ಅಸ್ಸಾಂನಲ್ಲಿ‌ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 50% ಮೀಸಲಾತಿ: ಕಾಂಗ್ರೆಸ್‌ ಭರವಸೆ

ಅಸ್ಸಾಂನಲ್ಲಿ ಪ್ರತಿಪಕ್ಷವಾಗಿರುವ ‘ಮಹಾಜೋತ್’ ಅಥವಾ ಮಹಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡುತ್ತದೆ ಎಂದು ಕಾಂಗ್ರೆಸ್‌ ಘೋಷಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್, ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟವು ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮತ್ತು ಯುವಜನರ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಲಿದೆ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಯು ಸರ್ಕಾರ ರಚಿಸಿದರೆ ನಾವು ಮಹಿಳೆಯರಿಗೆ ಶೇಕಡಾ 50 ಮೀಸಲಾತಿಯನ್ನು ಜಾರಿಗೊಳಿಸುತ್ತೇವೆ. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಕೈಗೆತ್ತಿಕೊಳ್ಳಲಿರುವ ಕೆಲಸಗಳಲ್ಲಿ ಇದೂ ಒಂದು” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಮಹಾ ಮೈತ್ರಿಕೂಟವು ಹೊಣೆಗಾರಿಕೆ ಮತ್ತು ಉದ್ಯೋಗಗಳ ಖಾತರಿಯನ್ನು ಜನರಿಗೆ ನೀಡಲಿದೆ ಎಂದು  ದೇವ್ ಪ್ರತಿಪಾದಿಸಿದ್ದಾರೆ.

“ಅಸ್ಸಾಂನ ಯುವಜನರು ಮತ್ತು ಮಹಿಳೆಯರು ದಾನವನ್ನು ಬಯಸುವುದಿಲ್ಲ. ಅವರು ಉದ್ಯೋಗಾವಕಾಶಗಳನ್ನು ಬಯಸುತ್ತಾರೆ. ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಬಯಸುತ್ತಾರೆ” ಎಂದು ದೇವ್ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ ಚುನಾವಣೆ: ಇತ್ತೀಚೆಗೆ BJP ಸೇರಿದ ಶ್ರೀಧರನ್ ಮುಖ್ಯಮಂತ್ರಿ ಅಭ್ಯರ್ಥಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights