ಕಾಂಗ್ರೆಸ್ಗೆ ಗುಜರಾತ್ನಲ್ಲಿ ಮುಖಭಂಗ; ಪುದುಚೇರಿ ಸರ್ಕಾರ ಪತನ; ಬಿಕ್ಕಟ್ಟಿನಲ್ಲಿದೆ ಕಾಂಗ್ರೆಸ್!
ಆಂತರಿಕ ಅಸಮಾಧಾನ ಮತ್ತು ನಾಯಕತ್ವದ ಸಮಸ್ಯೆಗಳಿಂದಾಗಿ ಗುಜರಾತ್ನಲ್ಲಿ ಕಾಂಗ್ರೆಸ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರೀ ಪೈಪೋಟಿ ನೀಡಿತ್ತು. ಆದರೆ, ಚುನಾವಣೆಯ ನಂತರ ಹಲವು ಶಾಸಕರು ಬಿಜೆಪಿಗೆ ಸೇರಿದ್ದರಿಂದಾಗಿ ಗುಜರಾತ್ನಲ್ಲಿ ಕೈ ಪಕ್ಷವು ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ.
ಕಳೆದ ವರ್ಷ ನಿಧನರಾದ ಅಹ್ಮದ್ ಪಟೇಲ್ ಅವರ ರಾಜ್ಯಸಭಾ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತು. ಈ ಸಂದರ್ಭದಲ್ಲಿ ಅನೇಕ ನಾಯಕರು ಟಿಕೆಟ್ ವಿತರಣೆಯ ಪ್ರಶ್ನಿಸಿದ್ದರು. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಿವಿಧ ಬಣಗಳು ತಮ್ಮ ಸಹಾಯಕರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದವು. ಇದನ್ನು ಹಿರಿಯ ನಾಯಕರು ಆಂತರಿಕ ಬಿಕ್ಕಟ್ಟು ಎಂದು ಕರೆದಿದ್ದರು.
ಇದೀಗ, ಎಲ್ಲರ ಕಣ್ಣುಗಳು ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಚುನಾವಣೆಗಳತ್ತ ಇರಲಿವೆ. ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಿದ್ದ ಒಂದು ದಿನದ ನಂತರ ಗುಜರಾತ್ನಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಪಕ್ಷವು ಕೇವಲ 43 ಸ್ಥಾನಗಳನ್ನು ಗೆದ್ದಿದೆ.
ಕಳೆದ ಕೆಲವು ದಿನಗಳಲ್ಲಿ ನಡೆದ ರಾಜಸ್ಥಾನ ಮತ್ತು ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಗೆದ್ದಿದೆ. ಆದರೆ, ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ, ಬಿಜೆಪಿ ಮತ್ತು ಎಐಎಂಐಎಂಗಿಂತ ಪಕ್ಷದ ಪ್ರಭಾವ ಕುಸಿದಿದ್ದು, ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: 576 ಸ್ಥಾನಗಳಲ್ಲಿ 483 ಗೆದ್ದ BJP; ಕಾಂಗ್ರೆಸ್ ನಾಯಕರ ಸರಣಿ ರಾಜೀನಾಮೆ!
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ನ ಪ್ರದರ್ಶನವು ಕೇರಳದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್ನ ರಾಜ್ಯ ಘಟಕವನ್ನು ಚಿಂತೆಗೀಡು ಮಾಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಬಿಹಾರದ ಮಹಾಘಟ್ಬಂಧನ್ಗೆ ಕಾಂಗ್ರೆಸ್ ದುರ್ಬಲ ಕೊಂಡಿಯಾಗಿ ಪರಿಣಮಿದೆ. 2020 ರಲ್ಲಿ ಮಧ್ಯಪ್ರದೇಶದ ಜ್ಯೋತಿರಾಡಿತ್ಯ ಸಿಂಧಿಯಾ ಮತ್ತು ಪಕ್ಷದ ಶಾಸಕರ ಬಂಡಾಯದಿಂದ ಕಾಂಗ್ರೆಸ್ ಸರ್ಕಾರ ಪತನವಾಯಿತು. ಪಕ್ಷದ ಪ್ರಭಾವವೂ ಕುಸಿಯಿತು. ಇದು ಉಪಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡವಲ್ಲಿ ವಿಫಲವೂ ಆಯಿತು.
ಮಧ್ಯಪ್ರದೇಶದ ಮಾರ್ಗದಲ್ಲಿ ರಾಜಸ್ಥಾನದ ಸರ್ಕಾರವನ್ನು ಉರುಳಿಸಲು ಯತ್ನಿಸಲಾಯಿತು. ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡೆಸಿದ ಆಕ್ರೋಶವನ್ನು ಶಮನ ಮಾಡುವಲ್ಲಿ ಪಕ್ಷವು ವಿಫಲವಾಗಿದೆ. ಆದರೂ, ಅಶೋಕ್ ಗೆಹ್ಲೋಟ್ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದೀಗ ಸಚಿನ್ ಪೈಲಟ್ ಕಾಂಗ್ರೆಸ್ನಲ್ಲಿಯೇ ಉಳಿದಿದ್ದಾರೆ. ಅದರೆ, ಈ ಇಬ್ಬರೂ ಉಭಯ ನಾಯಕರ ನಡುವಿನ ತಿಕ್ಕಾಟ ಬೂದಿ ಮುಚ್ಚಿದ ಕೆಂಡದಂತೆ ಉಳಿದಿದೆ.
ಇದನ್ನೂ ಓದಿ: ಮತದಾರ ಪಟ್ಟಿಯಲ್ಲಿ ನಕಲಿ ಹೆಸರು; ಬಿಹಾರ ಮುಖ್ಯಮಂತ್ರಿ ಸೇರಿ 14 ಜನರ ವಿರುದ್ಧ ದೂರು ದಾಖಲು!

