ಕಳಚಿ ಬಿದ್ದ ವಿಮಾನದ ಭಾಗಗಳು: ಎಮರ್ಜೆನ್ಸಿ ಲ್ಯಾಂಡಿಂಗ್ ಮೂಲಕ 231 ಪ್ರಯಾಣಿಕರ ರಕ್ಷಣೆ!

231 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡುವ ಮೂಲಕ ಪ್ರಯಾಣಿಕರನ್ನು ರಕ್ಷಿಸಿರುವ ಘಟನೆ ಅಮೆರಿಕಾದ ಡೆನ್ವರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಡೆನ್ವರ್‌ನಿಂದ ಹೊನಲುಲುಗೆ ಪ್ರಯಾಣ ಆರಂಭಿಸಿದ್ದ ಯುನೈಟೆಡ್ ಏರ್ ಲೈನ್ಸ್‌ನ ವಿಮಾನವೊಂದಕ್ಕೆ ಟೇಕ್‌ ಆಫ್‌ ಅದ ಕೆಲವೇ ನಿಮಿಷಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ, ವಿಮಾನದ ಎಂಜಿನ್‌ನ ಕೆಲವು ಭಾಗಗಳು ವಿಮಾನದಿಂದ ಕಳಚಿ ಬಿದ್ದಿದ್ದು, ತಕ್ಷಣ ವಿಮಾನವನ್ನು ಡೆನ್ವರ್‌ ವಿಮಾನ ನಿಲ್ದಾಣಕ್ಕೆ ಹಿಂದಿರುಗಿಸಿ ಲ್ಯಾಂಡಿಂಗ್ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.

ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡ ತಕ್ಷಣ ಯುನೈಟೆಡ್ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಕರೆ ಮಾಡಿ, ವಿಮಾನದ ಇಂಜಿನ್‌ ವೈಫಲ್ಯವಾಗಿದೆ. ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಬೇಕು ಎಂದು ತಿಳಿಸಿ, ವಿಮಾನವನ್ನು ತಕ್ಷಣವೇ ಹಿಂದಿರುಸಿ ಲ್ಯಾಂಡ್‌ ಮಾಡಲಾಗಿದ್ದು, ವಿಮಾನದ ಫೈಲಟ್‌ಗಳನ್ನು ಅಭಿನಂಧಿಸಲಾಗಿದೆ.

ಇದನ್ನೂ ಓದಿ:ಉಪಗ್ರಹ ಚಿತ್ರಗಳು: ಅಫ್ಘಾನಿಸ್ತಾನ-ಇರಾನ್ ಗಡಿಯಲ್ಲಿ ಸುಟ್ಟು ಭಸ್ಮವಾದ 500 ಇಂಧನ ಟ್ಯಾಂಕರ್‌ಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights