಸ್ಪೇನ್ ನಲ್ಲಿ 112065 ಸೋಂಕಿತರು ಮತ್ತು 10348 ಜನ ಮೃತ ಪಟ್ಟಿದ್ದಾರೆ. ಪ್ರಮುಖವಾಗಿ ಈ ಎರಡು ದೇಶಗಳಲ್ಲಿನ ಪರಿಸ್ಥಿತಿ ಸದ್ಯಕ್ಕೆ ಸುಧಾರಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.  ಮಾನವ ಕೈಯಲ್ಲಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ, ಇನ್ನೇನಿದ್ದರೂ ದೇವರೇ ನಮ್ಮನ್ನು ಕಾಪಾಡಬೇಕೆಂದು ಇಟೆಲಿ ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಕಣ್ಣೀರಿಟ್ಟು, ಕೈಚೆಲ್ಲಿದ್ದಾಗಿದೆ.

ಉಭಯ ದೇಶಗಳಲ್ಲಿ ಕೊರೊನಾ ವೈರಾಣು ಹಬ್ಬಲು ಕಾರಣವಾಗೆದ್ದು ಒಂದು ಫುಟ್ ಬಾಲ್  ಪಂದ್ಯ

ಬರ್ಗಾಮೋ ಎನ್ನುವುದು ಉತ್ತರ ಇಟೆಲಿಯ ನಗರ, ಮಿಲಾನ್ ನಗರದಿಂದ ಈಶಾನ್ಯಕ್ಕೆ ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಫೆಬ್ರವರಿ 19ರಂದು, ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯ, ಅಟ್ಲಾಂಟ ಮತ್ತು ವೆಲಿನ್ಸಿಯಾ ತಂಡದ ನಡುವೆ ನಡೆದಿತ್ತು. ಸ್ಪೇನ್ ದೇಶದ ತಂಡವಾದ ವೆಲಿನ್ಸಿಯಾ ಪರವಾಗಿ 25000 ಸಾವಿರ ಅಭಿಮಾನಿಗಳು ಈ ಪಂದ್ಯ ನೋಡಲು  ಆಗಮಿಸಿದ್ದರು.
ನಡೆದ ಒಂದು ತಿಂಗಳಿನ ನಂತರ ಎರಡು ದೇಶಗಳಲ್ಲಿ ಕೊರೊನಾ ವೈರಾಣು ಹಬ್ಬಲು ಕಾರಣವಾಯಿತು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.  ಈ ಪಂದ್ಯ ನಡೆದ ಎರಡು ದಿನದ ಮುನ್ನ ಮೊದಲ ಕೋವಿಡ್ 19 ಪ್ರಕರಣ ಇಟೆಲಿಯಲ್ಲಿ ದೃಢಪಟ್ಟಿತ್ತು ಅನ್ನುವುದನ್ನು ಮರೆಯದಿರೋಣ..

ಬರ್ಗಾಮೋ ನಗರದ ಮೇಯರ್ ಜಿಯಾರ್ಗೋ ಗೋಯಿ ಬರ್ಗಾಮೋ ನಗರದ ಮೂರನೇ ಎರಡರಷ್ಟು ಜನ, ಫೆಬ್ರವರಿ 19ರಂದು ನಡೆದ ಪಂದ್ಯವನ್ನು ವೀಕ್ಷಿಸಲು ಇಟೆಲಿಯ ಮಿಲಾನ್ ನಗರಕ್ಕೆ ಪ್ರಯಾಣಿಸಿದ್ದರು. “ಫೆಬ್ರವರಿ ಮಧ್ಯಭಾಗದಲ್ಲಿ ಇಲ್ಲಿ ನಮಗೆ ಏನು ನಡೆಯುತ್ತಿದೆ ಎನ್ನುವುದರ ಅರಿವಾಗುತ್ತಿರಲಿಲ್ಲ. ಈ ವೈರಾಣು ನಮ್ಮ ನಗರಕ್ಕೆ ಬಂದಿದೆ ಎಂದರೆ ಬಹುದೊಡ್ಡ ಆಘಾತ ಎದುರಿಸಲು ನಾವು ಸಿದ್ದರಾಗಬೇಕಿದೆ. ಯಾಕೆಂದರೆ, ನಗರದ ಸುಮಾರು ನಲವತ್ತು ಸಾವಿರ ಜನ ಆ ಪಂದ್ಯ ವೀಕ್ಷಿಸಲು ಹೋಗಿದ್ದರು” ಎಂದು ಹೇಳಿದ್ದರು.

ಇಟೆಲಿ ಮತ್ತು ಸ್ಪೇನ್ ಈ ಪಂದ್ಯ ನಡೆದ ಒಂದು ವಾರದಲ್ಲಿ ಬರ್ಗಾಮೋ ನಗರದಲ್ಲಿ ಮೊದಲ ಕೇಸ್ ದಾಖಲಾಗಿತ್ತು. ಇನ್ನು ಪಂದ್ಯದ ರಿಪೋರ್ಟ್ ನೀಡಲು ಹೋಗಿದ್ದ ಪತ್ರಕರ್ತನಿಗೆ ಮತ್ತು ಅಟ್ಲಾಂಟ ತಂಡದ ಗೋಲ್ ಕೀಪರ್ ಗೂ ಸೋಂಕು ತಗುಲಿತ್ತು.  ಅಲ್ಲಿಂದ ಮುಂದೆ ನಡೆದಿದ್ದು ಅಕ್ಷರ ಸಹ ಕೊರೊನಾ ಮರಣ ಮೃದಂಗ, ಹಿರಿಯ ನಾಗರಿಕರ ಸ್ವರ್ಗವಾಗಿರುವ ಈ ನಗರಗಳನ್ನು Covid 19 ಮಹಾಮಾರಿ ನಡುಗಿಸಿಬಿಟ್ಟಿದೆ.. ಇಗ ಅದು ಅಮೆರಿಕಾವನ್ನು ಕಾಡುತ್ತಿದೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights