ದೆಹಲಿ ಉಪಚುನಾವಣೆ; ನಾಲ್ಕರಲ್ಲಿ AAP, ಒಂದರಲ್ಲಿ ಕಾಂಗ್ರೆಸ್‌ ಗೆಲುವು; BJPಗೆ ಸೊನ್ನೆ!

ದೆಹಲಿ ಮಹಾನಗರ ಪಾಲಿಕೆಯ ಐದು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ನಾಲ್ಕು ವಾರ್ಡ್‌ಗಳನ್ನು ಎಎಪಿ ಪಕ್ಷ ಗೆದ್ದುಕೊಂಡಿದ್ದು, ಒಂದರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಫೆಬ್ರವರಿ 28 ರಂದು ನಡೆದ ಐದು ಪುರಸಭೆ ವಾರ್ಡ್‌ಗಳಿಗೆ ಉಪಚುನಾವಣೆ ನಡೆದಿತ್ತು. ಎಎಪಿ ಅಭ್ಯರ್ಥಿಗಳು ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಚೌಹಾಣ್ ಬಂಗಾರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಐದು ವಾರ್ಡ್‌ಗಳಲ್ಲಿ ನಾಲ್ವರು ಎಎಪಿ ಮತ್ತು ಶಾಲಿಮಾರ್ ಬಾಗ್ ನಾರ್ತ್‌ನಲ್ಲಿ ಒಬ್ಬ ಬಿಜೆಪಿ ಕೌನ್ಸಿಲರ್ ಇದ್ದರು.

’ದೆಹಲಿಯ ಜನರು ಬಿಜೆಪಿಯಿಂದ ಬೇಸರಗೊಂಡಿದ್ದಾರೆ. ಅದಕ್ಕೆ ಈ ಚುನಾವಣೆಯೇ ಅದರ ಸೂಚನೆಯಾಗಿದೆ. 2022 ರ ದೆಹಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿ ಉಪ ಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಎಎಪಿ ಅಭ್ಯರ್ಥಿ ಮೊಹಮ್ಮದ್ ಇಶ್ರಕ್ ಖಾನ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಚೌಧರಿ ಜುಬೈರ್ ಅಹ್ಮದ್ ಅವರು ಚೌಹಾಣ್ ಬಂಗಾರ್‌ ವಾರ್ಡ್‌ನಲ್ಲಿ 10,642 ಮತಗಳಿಂದ ಜಯ ಸಾಧಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಶಾಲಿಮಾರ್ ಬಾಗ್ (ಉತ್ತರ) ವಾರ್ಡ್‌ ಮಹಿಳೆ ಮೀಸಲು ಕ್ಷೇತ್ರವಾಗಿತ್ತು. ಎಎಪಿಯ ಸುನೀತಾ ಮಿಶ್ರಾ ವಾರ್ಡ್ ನಂ 62 ಓ, ಶಾಲಿಮಾರ್ ಬಾಗ್ ನಾರ್ತ್‌ನಿಂದ ಬಿಜೆಪಿ ಪ್ರತಿಸ್ಪರ್ಧಿ ಸುರ್ಬಿ ಜಾಜು ಅವರನ್ನು 2705 ಮತಗಳಿಂದ ಸೋಲಿಸಿದ್ದಾರೆ.

ಎಎಪಿ ಅಭ್ಯರ್ಥಿಗಳಾದ ತ್ರಿಲೋಕ್‌ಪುರಿಯಲ್ಲಿ ವಿಜಯ್ ಕುಮಾರ್ ಮತ್ತು ರೋಹಿಣಿ-ಸಿ ಯಲ್ಲಿ ರಾಮ್ ಚಂದರ್ ಕೂಡ ತಮ್ಮ ಹತ್ತಿರದ ಪ್ರತಿಸ್ಪರ್ಧಿಗಳಾದ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಆರಾಮದಾಯಕ ಗೆಲುವು ಸಾಧಿಸಿದ್ದಾರೆ.

2022 ರಲ್ಲಿ ನಡೆಯುವ ದೆಹಲಿ ಮಹಾನಗರ ಪಾಲಿಕೆಯ ಎಲ್ಲಾ 272 ವಾರ್ಡ್‌ಗಳ ಚುನಾವಣೆಗೆ ಈ ಉಪಚುನಾವಣೆಯನ್ನು ಸೆಮಿಫೈನಲ್ ಎಂದು ಪರಿಗಣಿಸಲಾಗಿತ್ತು.

ಇದನ್ನೂ ಓದಿ: ಗುಜರಾತ್ ಚುನಾವಣೆ‌: BJPಗೆ ಭರ್ಜರಿ ಗೆಲುವು; ಕಾಂಗ್ರೆಸ್‌ಗೆ ಭಾರೀ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights