ಚಿಕನ್ ಕೇಳಿದಿವಿ, ಮಟನ್ ಕೇಳಿದಿವಿ ಇದ್ಯಾವುದು ಗುರು ‘ಸ್ಟ್ರಾಬಿರಿಯಾನಿ’..?

ಇವತ್ತು ಭಾನುವಾರ. ಬಹುತೇಕ ಜನ ಮನೆ ಊಟಕ್ಕಿಂತ ಹೊರಗಡೆ ತಿನ್ನುವುದನ್ನೇ ಇಷ್ಟಪಡುತ್ತಾರೆ. ಅದ್ರಲ್ಲೂ ನಾನ್-ವೆಜ್ ಪ್ರೀಯರಿಗೆ ಚಿಕನ್, ಮಟನ್, ಫಿಶ್ ಅಂತೆಲ್ಲಾ ಆಯ್ಕೆಗಳಿರುತ್ತೆ. ವೆಜ್ ಪ್ರಿಯರಿಗೆ ಆಯ್ಕೆಗಳು ಸ್ವಲ್ಪ ಕಡಿಮೆನೆ. ಹೀಗಾಗಿ ಹೊಸ ಹೊಸ ಪಾಕ ವಿಧಾನಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಇದರಲ್ಲಿ ಪಾಕಿಸ್ತಾನದ ಸ್ಟ್ರಾಬಿರಿಯಾನಿ ಕೂಡ ಒಂದು. ಇದ್ಯಾವುದು ಗುರು ಸ್ಟ್ರಾಬೆರಿ ಬಿರಿಯಾನಿ ಅಂತೀರಾ..? ಇದಲ್ಲಿದೆ ನೋಡಿ..

ಪಾಕಿಸ್ತಾನದ ವ್ಯಕ್ತಿಯೊಬ್ಬರು ಬಿರಿಯಾನಿಗೆ ತಮ್ಮದೇ ಆದ ವಿಶಿಷ್ಟ ಸ್ಪಿನ್ ನೀಡಿದ್ದಾರೆ. ಅವರು ಅದಕ್ಕೆ ಸ್ಟ್ರಾಬೆರಿಗಳನ್ನು ಸೇರಿಸಿ ಅದಕ್ಕೆ ಒಂದು ಹೆಸರನ್ನು ಸಹ ನೀಡಿದ್ದಾರೆ. ಅದುವೇ ‘ಸ್ಟ್ರಾಬಿರಿಯಾನಿ’. ಮಾತ್ರವಲ್ಲದೇ ಅವರು ಅದನ್ನು ಟ್ವಿಟ್ಟರ್ ಪೋಸ್ಟ್ ಮೂಲಕ ಪ್ರದರ್ಶಿಸಿದ್ದಾರೆ. ಇದು ಅಂತರ್ಜಾಲದಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದೆ.

https://twitter.com/SaadGH/status/1362706197724340229?ref_src=twsrc%5Etfw%7Ctwcamp%5Etweetembed%7Ctwterm%5E1362706197724340229%7Ctwgr%5E%7Ctwcon%5Es1_&ref_url=https%3A%2F%2Ffood.ndtv.com%2Fnews%2Fviral-strawberry-biryani-this-pakistani-mans-strange-recipe-worked-up-the-internet-2374687

ಇಸ್ಲಾಮಾಬಾದ್‌ನ ಸಾದ್ ಎಂಬ ಪಾಕಿಸ್ತಾನಿ ವ್ಯಕ್ತಿ ಸಾಂಪ್ರದಾಯಿಕ ದೊಡ್ಡ ಮಡಕೆ ಪಾತ್ರೆಯಲ್ಲಿ ಬಿರಿಯಾನಿ ಬೇಯಿಸಿ ಸ್ಟ್ರಾಬೆರಿಗಳನ್ನು ಬಿರಿಯಾನಿಗೆ ಸೇರಿಸಿದ್ದಾರೆ. ಅದರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಾವು ಇಂದು ಮನೆಯಲ್ಲಿ ‘ಸ್ಟ್ರಾಬಿರಿಯಾನಿ’ ತಯಾರಿಸಿದ್ದೇವೆ ಮತ್ತು ದೇಸಿ ಟ್ವಿಟರ್ ಇದರ ಬಗ್ಗೆ ಏನು ಹೇಳಬೇಕೆಂದು ತಿಳಿಯಲು ನನಗೆ ಕುತೂಹಲವಿದೆ” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ಮಾಡಿದ 24 ಗಂಟೆಗಳ ಒಳಗೆ 2.3 ಕೆ ಲೈಕ್‌ಗಳು, 1.6 ಕೆ ರಿಟ್ವೀಟ್‌ಗಳು ಮತ್ತು 1 ಕೆ ಕಾಮೆಂಟ್‌ಗಳೊಂದಿಗೆ, ಟ್ವೀಟ್ ವೈರಲ್ ಆಗಿದೆ.

https://twitter.com/SaadGH/status/1362706197724340229?ref_src=twsrc%5Etfw%7Ctwcamp%5Etweetembed%7Ctwterm%5E1362780032377176071%7Ctwgr%5E%7Ctwcon%5Es2_&ref_url=https%3A%2F%2Ffood.ndtv.com%2Fnews%2Fviral-strawberry-biryani-this-pakistani-mans-strange-recipe-worked-up-the-internet-2374687

ಕೆಲವು ಬಳಕೆದಾರರು ಖಾದ್ಯವನ್ನು ಗೇಲಿ ಮಾಡಿ ಇದನ್ನು ಬರ್ಗರ್ ಐಸ್ ಕ್ರೀಮ್ ಮತ್ತು ಅನಾನಸ್ ಪಿಜ್ಜಾದಂತಹ ಇತರ ವೈರಲ್ ಆಹಾರ ಸಂಯೋಜನೆಗಳೊಂದಿಗೆ ಹೋಲಿಸಿದ್ದಾರೆ. ಕೆಲವು ಬಳಕೆದಾರರು ಬಿರಿಯಾನಿ ಕೋಡ್ ಉಲ್ಲಂಘನೆ ಮಾಡಿದ್ದೀರಿ ಎಂದು ಟ್ವೀಟ್ ಮಾಡಿ ಬೆದರಿಕೆ ಹಾಕಿದ್ದಾರೆ.

ಆದರೂ ಇದು ಕೇವಲ ಗಮನ ಸೆಳೆಯುವ ಗಿಮಿಕ್ ಎಂದು ಭಾವಿಸಿದ ಕೆಲವರು ಇದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights