ಕೇಂದ್ರ ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್‌ ಅಧಿಕಾರಿ ರಾಜೀವ್ ಕುಮಾರ್ ನೇಮಕ!

ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಐಎಎಸ್‌ ಅಧಿಕಾರಿ ರಾಜೀವ್ ಕುಮಾರ್ ಅವರು ಕೇಂದ್ರ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಚುನಾವಣಾ ಅಧಿಕಾರಿಯಾಗಿದ್ದ ಅಶೋಕ್‌ ಲವಾಸಾ ಅವರ ಅಧಿಕಾರಿವಧಿ ಸಂವಿಧಾನದ 324ನೇ ವಿಧಿಯ ಉಪವಿಧಿ (2) ರ ಅನ್ವಯ ಆಗಸ್ಟ್ 31ಕ್ಕೆ ಅಂತ್ಯಗೊಂಡಿದ್ದ, ಅವರ ಸ್ಥಾನಕ್ಕೆ ರಾಜೀವ್ ಕುಮಾರ್‌ ಅವರನ್ನು ರಾಷ್ಟ್ರಪತಿ ರಾಮ್‌ನಾಥ್‌ ಕೊವಿಂದ್‌ ಅವರು ನೇಮಕ ಮಾಡಿದ್ದಾರೆ.

ನೇಮಕಗೊಂಡ ನಂತರ ಇಂದು ರಾಜೀವ್‌ ಕುಮಾರ್‌ ಅವರು ಇಂದು ಅಧಿಕಾರ ಸ್ವೀಕರಸಿದ್ದಾರೆ. ರಾಜೀವ್ ಕುಮಾರ್ 1984ರಲ್ಲಿ ಐಎಎಸ್‌ ತರಬೇತಿ ಪಡೆದು ಅಧಿಕಾರಿಯಾಗಿದ್ದರು. ಜಾರ್ಖಂಡ್‌ ಮೂಲದ ಇವರು ಸಾರ್ವಜನಿಕ ನೀತಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ 30 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.

ರಾಜೀವ್ ಕುಮಾರ್ ಅವರನ್ನು ಕಳೆದ ವರ್ಷ ಜುಲೈನಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಅವರ ಸೇವಾವಧಿ ಕೊನೆಗೊಡಂಡಿತ್ತು. ನಂತರದಲ್ಲಿ ನಿನ್ನೆ ಅವರನ್ನು ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.


ಇದನ್ನೂ ಓದಿ: ಸುಗಂಧಿ ಬೇರುಗಳು: ಬಾದಲ್ ಸರ್ಕಾರ್ ಅವರ ‘ಏವಂ ಇಂದ್ರಜಿತ: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ’

Spread the love

Leave a Reply

Your email address will not be published. Required fields are marked *