ಗುಜರಾತ್ ಚುನಾವಣೆ‌: BJPಗೆ ಭರ್ಜರಿ ಗೆಲುವು; ಕಾಂಗ್ರೆಸ್‌ಗೆ ಭಾರೀ ಮುಖಭಂಗ!

ಗುಜರಾತ್‌ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಚುನಾವಣೆ ನಡೆದ ಎಲ್ಲಾ 31 ಜಿಲ್ಲಾ ಪಂಚಾಯತಿಗಳನ್ನೂ ಗೆದ್ದಿದೆ. ಅಲ್ಲದೆ, 81 ಪುರಸಭೆಗಳ ಪೈಕಿ 70 ಪುರಸಭೆಗಳನ್ನೂ ಮತ್ತು 231 ತಾಲ್ಲೂಕು ಪಂಚಾಯತಿಗಳ ಪೈಕಿ 200ಕ್ಕೂ ಹೆಚ್ಚು ಪಂಚಾಯತಿಗಳನ್ನು ಗೆದ್ದುಕೊಂಡಿದೆ.

ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಕೇವಲ ಒಂದು ಪುರಸಭೆ ಮತ್ತು 18 ತಾಲ್ಲೂಕು ಪಂಚಾಯಿತಿಗಳಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಿದ್ದು, ಭಾರೀ ಪ್ರಮಾಣದ ಸೋಲನ್ನು ಅನುಭವಿಸಿದೆ. ಆರು ಪುರಸಭೆಗಳು ಮತ್ತು 15 ತಾಲ್ಲೂಕು ಪಂಚಾಯಿತಿಗಳಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತ ಪಡೆದಿಲ್ಲವಾದ್ದರಿಂದ, ಅವುಗಳ ಆಡಳಿತ ಯಾರ ವಶವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮೂರು ರೀತಿಯ ಸ್ಥಳೀಯ ಸಂಸ್ಥೆಗಳ ಒಟ್ಟು 8,470 ಸ್ಥಾನಗಳಲ್ಲಿ, ಕೇಸರಿ ಪಕ್ಷವು 6,236 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ 1,805 ಸ್ಥಾನಗಳನ್ನು ಗಳಿಸಿದೆ. ಹೊಸದಾಗಿ ಪ್ರವೇಶಿಸಿದ ಆಮ್ ಆದ್ಮಿ ಪಾರ್ಟಿ (ಎಎಪಿ) ಮತ್ತು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂಐಎಂ) ಎರಡು ಪಕ್ಷಗಳು ಕ್ರಮವಾಗಿ 42 ಮತ್ತು 17 ಸ್ಥಾನಗಳನ್ನು ಗೆದ್ದಿದ್ದು, ತಮ್ಮ ಅಸ್ತಿತ್ವದ ಖಾತೆ ತೆರೆದಿವೆ.

ಉಳಿದ ನಾಲ್ಕು ಸ್ಥಾನಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

ಫೆಬ್ರವರಿ 28 ರಂದು ಗುಜರಾತ್‌ನಲ್ಲಿ 81 ಪುರಸಭೆಗಳು, 31 ಜಿಲ್ಲಾ ಪಂಚಾಯತ್ ಮತ್ತು 231 ತಾಲ್ಲೂಕು ಪಂಚಾಯತ್‌ಗಳಿಗೆ ಮತದಾನ ನಡೆದಿತ್ತು.

ಇದನ್ನೂ ಓದಿ: ಅಮರಿಂದರ್‌ ಪಾಳಯಕ್ಕೆ ಪ್ರಶಾಂತ್‌ ಕಿಶೋರ್; ದೀದಿ ಸಖ್ಯ ತೊರೆದ ರಾಜಕೀಯ ತಜ್ಞ: BJP ಲೇವಡಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights