BJP ಸರ್ಕಾರದ ಕೈಗೊಂಬೆಯಾದ ಆರ್ಥಿಕ ಇಲಾಖೆ; ಮನಸ್ಸಿಗೆ ಬಂದಂತೆ ಹಣ ಬಿಡುಗಡೆ ಮಾಡುತ್ತಿದೆ!

ಕೆಲ ದಿನಗಳ ಹಿಂದೆ ಶೇ.50 ರಷ್ಟು ಅತಿಥಿ ಯಪನ್ಯಾಸಕರನ್ನು  ಮಾತ್ರ ನಿಯೋಜಿಸಿಕೊಳ್ಳಲು ಅಥವಾ ಮುಂದುವರೆಸಲು ಸೂಚನೆ ನೀಡಿದ್ದ ಆರ್ಥಿಕ ಇಲಾಖೆ, ಇದೀಗ ಎಲ್ಲಾ ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಅರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 7,091 ಅತಿಥಿ ಉಪನ್ಯಾಸಕರನ್ನು ಅವರ ವೃತ್ತಿಗಳಲ್ಲಿ ಮುಂದುವರೆಸಲು ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ. ಅಲ್ಲದೆ, ಇದು ಒಂದು ತಿಂಗಳ ಅವಧಿಗೆ ಮಾತ್ರ (ಮಾರ್ಚ್‌) ಸೇವೆ ಮುಂದುವರಿಸಲಾಗುವುದು ಎಂದು ಹೇಳಿದೆ.

ಆದರೆ ಅಧಿಕಾರಿಗಳ ಆರ್ಥಿಕ ಇಲಾಖೆಯ ಮನಸ್ಥಿತಿಗಳೇ ಅರ್ಥವಾಗುತ್ತಿಲ್ಲ ಎನ್ನಲಾಗಿದ್ದು, ಈ ನಡುವೆ ಕೊರೊನಾ ಕಾರಣವನ್ನೇ ಮುಂದಿಟ್ಟುಕೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಹಿಂದೇಟು ಹಾಕುತ್ತಿದೆ.

ಅದಾಗ್ಯೂ, ರಾಜ್ಯ ಸರ್ಕಾರ ಹೊಸ ನಿಗಮ ಮಂಡಳಿಗಳನ್ನು ನೇಮಕ ಮಾಡಿದ್ರೆ, ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಿರುವ ಆರ್ಥಿಕ ಇಲಾಖೆ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಆರ್ಥಿಕ ಇಲಾಖೆಯ ಕೆಲಸದ ಬಗ್ಗೆ ನಾನಾ ಅನುಮಾನಗಳು ಹುಟ್ಟತೊಡಗಿದ್ದು, ಆರ್ಥಿಕ ಇಲಾಖೆ ಯಾವೆಲ್ಲ ಆಧಾರದ ಮೇಲೆ ಕೆಲಸ ಮಾಡುತ್ತಿದೆ ಅನ್ನೋಂದು ಜನರ ಪ್ರಶ್ನೆಯಾಗಿದೆ.

ಯಾವುದಕ್ಕೆ ಮೊದಲು ಆದ್ಯತೆ ನೀಡಬೇಕು? ಯಾವುದಕ್ಕೆ ಎರಡನೇ ಆದ್ಯತೆ ನೀಡಬೇಕು ಎನ್ನುವುದು ಆರ್ಥಿಕ ಇಲಾಖೆಗೆ ಗೊತ್ತಿಲ್ವಾ ಅಂತ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್‌ ಚುನಾವಣೆ: ಗದ್ದಲದ ನಡುವೆ ಸಭಾಪತಿಯಾಗಿ ಹೊರಟ್ಟಿ ಆಯ್ಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights