ಬಿಗ್ ಬಾಸ್ ಸೀಸನ್ 8: ನಟ ಯಶ್ ನಟಿ ನಿಧಿ ಸುಬ್ಬಯ ಮನೆಗೆ ಪಟಾಕಿ ಎಸೆದಿದ್ರಂತೆ…

ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭಗೊಂಡು ಒಂಟಿ ಮನೆಗೆ ಭರ್ಜರಿ ಎಂಟ್ರಿಕೊಟ್ಟ ಸೆಲೆಬ್ರಿಟಿಗಳು ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತಿದ್ದಾರೆ. ಈ ಮಧ್ಯೆ ನಟಿ ನಿಧಿ ಸುಬ್ಬಯ ಅವರು ಹುಬ್ಬೇರಿಸುವ ಹೇಳಿಕೆಯೊಂದನ್ನ ನೀಡಿದ್ದಾರೆ.

ಹೌದು.. ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳು ಮಾತನಾಡುತ್ತಾ ಕುಳಿತಾಗ ನಿಧಿ ತಮಗೆ ಪ್ರಪೋಸ್ ಮಾಡಿದವರಿಗೆ ಯಾವ ರೀತಿ ರಿಯಾಕ್ಟ್ ಮಾಡ್ತಾಯಿದ್ರು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ತಾವು ಯಾರೋ ಪ್ರೇಮಿಗೆ ರೇಗಿದ್ದರಿಂದ ತಮ್ಮ ಮನೆಗೆ ಪಟಾಕಿ ಸರಮಾಲೆ ಹಾಕಲಾಗಿತ್ತು. ಆದರೆ ನಿಧಿ ಮನೆಯಲ್ಲಿ ಪಟಾಕಿ ಹಾಕಿದವರು ಯಾರು ಎಂಬುದು ಮಾತ್ರ ಹಲವಾರು ವರ್ಷ ತಿಳಿದಿರಲಿಲ್ಲ. ನಿಧಿ ನಟಿಯಾಗಿ ಶೂಟಿಂಗ್ ನಲ್ಲಿದ್ದಾಗ ನಟ ಯಶ್ ಬಂದು ನಿಧಿಯವರಿಗೆ ನಿಮ್ಮ ಮನೆಗೆ ಪಟಾಕಿ ಹಾಕಿದವನು ನಾನೇ ಎಂದು ಹೇಳಿದ್ದರಂತೆ.

ಈ ವಿಚಾರವನ್ನು ಸ್ವತ: ನಿಧಿ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾರೆ. ಪಟಾಕಿಯಿಂದ ಕರ್ಟನ್ ಸುಟ್ಟು ಹೋಗಿ ಈಗಲೂ ನಿಧಿ ಮನೆಯಲ್ಲಿ ಅವರ ಅಜ್ಜಿ ಯಶ್ ಗೇಳು ಕರ್ಟನ್ ತಂದು ಕೊಡಲು ಎಂದು ರೇಗಿಸುತ್ತಾರಂತೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights