04 ಲಕ್ಷ ಅಲ್ಲ 40 ಲಕ್ಷ ಟ್ರಾಕ್ಟರ್ಗಳು ಸಂಸತ್ಗೆ ಮುತ್ತಿಗೆ ಹಾಕಲಿವೆ: ರೈತ ನಾಯಕ ಟಿಕಾಯತ್
ಮೂರು ಹೊಸ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸದಿದ್ದರೆ, ಪ್ರತಿಭಟನಾ ನಿರತ ರೈತರು “ಸಂಸತ್ತಿಗೆ ಘೆರಾವ್” ಹಾಕಲಿದ್ದಾರೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಮಂಗಳವಾರ ರಾಜಸ್ಥಾನದ ಸಿಕಾರ್ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ನಲ್ಲಿ ಮಾತನಾಡಿದ ಅವರು, ಯಾವುದೇ ಸಂದರ್ಭದಲ್ಲಿಯಾದರೂ “ದೆಹಲಿ ಚಲೋ” ಮೆರವಣಿಗೆಗೆ ಕರೆ ನೀಡಬಹುದು. ರೈತರು ಇದಕ್ಕೆ ಸಿದ್ದರಾಗಿರಬೇಕು. ಈ ಬಾರಿ 40 ಲಕ್ಷ ಟ್ರಾಕ್ಟರ್ಗಳೊಂದಿಗೆ ಸಂಸತ್ತಿಗೆ ಘೇರಾವ್ ಹಾಕಲಾಗುವುದು ಎಂದು ಹೇಳಿದ್ದಾರೆ.
“ಪ್ರತಿಭಟನಾ ನಿರತ ರೈತರು ಇಂಡಿಯಾ ಗೇಟ್ ಬಳಿಯ ಉದ್ಯಾನವನಗಳನ್ನು ಉಳುಮೆ ಮಾಡಿ ಅಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಸಂಸತ್ತಿನ ಘೆರಾವ್ ದಿನಾಂಕವನ್ನು ಯುನೈಟೆಡ್ ಫ್ರಂಟ್ ನಾಯಕರು ನಿರ್ಧರಿಸುತ್ತಾರೆ. ಈ ಬಾರಿ ನಾಲ್ಕು ಲಕ್ಷ ಟ್ರಾಕ್ಟರುಗಳ ಬದಲು 40 ಲಕ್ಷ ಟ್ರಾಕ್ಟರುಗಳು ಇರಲಿವೆ” ಎಂದು ಅವರು ಹೇಳಿದ್ದಾರೆ.
ಜನವರಿ 26 ರಂದು ಟ್ರಾಕ್ಟರ್ ಪೆರೇಡ್ ಸಮಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ನಡೆಸಲಾಯಿತು. ಈ ಇದರ ಹಿಂದೆ ದೇಶದ ರೈತರನ್ನು ಕೆಣಕುವ ಪಿತೂರಿಯನ್ನು ನಡೆಸಲಾಗಿದೆ. “ದೇಶದ ತ್ರಿವರ್ಣವನ್ನು ಪ್ರೀತಿಸುವವರು ರೈತರು, ಈ ದೇಶವನ್ನು ಆಳುತ್ತಿರುವ ನಾಯಕರಲ್ಲ” ಎಂದು ಅವರು ಹೇಳಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಮತ್ತು ಎಂಎಸ್ಪಿಯನ್ನು ಜಾರಿಗೊಳಿಸದಿದ್ದರೆ ದೇಶದ ರೈತರು ದೊಡ್ಡ ಕಂಪನಿಗಳ ಗೋದಾಮುಗಳನ್ನು ಸಹ ಮುಟ್ಟುಗೋಲು ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕಾಗಿ ಯುನೈಟೆಡ್ ಫ್ರಂಟ್ ಕೂಡ ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿಗೆ ವಿದೇಶ ಸುತ್ತಲು ಸಮಯವಿದೆ; ರೈತರ ಭೇಟಿ ಮಾಡಲು ಸಮಯವಿಲ್ಲ: ಪ್ರಿಯಾಂಕಾ ಗಾಂಧಿ

