ನಾನು ಎಲ್ಲರಿಗೂ ನೋವುಕೊಟ್ಟಿದ್ದೇನೆ; ಅಂತ್ಯಕ್ರಿಯೆಗೆ ಸಿದ್ದರಾಮಯ್ಯ, ಯಶ್ ಬರಬೇಕೆಂದು ಬರೆದಿಟ್ಟು ಯುವಕ ಆತ್ಮಹತ್ಯೆ
25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಅತ ತನ್ನ ಅಂತ್ಯಕ್ರಿಯೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನಟ ಯಶ್ ಬರಬೇಕು ಎಂದು ಆತ್ಮಹತ್ಯೆ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ. ಆತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲವಾದರೂ, ಆತ ಮಾನಸಿವಾಗಿ ಕಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗಿದೆ.
ಪೆಟ್ರೋಲ್ ಬಂಕ್ ಒಂದರಲ್ಲ ಕೆಲಸ ಮಾಡುತ್ತಿದ್ದ ಕೃಷ್ಣ ಎಂಬಾತ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೂ ಮುನ್ನ ಆತ್ಮಹತ್ಯೆ ನೋಟ್ ಬರೆದಿಟ್ಟಿದ್ದು, ನನ್ನನ್ನ ಎಲ್ಲರೂ ದಯವಿಟ್ಟು ಕ್ಷಮಿಸಿ. ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೇನೆ. ನನ್ನಿಂದ ಅಮ್ಮ-ಅಪ್ಪ-ಸ್ನೇಹಿತರಿರೊಂದಿಗೆ ಉತ್ತಮನಾಗಿ ಇರಲು ಸಾಧ್ಯವಾಗಲಿಲ್ಲ. ತನ್ನ ಪ್ರೇಯಸಿಯೊಂದಿಗೂ ಬದುಕಲು ಆಗಲಿಲ್ಲ. ಹಾಗಾಗಿ ಎಲ್ಲರಿಂದಲೂ ದೂವಾಗುತ್ತಿದ್ದೇನೆ ಎಂದು ಬರೆದಿದ್ದಾನೆ.
ಅಲ್ಲದೆ, ತನ್ನ ಕೊನೆಯ ಅಸೆಯನ್ನೂ ಬರೆದಿರುವ ಕೃಷ್ಣ, ನಾನು ಸಿದ್ದರಾಮಯ್ಯ ಹಾಗೂ ಯಶ್ ಅವರ ಅಪ್ಪಟ ಅಭಿಮಾನಿ. ನನ್ನ ಅಂತ್ಯಕ್ರಿಯೆಗೆ ಅವರಿಬ್ಬರೂ ಬರಬೇಕು. ದಯವಿಟ್ಟು ನನ್ನ ಕೊನೆ ಆಸೆ ಈಡೇರಿಸಿ ಎಂದು ಬರೆದಿದ್ದಾನೆ.
ಕೃಷ್ಣ ಅವರ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದ ಆಕಾಂಕ್ಷೆಯನ್ನು ಈಡೇರಿಸುವುದಕ್ಕಾಗಿ ಸಿದ್ದರಾಮಯ್ಯ ಇಂದು ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಲಿದ್ದು, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ದಿಶಾ ಬಂಧನ: ನಮ್ಮ ಶಕ್ತಿಯನ್ನು ಮರೆತಿದ್ದೇವೆ; ಈಗಲಾದರೂ ಸದ್ದು ಮಾಡೋಣ: ದಿಶಾ ಬೆಂಬಲಕ್ಕೆ ನಟಿ ರಮ್ಯಾ ಕರೆ!

