‘ರಾಜೀನಾಮೆ ಅಂಗೀಕರಿಸಿದರೆ ನಿಮ್ಮ ಸಿಡಿ ಬಿಡುಗಡೆ’ ರಮೇಶ್ ಸಹೋದರನಿಂದ ಸಿಎಂಗೆ ಎಚ್ಚರಿಕೆ!
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ವಿಚಾರ ಸಿಎಂ ಯಡಿಯೂರಪ್ಪ ಅವರಿಗೆ ನುಂಗಲಾದರ ತುತ್ತಾಗಿದೆ. ಇತ್ತ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಿದ್ದಂತೆ ಸಿಎಂಗೆ ರಾಜೀನಾಮೆ ಅಂಗೀಕರಿಸದಂತೆ ಒತ್ತಡ ಹೆಚ್ಚಾಗುತ್ತಿದೆ.
ಹೌದು… ರಾಸಲೀಲೆ ಸಿಡಿ ವಿಚಾರಕ್ಕೆ ಪಕ್ಷ ಮುಜುಗರಕ್ಕೀಡಾಗಬಾರದಂದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಆಕ್ರೋಶಗೊಂಡ ರಮೆಶ್ ಬೆಂಬಲಿಗರು ರಾಜೀನಾಮೆ ಅಂಗೀಕರಿಸದಂತೆ ಗೋಕಾಕ್ ನಲ್ಲಿ ಕಲ್ಲು ಹಿಡಿದು ಬಲವಂತವಾಗಿ ಮಾರ್ಕೇಟ್ ಬಂದ್ ಮಾಡಿದ್ದಾರೆ. ಮತ್ತೊಂದೆಡೆ ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಸಿಎಂ ಯಡಿಯೂರಪ್ಪ ನವರಿಗೆ ರಾಜೀನಾಮೆ ಅಂಗೀಕರಿಸಿದರೆ ನಿಮ್ಮ ಸಿಡಿ ಬಿಡಿಗಡೆ ಮಾಡುತ್ತೇನೆಂದು ಎಚ್ಚರಿಕೆ ಕೊಟ್ಟಿದ್ದಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಜನಧ್ವನಿ ರ್ಯಾಲಿಯಲ್ಲಿ ಹೇಳಿದ್ದಾರೆ.
ಮಾತ್ರವಲ್ಲದೇ ರಮೇಶ್ ಸಿಡಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ‘ಆ ದೃಶ್ಯವನ್ನು ನೋಡೋಕು ಅಸಯ್ಯ ಆಗುತ್ತದೆ. ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಮಂತ್ರಿಯಾದ ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳುತ್ತಾನಂತೆ, ಯಡಿಯೂರಪ್ಪ ರಾಜೀನಾಮೆ ಅಂಗೀಕಾರ ಮಾಡಿದರೆ ನಿನ್ ಸಿಡಿ ಬಿಡುಗಡೆ ಮಾಡುದ್ದೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನಂತೆ. ಇಂಥಹ ಮಾನಗೆಟ್ಟವರು ರಾಜಕೀಯದಲ್ಲಿ ಇರಬೇಕಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಸಿಟಿ ವಿಚಾರ ಬಿಜೆಪಿ ಪಕ್ಷವನ್ನು ಭಾರೀ ಮುಜುಗರಕ್ಕೀಡು ಮಾಡಿದ್ದು ಭಾರೀ ಸಂಕಷ್ಟಕ್ಕೆ ಸಿಲುಕಿಸಿದೆ. ನಿನ್ನೆಯಿಂದ ರಮೇಶ್ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಆದರೀಗ ರಾಜೀನಾಮೆ ಅಂಗೀಕರಿಸದಂತೆ ಒತ್ತಡ ಹೆಚ್ಚಾಗಿದೆ. ಸಿಎಂ ಯಾವ ಕ್ರಮ ಕೈಗೊಳ್ಳುತ್ತಾರೆನ್ನುವುದನ್ನು ಕಾದು ನೋಡಬೇಕಿದೆ.

