ಸಾಹುಕಾರನ ರಾಸಲೀಲೆ ಪ್ರಕರಣ : ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ..!
ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವೀಡಿಯೋ ರಿಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಕ್ಕೆ ಮುಜುಗರ ಆಗಬಾರದೆಂದು ಸಚಿವ ಸ್ಥಾನಕ್ಕೆ ರಮೆಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.
ವೀಡಿಯೋ ರಿಲೀಸ್ ಆಗುತ್ತಿದ್ದಂತೆ ವಿಪಕ್ಷ ನಾಯಕರಿಂದ ಮತ್ತು ಸಾರ್ವಜನಿಕರಿಂದ ಸಚಿವರ ರಾಜೀನಾಮೆಗೆ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಇದರ ಹಿನ್ನಲೆಯಲ್ಲಿ ರಮೇಶ್ ರಾಜೀನಾಮೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ರಮೇಶ್ ಸಿಎಂಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಕೇಸ್ ಗೆದ್ದು ಬಂದ ನಂತರ ಮತ್ತೆ ಸಚಿವ ಸ್ಥಾನಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ರಾಜೀನಾಮೆಗೆ ಕಾರಣವನ್ನು “ಪಕ್ಷಕ್ಕೆ ನನ್ನಿಂದ ಮುಜುಗರ ಆಗಬಾರದು” ಎನ್ನುವ ಕಾರಣ ನೀಡಿ ರಾಜೀನಾಮೆ ಪತ್ರವನ್ನು ಸಿಎಂ ಯಡಿಯೂರಪ್ಪ ನವರಿಗೆ ಕಳುಹಿಸಿದ್ದಾರೆ.
ಇಷ್ಟು ಮಾತ್ರವಲ್ಲ ಮುಂಬರುವ ಚುನಾವಣೆಗೆ ತಮ್ಮಿಂದ ತೊಂದರೆಯಾಗಬಾರದು. ಆ ಒಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ನಿನ್ನೆಯಷ್ಟೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವೀಡಿಯೋ ರಿಲೀಸ್ ಆದ ಬೆನ್ನಲ್ಲೆ ಇಂದು ಅವರ ರಾಜೀನಾಮೆಗೆ ಭಾರೀ ಒತ್ತಡ ಕೇಳಿಬಂದಿತ್ತು. ಇದಕ್ಕೆ ಸಿದ್ಧರಾಮಯ್ಯ ಕೂಡ, ” ನಿಮಗೆ ನಾಚಿಕೆ ಮಾನ ಮರಿಯಾದೆ ಇದ್ದರೆ ರಾಜೀನಾಮೆ ಪಡೆಯಿರಿ” ಎಂದು ಹೇಳಿದ್ದರು.
ಸಿಡಿ ವಿಚಾರಕ್ಕೆ ತಮ್ಮದೇನು ಪಾತ್ರವಿಲ್ಲ. ತಪ್ಪೇ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಕೊನೆಗೂ ರಾಜೀನಾಮೆ ಕೊಟ್ಟಿದ್ದಾರೆ.
ರಮೇಶ್ ರಾಜೀನಾಮೆ ನೀಡಿದ ಬೆನ್ನಲ್ಲೆ ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿ ನಿಸ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ದೂರುದಾರ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.

