ಭಾರತ VSಆಸ್ಟ್ರೇಲಿಯಾ: 3ನೇ ಟೆಸ್ಟ್ ಅರ್ಧಕ್ಕೆ ಸ್ಥಗಿತ; ಭಾರತದ ತಂಡದ 2 ವಿಕೆಟ್‌ ಪತನ!

ಮೂರನೇ ಅವಧಿಯ ಆಟವನ್ನು ಮಳೆ ನುಂಗಿ ಹಾಕುವುದರೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ನ 2ನೇ ದಿನ ಮುಕ್ತಾಯವಾಯಿತು.. ಆಸ್ಟ್ರೇಲಿಯಾವನ್ನು ಮೊದಲ ಸರದಿಯಲ್ಲಿ 369 ರನ್ನುಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಭಾರತ 62 ರನ್ ಮಾಡುವ ವೇಳೆಗೆ ಇಬ್ಬರೂ ಓಪನರುಗಳನ್ನು ಕಳೆದುಕೊಂಡಿತು.

ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 44 ರನ್ ಗಳಿಸಿ ಲಯಾನ್‌ಗೆ ವಿಕೆಟ್ ನೀಡಿದರೇ ಶುಭಮನ ಗಿಲ್ ಕೇವಲ 7 ರನ್ ಗಳಿಸಿ ವೇಗಿ ಪ್ಯಾಟ್ ಕಮಿನ್ಸ್ ದಾಳಿಗೆ ಶರಣಾದರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮೊದಲ ಸರದಿಯಲ್ಲಿ ಭಾರೀ ಮೊತ್ತ ಕಲೆಹಾಕದಂತೆ ತಡೆಯುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಐದು ವಿಕೆಟ್ ಕಳೆದುಕೊಂಡು 274 ರನ್ನುಗಳೊಂದಿಗೆ ಎರಡನೇ ದಿನದ ಆಟವನ್ನು ಮುಂದುವರಿಸಿದ ಆಸ್ಟ್ರೇಳಿಯಾ 369 ರನ್ನುಗಳಿಗೆ ಆಲ್ ಔಟ್‌ ಆಯಿತು.

ನಾಯಕ ಟಿಮ್ ಪೇನ್ ಸರಿಯಾಗಿ 50 ರನ್ ಗಳಿಸಿ ಔಟಾದರೆ, ಕೆಮರೂನ್ ಗ್ರೀನ್ 47 ರನ್ ಮಾಡಿದರು. ಇವರಿಬ್ಬರ ನಿರ್ಗಮನ ಆಸ್ಟ್ರೇಲಿಯಾದ ಕುಸಿತವನ್ನು ತೀವ್ರಗೊಳಿಸಿತು.

ಮೊದಲ ಟೆಸ್ಟ್ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ 3 ವಿಕೆಟ್ ಪಡೆದುಕೊಂಡು ಆಸಿಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇನ್ನು 3 ದಿನಗಳ ಆಟ ಉಳಿದಿದ್ದು ಈ ಪಂದ್ಯ ಗೆದ್ದವರು ಸರಣಿ ತಮ್ಮದಾಗಿಸಿಕೋಳ್ಳಲಿದ್ದಾರೆ..


ಇದನ್ನೂ ಓದಿ: BJP ಸಂಸದನನ್ನು ಟ್ರೋಲ್‌ ಮಾಡಿದ ಕ್ರಿಕೆಟಿಗ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights